ಜಗದೀಶ ಶೆಟ್ಟರ್ ಕಾರು ಅಪಘಾತ

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗುರುವಾರ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿಗೆ ಇನ್ನೊಂದು ಕಾರು ನಗರದ ಧರ್ಮನಾಥ ಭವನ ವೃತ್ತದ ಬಳಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅಪಾಯವಾಗಿಲ್ಲ. ಕಾರಿನಲ್ಲಿ ಶೆಟ್ಟರ್ ಮತ್ತು ಗನ್​ವ್ಯಾನ್ ಪ್ರಯಾಣಿಸುತ್ತಿದ್ದರು. ಅಪಘಾತ ಹಿನ್ನೆಲೆಯಲ್ಲಿ ಶೆಟ್ಟರ್ ಬೇರೊಂದು ಕಾರ್​ನಲ್ಲಿ ಸುವರ್ಣ ಸೌಧಕ್ಕೆ ತೆರಳಿದರು. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.