ಹೊರಾಂಗಣಕ್ಕೆ ಜಿಗಿದ ಬ್ಯಾಡ್ಮಿಂಟನ್!

ಗುವಾಂಗ್​ಜೌ(ಚೀನಾ): ಬ್ಯಾಡ್ಮಿಂಟನ್ ಆಟವನ್ನು ಹೊರಾಂಗಣದಲ್ಲಿ ಆಡುವ ಕನಸು ಕೊನೆಗೂ ಅಧಿಕೃತಗೊಂಡಿದೆ. ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ (ಬಿಡಬ್ಲ್ಯುಎಫ್) ಬ್ಯಾಡ್ಮಿಂಟನ್​ನ ಹೊರಾಂಗಣ ಗೇಮ್​ನ್ನು ಅಧಿಕೃತವಾಗಿ ಪ್ರಕಟ ಮಾಡಿದ್ದು, ಏರ್ ಬ್ಯಾಡ್ಮಿಂಟನ್ ಎಂದು ಹೆಸರಿಟ್ಟಿದೆ. ಇದರಲ್ಲಿ ಬಳಸಲಾಗುವ ಷಟಲ್​ಕಾಕ್​ಗೆ ಏರ್ ಷಟಲ್​ಕಾಕ್ ಎಂದು ಹೆಸರಿಡಲಾಗಿದೆ.

ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಎಲ್ಲ ವಯೋಮಾನದವರಿಗೂ ಬ್ಯಾಡ್ಮಿಂಟನ್ ಕ್ರೀಡೆಯ ಅವಕಾಶ ನೀಡಬೇಕು ಎಂದು ಏರ್ ಬ್ಯಾಡ್ಮಿಂಟನ್​ಅನ್ನು ಅನಾವರಣ ಮಾಡಲಾಗಿದೆ. ಇದನ್ನು ಹಾಡ್​ಕೋರ್ಟ್, ಹುಲ್ಲಿನಂಕಣ ಹಾಗೂ ಮರಳಿನ ಅಂಕಣದಲ್ಲೂ ಆಡಬಹುದಾಗಿದೆ.

ಪಾರ್ಕ್, ಗಾರ್ಡನ್, ಸ್ಟ್ರೀಟ್, ಆಟದ ಮೈದಾನ ಹಾಗೂ ಬೀಚ್​ಗಳಲ್ಲಿ ಆಡುವ ಪಂದ್ಯಕ್ಕೆ ಏರ್​ಬ್ಯಾಡ್ಮಿಂಟನ್ ಎಂದು ಕರೆಯಲಾಗುತ್ತದೆ ಎಂದು ಬಿಡಬ್ಲ್ಯುಎಫ್ ತಿಳಿಸಿದೆ. ಅದಲ್ಲದೆ, ಹೊರಾಂಗಣ ಬ್ಯಾಡ್ಮಿಂಟನ್​ಗಾಗಿ ವಿಶೇಷ ಅಳತೆಯ ಕೋರ್ಟ್ಗಳೂ ಇರಲಿವೆ ಎಂದು ತಿಳಿಸಿದೆ. ಇಷ್ಟು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಇಂಡೋರ್​ಗೆ ಸೀಮಿತವಾಗಿದ್ದವು. ಹೊರಾಂಗಣದಲ್ಲಿ ಷಟಲ್​ಅನ್ನು ನಿಯಂತ್ರಿಸುವುದು ಕಷ್ಟ ಎನ್ನುವ ಕಾರಣಕ್ಕೆ ಈವರೆಗೂ ಹೊರಾಂಗಣದಲ್ಲಿ ಆಡಿಸುವ ಪ್ರಯತ್ನ ನಡೆದಿರಲಿಲ್ಲ.