ಸುದೀಪ್ ಅಭಿನಯದ ಫ್ಯಾಂಟಮ್​ನಲ್ಲಿ ಜಾಕ್​ಲೀನ್ ಡಾನ್ಸ್

ಬೆಂಗಳೂರು: ‘ಕಿಚ್ಚ’ ಸುದೀಪ್ ನಟಿಸುತ್ತಿರುವ ‘ಫ್ಯಾಂಟಮ್ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲ, ಬಹುಭಾಷೆಗಳಲ್ಲಿ ತೆರೆಕಾಣಲಿದೆ ಎಂಬ ವಿಚಾರ ಈಗಾಗಲೇ ಗೊತ್ತಿರುವ ವಿಚಾರ. ಇದೀಗ ಇದೇ ಸಿನಿಮಾಕ್ಕೆ ಬಾಲಿವುಡ್​ನ ಖ್ಯಾತ ನಟಿಯ ಆಗಮನವೂ ಅಧಿಕೃತವಾಗಿದೆ. ಸುದೀಪ್ ಜತೆ ಜಾಕ್​ಲೀನ್ ಫರ್ನಾಂಡೀಸ್ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹೊರಬಿದ್ದಿತ್ತಾದರೂ, ಅದು ಅಂತಿಮವಾಗಿರಲಿಲ್ಲ. ಈಗ ಚಿತ್ರದ ನಿರ್ಮಾಪಕ ಜಾಕ್ ಮಂಜು, ಜಾಕ್​ಲೀನ್ ಆಗಮನದ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಸುದೀಪ್ ಅವರೊಂದಿಗೆ ಜಾಕ್​ಲೀನ್ ಹಾಡಿನಲ್ಲಿ ಕಾಣಿಸುವುದು ಅಧಿಕೃತವಾಗಿದೆ. ಅವರು … Continue reading ಸುದೀಪ್ ಅಭಿನಯದ ಫ್ಯಾಂಟಮ್​ನಲ್ಲಿ ಜಾಕ್​ಲೀನ್ ಡಾನ್ಸ್