ಜಾಕ್ ಮಾ ರಾಜೀನಾಮೆ: ಏಷ್ಯಾದ ಎರಡನೇ ಶ್ರೀಮಂತ ಉದ್ಯಮಿ

ಶಾಂಘೈ: ವಿಶ್ವದ ಪ್ರಖ್ಯಾತ ಇ- ಕಾಮರ್ಸ್ ಸಂಸ್ಥೆಯಾಗಿರುವ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಕಂಪನಿಯ ಸಹ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷ ಜಾಕ್ ಮಾ ರಾಜೀನಾಮೆ ನೀಡಿದ್ದಾರೆ. 55ನೇ ವಯಸ್ಸಿಗೆ ಪದತ್ಯಾಗ ಮಾಡುವುದಾಗಿ ಅವರು ಈ ಹಿಂದೆಯೇ ಘೋಷಿಸಿದ್ದರು.

ಕೇವಲ 20 ವರ್ಷಗಳಲ್ಲಿ ಅಲಿಬಾಬಾ ಸಂಸ್ಥೆಯನ್ನು ವಿಶ್ವಮಟ್ಟದಲ್ಲಿ ಹೆಸರುಗಳಿಸುವಂತೆ ಮಾಡಿದ್ದ ಜಾಕ್ ಮಾ ರಾಜೀನಾಮೆ ನಿರ್ಧಾರದಿಂದ ಅಲಿಬಾಬಾ ಕಂಪನಿಯ ಭವಿಷ್ಯ ಹೇಗೆ?, ಎತ್ತ? ಎಂಬ ಬಗ್ಗೆ ಎಲ್ಲರ ಗಮನ ನೆಟ್ಟಿದೆ. ಡ್ಯಾನಿಯಲ್ ಜಾಂಗ್ ಅಲಿಬಾಬಾ ಕಂಪನಿಯ ಸಿಇಒ ಆಗಿದ್ದು, ಜಾಕ್ ಮಾ ಸಲಹೆಗಳ ಮೂಲಕ ಕಂಪನಿ ಮುಂದುವರೆಸುವ ಭರವಸೆ ಹೊಂದಿದ್ದಾರೆ. ರಾಜೀನಾಮೆ ನೀಡಿದರೂ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕನಾಗಿ ಮುಂದುವರಿಯುವುದಾಗಿ ಜಾಕ್ ಮಾ ತಿಳಿಸಿದ್ದಾರೆ.

ಅದ್ದೂರಿ ಬೀಳ್ಕೊಡುಗೆ: ಚೀನಾದ ಹ್ಯಾಂಗ್​ರೆkೌ ಒಲಿಂಪಿಕ್ ಕ್ರೀಡಾಂಗಣದಲ್ಲಿ ಜಾಕ್ ಮಾಗೆ ಅದ್ದೂರಿ ಬೀಳ್ಕೊಡುಗೆ ಆಯೋಜಿಸಲಾಗಿದೆ. ಈ ಕ್ರೀಡಾಂಗಣದಲ್ಲಿ 80 ಸಾವಿರ ಜನರಿಗೆ ಆಸನದ ವ್ಯವಸ್ಥೆ ಇದೆ. ಜಾಕ್ ಮಾ 1999 ಫೆ. 21ರಂದು ಅಲಿಬಾಬಾ ಕಂಪನಿ ಹುಟ್ಟುಹಾಕಿದ್ದರು. ಇಂದು ಕಂಪನಿ 460 ಬಿಲಿಯನ್ ಡಾಲರ್ (-ಠಿ;33 ಲಕ್ಷ ಕೋಟಿ) ವಹಿವಾಟು ನಡೆಸುತ್ತಿದ್ದು, ಸುಮಾರು 1 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಜಾಕ್ ಮಾ ಚೀನಾದ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದು, 41.80 ಬಿಲಿಯನ್ ಡಾಲರ್ (-ಠಿ;3 ಲಕ್ಷ ಕೋಟಿ) ಆಸ್ತಿಯ ಒಡೆಯರಾಗಿದ್ದಾರೆ. ಏಷ್ಯಾದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ನಂತರ ಎರಡನೇ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *