ಕಚೇರಿಗೆ ಅಧಿಕಾರಿಗಳ ಪ್ರವೇಶಕ್ಕೆ ನಿರ್ಬಂಧ

ಜಗಳೂರು: ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಹಣ ಪಾವತಿ ಮಾಡದೇ, ಅಧಿಕಾರಿಗಳು ಮೂರು ತಿಂಗಳಿಂದ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ ಚಿಕ್ಕ ಉಜ್ಜಯಿನಿ ಗ್ರಾಮಸ್ಥರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

ಬೆಳಗ್ಗೆ ಕಚೇರಿಗೆ ಬಂದ ಅಧಿಕಾರಿ ಮತ್ತು ಸಿಬ್ಬಂದಿ ಒಳಗೆ ಹೋಗದಂತೆ ಗ್ರಾಮಸ್ಥರು ಗೇಟ್ ಹಾಕಿ ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಕ್ಯಾಸೇನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಚಿಕ್ಕ ಉಜ್ಜಯಿನಿ ಗ್ರಾಮದಲ್ಲಿ ಖಾತ್ರಿ ಯೋಜನೆಯಡಿ ಕಳೆದ ಮೂರ‌್ನಾಲ್ಕು ತಿಂಗಳಿಂದ ನೂರಾರು ಜನರು ಕೆರೆ ಹೂಳೆತ್ತಿದ್ದಾರೆ. ಕೆಲಸ ಮುಗಿಸಿದರೂ ಖಾತೆಗಳಿಗೆ ಮಾತ್ರ ಹಣ ಜಮೆಯಾಗಿಲ್ಲ. ಈ ಹಿಂದೆ ತಾಪಂ ಇಒ ಅವರ ಗಮನಕ್ಕೂ ತರಲಾಗಿತ್ತು. ಹಣ ಖಾತೆಗೆ ಹಾಕಿಸುವುದಾಗಿ ಭರವಸೆ ನೀಡಿದ್ದರು. ಅಲ್ಲಿಂದ ಇಲ್ಲಿವರೆಗೂ ಹಣ ಬಂದಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದೂರಿದರು.