ಉಗ್ರರ ಗ್ರೆನೇಡ್​ ದಾಳಿಗೆ ಎಎಸ್​ಐ ಹುತಾತ್ಮ

ನೌಗಾಂ: ಉಗ್ರರು ನಡೆಸಿದ ಗ್ರೆನೇಡ್​ ದಾಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್​ಎಫ್​) ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ಮೃತಪಟ್ಟಿದ್ದಾರೆ.

ಜಮ್ಮು ಕಾಶ್ಮೀರದ ನೌಗಾಂನಲ್ಲಿ ಘಟನೆ ನಡೆದಿದ್ದು, ಮೃತ ಸಿಐಎಸ್​ಎಫ್​ ಅಧಿಕಾರಿಯನ್ನು ರಾಜೇಶ್​ ಕುಮಾರ್​ ಎಂದು ಗುರುತಿಸಲಾಗಿದೆ. ಇವರನ್ನು ವಾಗೋರಾದಲ್ಲಿ ನಿಯೋಜಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ನಡೆಸಿದ್ದ ಕಲ್ಲು ತೂರಾಟದಲ್ಲಿ ಯೋಧ ರಾಜೇಂದ್ರ ಸಿಂಗ್ ಎಂಬವರು ಶುಕ್ರವಾರ ಸಂಜೆ 6 ಗಂಟೆಗೆ ಹುತಾತ್ಮರಾಗಿದ್ದರು. ತ್ವರಿತ ಗತಿಯ ಭದ್ರತೆಯನ್ನು ಒದಗಿಸುವ ಬಾರ್ಡರ್‌ ಸೆಕ್ಯುರಿಟಿ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. (ಏಜೆನ್ಸೀಸ್)