ಜಡೇಜಾ ಸ್ಫೋಟಕ ಅರ್ಧ ಶತಕ: 44 ಓವರ್​​ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡ ಭಾರತಕ್ಕೆ 178 ರನ್​​​​ ಗಳಿಕೆ

ಮ್ಯಾಂಚೆಸ್ಟರ್​: ಟೀಂ ಇಂಡಿಯಾದ ಆಲ್​​ರೌಂಡರ್​ ರವೀಂದ್ರ ಜಡೇಜಾ ಅವರ ಸ್ಫೋಟಕ ಅರ್ಧ ಶತಕದಿಂದ ಭಾರತ 44 ಓವರ್​​ ಅಂತ್ಯಕ್ಕೆ 6 ವಿಕೆಟ್​​ ಕಳೆದುಕೊಂಡು 178 ರನ್​​ ಗಳಿಸಿದೆ.

ಇಲ್ಲಿನ ಎಮಿರೇಟ್ಸ್​​​​​​ ಓಲ್ಡ್​​ ಟ್ರಾಫೋರ್ಡ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್​​ ಮೊದಲು ಸೆಮಿಫೈನಲ್​ನಲ್ಲಿ ಮೊದಲು ಬ್ಯಾಟ್​​ ಮಾಡಿದ ಕಿವೀಸ್​ನ 240 ರನ್​ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭದಲ್ಲಿಯೇ ಆಘಾತಕ್ಕೊಳಗಾಯಿತು.

ಭಾರತದ ಕೆ.ಎಲ್​ ರಾಹುಲ್(1) ​, ರೋಹಿತ್​​ ಶರ್ಮಾ(1) , ವಿರಾಟ್​ ಕೊಹ್ಲಿ(1), ದಿನೇಶ್​​ ಕಾರ್ತಿಕ್​​ (6), ರಿಷಬ್​​ ಪಂತ್​ (32) ಹಾಗೂ ಹಾರ್ದಿಕ್​​ ಪಾಂಡ್ಯ (32) ವಿಕೆಟ್​ ಕಳೆದುಕೊಂಡರು.

ಬಳಿಕ ಕ್ರೀಸ್​ಗೆ ಬಂದ ಮಹೇಂದ್ರ ಸಿಂಗ್​ ಧೋನಿ (30*) ಹಾಗೂ ರವೀಂದ್ರ ಜಡೇಜಾ (59*) ಅವರ ಭರ್ಜರಿ ಪ್ರದರ್ಶನದಿಂದ ತಂಡ ಗೆಲುವಿನತ್ತ ಹೆಜ್ಜೆ ಹಾಕಿದೆ.

ನ್ಯೂಜಿಲೆಂಡ್​ನ ಮ್ಯಾಟ್​​ ಹೆನ್ರಿ 3, ಮಿಚೆಲ್​​ ಸ್ಯಾಂಟ್ನರ್​ 2 ಹಾಗೂ ಟ್ರೆಂಟ್​​ ಬೌಲ್ಟ್​​​ ಒಂದು ವಿಕೆಟ್​​ ಕಬಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *