ಕೆರೆ ಕಳೆ ತೆಗೆಸಲು 60 ಲಕ್ಷ ರೂ. ವೆಚ್ಚ

ಜಗಳೂರು: ಪಟ್ಟಣದ ಕೆರೆಯನ್ನು ನನ್ನ ಅವಧಿಯಲ್ಲಿ 1.75 ಕೋಟಿ ರೂ. ವೆಚ್ಚದಲ್ಲಿ ಹದ್ದುಬಸ್ತು ಮತ್ತು ಏರಿ ವಿಸ್ತರಣೆ ಮಾಡಲಾಗಿತ್ತು. ಆದರೆ, ಇದೀಗ ಅದೇ ಕೆರೆಯಲ್ಲಿ ಕೇವಲ ಕಳೆ ಕೀಳಿಸಲು 60 ಲಕ್ಷ ರೂ. ಲೆಕ್ಕ ತೋರಿಸಲಾಗುತ್ತಿದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಆರೋಪಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ನೆರೆ ಸಂತ್ರಸ್ತರಿಗೆ ದೇಣಿಗೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಜ್ಞಾನದ ಮಟ್ಟಿಗೆ ಗಿಡ, ಕಳೆ ತೆಗೆಸಲು ಇಷ್ಟು ವೆಚ್ಚ ಆಗಲು ಸಾಧ್ಯವೇ ಇಲ್ಲ. ಇದರಲ್ಲಿ ಅವ್ಯವಹಾರ ಆಗಿರುವುದು ಸ್ಪಷ್ಟ. ಈ ಕುರಿತು ಶಾಸಕ ರಾಮಚಂದ್ರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಸುಳ್ಳು ಭರವಸೆ ಹೇಳಿ ಜನರನ್ನು ವಂಚಿಸುವುದಲ್ಲ. ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದೆ. ಈಗ ತಾಲೂಕಿಗೆ ಅಪ್ಪರ್‌ಭದ್ರಾ ಯೋಜನೆ ಸೇರಿ ಇತರೆ ನೀರಾವರಿ ಯೋಜನೆಗಳನ್ನು ಜಾರಿಗೆ ತನ್ನಿ. ಅನಗತ್ಯ, ಆಧಾರರಹಿತ ಆಪಾದನೆ ಮಾಡುವುದನ್ನು ಕೈಬಿಡಿ ಎಂದು ಎಂದು ಶಾಸಕ ಎಸ್.ವಿ.ರಾಮಚಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಹಾಲಿ ಶಾಸಕರು ಮೌನವಹಿಸಿದ್ದಾರೆ: ಕ್ಷೇತ್ರದಲ್ಲಿ ಬರದ ಛಾಯೆ ಆವರಿಸಿದೆ. ಮಳೆಗಾಲದಲ್ಲೂ ನೂರಾರು ಗ್ರಾಮಗಳಲ್ಲಿ ಕುಡಿವ ನೀರಿನ ಹಾಹಾಕಾರವಿದೆ. ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು. ಅಧಿಕಾರಿವಿಲ್ಲದಿದ್ದಾಗ ಅಬ್ಬರಿಸಿದ್ದ ಹಾಲಿ ಶಾಸಕ ರಾಮಚಂದ್ರ ಈಗ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನೀಸಿದರು.

Leave a Reply

Your email address will not be published. Required fields are marked *