ಹುಬ್ಬಳ್ಳಿ: ಅನೇಕ ಪ್ರಶ್ನೆಗಳಿಂದ ವಿಜ್ಞಾನ ಹುಟ್ಟಿಕೊಂಡಿದೆ, ಪ್ರಶ್ನೆಗಳನ್ನು ಕೇಳುವುದೇ ನಿಜವಾದ ವಿಜ್ಞಾನ ಎಂದು ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಇಲಾಖೆ ಜಂಟಿ ನಿರ್ದೇಶಕಿ ಸಾಧನಾ ಪೋತೆ ಹೇಳಿದರು.
ಇಲ್ಲಿಯ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕ್ರೀಡಾ ಹಾಗೂ ಸಾಂಸತಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಪರಿಶ್ರಮದಿಂದ ಅರ್ಥೈಸಿಕೊಂಡು ಓದಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಕ್ರೈಸ್ತ್ ವಿವಿಯ ಪ್ರಾಧ್ಯಾಪಕ ಡಾ. ಎಲ್. ಗಣೇಶ, ವಿದ್ಯಾರ್ಥಿಗಳು ಕುಳಿತು ಯೋಚಿಸಿದರೆ ಸಾಲದು, ಆತ್ಮವಿಶ್ವಾಸದಿಂದ ನಡೆಯಬೇಕು ಮತ್ತು ಸಾಧನೆಗೆ ಶಿಕ್ಷಣದ ಅವಶ್ಯಕತೆಯೊಂದಿಗೆ ಜ್ಞಾನದ ಅಗತ್ಯ ತುಂಬಾ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಸಮನಾಗಿ ಸ್ವೀಕರಿಸಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ, ಕಾಲೇಜಿನ ಸ್ಥಳ ದಾನಿಗಳ ಕುಟುಂಬದ ಚನ್ನಪ್ಪ ಜಾಬಿನ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಭಾಕರನ್, ಉಮೇಶ ದಿಡಗನ್ನವರ, ಸಿದ್ಧಾರ್ಥ, ಶ್ವೇತಾ, ಶ್ರೀನಿಧಿ ಯಲಬುರ್ಗಿ ಉಪಸ್ಥಿತರಿದ್ದರು.
ದ್ವೀತಿಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸೌಮ್ಯ ಕುರುಬಗಟ್ಟಿ, ಭಾಗ್ಯ ಕಠಾರೆ, ಪ್ರಿಯಾ ಎಸ್.ಎಚ್., ಜಾಕಿಯಾ ತಹಶೀಲ್ದಾರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಿ.ಆರ್. ವಾಮೋಡಿ ಸ್ವಾಗತಿಸಿದರು. ಉಪನ್ಯಾಸಕಿ ಸವಿತಾ ಎಸ್.ಎಚ್. ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಕ್ರೀಡಾ ವೇದಿಕೆ ಉಪಾಧ್ಯಕ್ಷ ಅಮ್ರಿತಾ ಅಣ್ಣಿಗೇರಿ ಪರಿಚಯಿಸಿದರು. ವೇಣುಗೋಪಾಲ ಎಚ್.ಆರ್. ವಂದಿಸಿದರು. ಉಪನ್ಯಾಸಕಿ ಗಿರಿಜಾ ಡಿ. ನಿರೂಪಿಸಿದರು.