ನಿದ್ದೆಗೆಟ್ಟು ರೊಟ್ಟಿ ಸುಟ್ಟ ಮಹಿಳೆಯರು

ಜಗಳೂರು: ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮಸ್ಥರು ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಮೂರು ಸಾವಿರ ಜೋಳದ ರೊಟ್ಟಿ, ಚಟ್ನಿಪುಡಿ, ಅಕ್ಕಿ, ಬೇಳೆ, ಸಾಂಬಾರ ಪುಡಿ ಹಾಗೂ ಪಂಚೆ, ಸೀರೆ, ಟವೆಲ್, ಬೆಡ್‌ಶೀಟ್‌ಗಳನ್ನು ಉದಾರ ದೇಣಿಗೆ ನೀಡಿದ್ದಾರೆ.

ಗ್ರಾಮದ ಮಹಿಳೆಯರು ರಾತ್ರಿಯಿಡಿ ನಿದ್ರೆ ಬಿಟ್ಟು 3 ಸಾವಿರ ರೊಟ್ಟಿ ಸುಟ್ಟುಕೊಟ್ಟಿದ್ದಾರೆ. ಉಳಿದಂತೆ 500 ಸೀರೆ, 150 ಪಂಚೆ, 77 ಟವೆಲ್, 31 ಬೆಡ್ ಶೀಟ್, 30 ಸ್ವೆಟರ್, 80 ಕೆಜಿ ತೂಕದ 15 ಚೀಲ ಅಕ್ಕಿ, 3 ಚೀಲ ಬೇಳೆ, ಸೋಪು, ನೀರಿನ ಬಾಟಲುಗಳು, ಹಲ್ಲುಜ್ಜುವ ಬ್ರಷ್ ಮತ್ತಿತರ ದಿನಬಳಕೆ ವಸ್ತುಗಳನ್ನು ಸಂಗ್ರಹಿಸಿ ತಹಸೀಲ್ದಾರ ಹುಲ್ಲಮನಿ ತಿಮ್ಮಣ್ಣ ಅವರಿಗೆ ನೀಡಿ ನೆರೆ ಸಂತ್ರಸ್ಥರಿಗೆ ತಲುಪಿಸಲು ಮನವಿ ಮಾಡಿದರು.

ತಾಲೂಕಿನಲ್ಲಿ ಮಳೆ, ಬೆಳೆ ಇಲ್ಲದಿದ್ದರೂ ಗ್ರಾಮಸ್ಥರು ನೆರೆ ಸಂತ್ರಸ್ತರಿಗೆ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಎಲ್ಲ ಪರಿಕರಗಳನ್ನು ಅವರಿಗೆ ತಲುಪಿಸಲಾಗುವುದು ಎಂದು ತಹಸೀಲ್ದಾರ್ ಹುಲ್ಲಮನಿ ತಿಮ್ಮಣ್ಣ ತಿಳಿಸಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಜ್ಜಯ್ಯ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಸದಸ್ಯ ವೀರೇಶ್, ಡಾ.ರಂಗಪ್ಪ, ಗ್ರಾಮದ ಗೌಡ್ರು ಗುರುಸಿದ್ದಪ್ಪ, ಮಲ್ಲಪ್ಪರ ಚನ್ನಬಸಪ್ಪ, ಕವಲರ್ ಚಂದ್ರಪ್ಪ, ಅಂಚೇರ್ ಬಸವರಾಜಪ್ಪ, ಗೌಡ್ರು ಪ್ರಕಾಶ್, ಬಸವರಾಜ್, ಅಹಮದ್ ಅಲಿ, ಗ್ರಾ.ಪಂ ಸದಸ್ಯ ಅಜ್ಜಯ್ಯ, ತಾ.ಪಂ ಅಧಿಕಾರಿ ತಿಮ್ಮೇಶ್, ಚಂದ್ರ, ಜಗದೀಶ್, ಪಾಲಯ್ಯ ಮತ್ತಿತರಿದ್ದರು.

Leave a Reply

Your email address will not be published. Required fields are marked *