jagalur farmer protest on bank officers

ಜಗಳೂರಿನಲ್ಲಿ ರೈತರಿಂದ ಬಲವಂತದ ಸಾಲ ವಸೂಲಿ

ಜಗಳೂರು: ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ಕೆಲ ಅಧಿಕಾರಿಗಳು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಮಹಾತ್ಮ ಗಾಂಧಿ ಹಳೇ ವೃತ್ತ, ದಾವಣಗೆರೆ ರಸ್ತೆ, ಹೊಸ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಚಿರಂಜೀವಿ, ತಾಲೂಕಾಧ್ಯಕ್ಷ ಗಡಿ ಮಾಕುಂಟೆ ಬಸವರಾಜಪ್ಪ, ಗೌರವಾಧ್ಯಕ್ಷ ದಿಬ್ಬದಹಳ್ಳಿ ಗಂಗಾಧರಪ್ಪ, ನಗರ ಘಟಕ ಅಧ್ಯಕ್ಷ ರಾಜು ಬೈರಾನಾಯಕನಹಳ್ಳಿ, ಪ್ರಧಾನ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ಯರ‌್ಲಕಟ್ಟೆ ಕೆಂಚಪ್ಪ, ಚಿಕ್ಕಬನ್ನಿಹಟ್ಟಿ ಚಂದ್ರಪ್ಪ, ದೊಣೆಹಳ್ಳಿ ಲೋಕೇಶ್ ಇದ್ದರು.