ಕುಷ್ಟರೋಗ ಪತ್ತೆ ಹಚ್ಚುವ ಆಂದೋಲ

ಜಗಳೂರು: ದೇಹದ ಮೇಲೆ ಬಿಳಿ ಕಲೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಜಿ.ಓ.ನಾಗರಾಜ್ ಸಲಹೆ ನೀಡಿದರು.

ಆರೋಗ್ಯ ಇಲಾಖೆಯಿಂದ ಗೋಸಾಯಿ ಕಾಲನಿಯಲ್ಲಿ ಶನಿವಾರ ಕುಷ್ಟರೋಗ ಪತ್ತೆ ಹಚ್ಚುವ ಆಂದೋಲದಲ್ಲಿ ಮಾತನಾಡಿ, ಕುಷ್ಟ ರೋಗ ಭಯಾನಕ ಕಾಯಿಲೆ ಅಲ್ಲ. ಸಮರ್ಪಕವಾಗಿ ಚಿಕಿತ್ಸೆ ಪಡೆದುಕೊಂಡರೆ ಗುಣಮುಖರಾಗಬಹುದು ಎಂದರು.

ದೇಹದ ಯಾವುದೇ ಭಾಗದಲ್ಲಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು. ಅಶಾ ಕಾರ್ಯಕರ್ತೆಯರಾದ ರತ್ನಾ, ಶಿಲ್ಪಾ, ರಮ್ಯಾ, ಅನಿತಾ, ಆಶಾ, ಉಷಾ ಇತರರಿದ್ದರು.

Leave a Reply

Your email address will not be published. Required fields are marked *