Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಜಮ್ಮು ಕಾಶ್ಮೀರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿಗೆ ಆರಂಭಿಕ ಮುನ್ನಡೆ

Saturday, 20.10.2018, 3:40 PM       No Comments

ಶ್ರೀನಗರ: ಜಮ್ಮು ಕಾಶ್ಮೀರದ ಆರು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ಭರದಿಂದ ಸಾಗಿದ್ದು, ಬಿಜೆಪಿ ಆರಂಭಿಕ ಮುನ್ನಡೆ ಪಡೆದುಕೊಂಡಿದೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​, ಬಿಜೆಪಿ ಮಾತ್ರ ಈ ಚುನಾವಣಾ ಕಣಕ್ಕೆ ದುಮುಕಿದ್ದವು. ಇದರ ಜತೆಗೆ ಪಕ್ಷೇತರರು ಸ್ಪರ್ಧೆಗೆ ಇಳಿದಿದ್ದರು. ಆದರೆ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 35 (ಎ) ವಿಧಿಯ ಬಗ್ಗೆ ಬಿಜೆಪಿಯ ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ಎಂದು ಒತ್ತಾಯಿಸಿ ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್​ ಕಾನ್ಫರೆನ್ಸ್​ (ಎನ್​ಸಿ), ಪೀಪಲ್ಸ್​ ಡೆಮಾ ಕ್ರಟಿಕ್​ ಪಾರ್ಟಿ (ಪಿಡಿಪಿ) ಚುನಾವಣೆಯನ್ನು ಬಹಿಷ್ಕರಿಸಿವೆ.

ಜಮ್ಮು ಕಾಶ್ಮೀರದ ಬಾರಾಮುಲ್ಲಾ, ಪುಲ್ವಾಮಾ, ಕುಲ್ಗಾಮ್​, ಶೋಪಿಯಾನ್​, ಬುಡ್ಗಾಮ್​ ಮತ್ತು ಅನಂತನಾಗ್​ ಜಿಲ್ಲೆಗಳಲ್ಲಿ ಅ. 8, 10, 13 ಮತ್ತು 16ರಂದು ಮತದಾನ ನಡೆದಿತ್ತು. ಈಗಾಗಲೇ 75 ವಾರ್ಡ್​ಗಳಲ್ಲಿ ಬಿಜೆಪಿ ಆಯ್ಕೆಯಾಗಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್​ 52 ವಾರ್ಡ್​ಗಳಲ್ಲಿ ತನ್ನ ಹಿಡಿತ ಮುಂದುವರಿಸಿದೆ. ಇನ್ನುಳಿದಿಂತೆ 45 ವಾರ್ಡ್​ಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ.

ಬಾರಾಮುಲ್ಲ ಜಿಲ್ಲೆಯಲ್ಲಿ ಕಾಂಗ್ರೆಸ್​ ಒಂದೇ ಒಂದು ವಾರ್ಡ್​ನಲ್ಲೂ ಜಯ ದಾಖಲಿಸಿಲ್ಲ ಇಲ್ಲಿ ಬಿಜಿಪಿ 17 ವಾರ್ಡ್​ಗಳಲ್ಲಿ ಗೆದ್ದಿದ್ದು, ಪಕ್ಷೇತರರು 16ರಲ್ಲಿ ಗೆದ್ದಿದ್ದಾರೆ. ಪುಲ್ವಾಮ, ಕುಲ್ಗಮ್​ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಶೋಪಿಯಾನ್​ ಜಿಲ್ಲೆಯಲ್ಲಿ ಬಿಜೆಪಿ ಭದ್ರ ಹಿಡಿತ ಸಾಧಿಸಿದೆ. ಆದರೆ, ಬುಡ್ಗಾಮ್​ ಜಿಲ್ಲೆಯಲ್ಲಿ ಕಾಂಗ್ರೆಸ್​ ಹೆಚ್ಚಿನ ಮನ್ನಣೆ ಪಡೆದುಕೊಂಡಿದೆ. ಅನಂತನಾಗ್​ ಜಿಲ್ಲೆಯ 26 ವಾರ್ಡ್​ಗಳಲ್ಲಿ ಕಾಂಗ್ರೆಸ್​ ಗೆಲುವು ದಾಖಲಿಸಿದೆ.

Leave a Reply

Your email address will not be published. Required fields are marked *

Back To Top