More

    ಹಣ್ಣು ತಿಂದು ಬಹುಮಾನ ಪಡೆದರು, ಸಾವಯವ ಮೇಳ ಹಲಸಿನ ಹಬ್ಬದ ವಿಶೇಷ

    ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಸಭಾಭವನದಲ್ಲಿ ಭಾನುವಾರ ಸಹಜ ಸಮೃದ್ಧ ವತಿಯಿಂದ ಏರ್ಪಡಿಸಿದ್ದ ಹಲಸಿನ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಹಲವು ಜನ ಭಾಗವಹಿಸಿ ಮೆರಗು ತಂದರು.

    ಮಹಿಳೆಯರು, ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ಪರ್ಧೆಯ ಮಜಾ ಹೆಚ್ಚಿಸಿದರು.
    ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಯಿತು.

    ಒಂದು ಪ್ಲೇಟಿನಲ್ಲಿ ಎಲ್ಲರಿಗೂ ಹಲಸಿನ ಹಣ್ಣಿನ ತೊಳಿಗಳನ್ನು ಬಿಡಿಸಿ ಸಮನಾಗಿ ಇಡಲಾಗಿತ್ತು. ಏಕಕಾಲಕ್ಕೆ ತಿನ್ನಲು ಆರಂಭಿಸಿ ಮೊದಲು ಯಾರು ತಿಂದು ಮುಗಿಸುತ್ತಾರೋ ಅವರೇ ವಿಜೇತರು ಎಂದು ಘೋಷಣೆ ಮಾಡಲಾಯಿತು.

    ಸಹಜ ಸಮೃದ್ಧ ಸಂಸ್ಥೆಯವರು ಆಯೋಜಿಸಿರುವ ಎರಡು ದಿನಗಳ ಸಾವಯವ ಮೇಳ ಹಾಗೂ ಹಲಸಿನ ಹಬ್ಬವು ಮೂರುಸಾವಿರ ಮಠದ ಆವರಣದಲ್ಲಿ ಹಲಸಿನ ಲೋಕವನ್ನೇ ಅನಾವರಣ ಮಾಡಿತು.

    ಭಾನುವಾರ ರಜಾ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ವೀಕ್ಷಣೆ ಮಾಡಿದರು. ಅನೇಕರು ಹಲಸಿನ ಹಣ್ಣು ಖರೀದಿಸಿದರು.

    ವಿಶೇಷ ತಳಿಗಳು, ಮಹಿಳಾ ಸ್ವಸಹಾಯ ಸಂಗಳು ತಯಾರಿಸಿದ ಹಲಸಿನ ವಿವಿಧ ಖಾದ್ಯಗಳು ಮಾರಾಟವಾದವು. ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಮಾರಾಟವೂ ಇತ್ತು.
    ಮೇಳ ಸಂಯೋಜಕ ಸಿ. ಶಾಂತಕುಮಾರ್ ಸ್ಪರ್ಧೆ ಹಾಗೂ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts