ಪದ್ಮಶ್ರೀ ಪ್ರಶಸ್ತಿಯನ್ನು ಕೊಂಡುಕೊಂಡಿದ್ದೀರಾ ಎಂದು ಟ್ರೋಲ್​ ಮಾಡಿದ್ದವನಿಗೆ ಸೈಫ್​ ಅಲಿ ಖಾನ್​ ತಿರುಗೇಟು

ಮುಂಬೈ: ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ‘ಪದ್ಮಶ್ರೀ’ ಪ್ರಶಸ್ತಿಯನ್ನು ಬಾಲಿವುಡ್​ ನಟ ಸೈಫ್​ ಅಲಿ ಖಾನ್ ಅವರು ಕೊಂಡುಕೊಂಡಿದ್ದರು ಎಂದು ಟ್ರೋಲ್​ ಮಾಡಿದ್ದವರಿಗೆ ಸೈಫ್​ ಅಲಿ ಖಾನ್​ ತಿರುಗೇಟು ನೀಡಿದ್ದಾರೆ. ಅಂದಹಾಗೆ ಸೈಫ್​ 2010ರಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದರು.

ನಟ ಅರ್ಬಾಜ್​ ಖಾನ್​ ಅವರು ನಡೆಸಿಕೊಡುವ ‘ಪಿಂಚ್​’ ಹೆಸರಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈಫ್​ ಮಾತನಾಡಿದ್ದಾರೆ.

ಈ ಸಣ್ಣ ಚೂರಿನ ಥಗ್​(ಹಿಂಸಾತ್ಮಕ ವ್ಯಕ್ತಿ) ಪದ್ಮಶ್ರಿ ಪ್ರಶಸ್ತಿಯನ್ನು ಕೊಂಡುಕೊಂಡಿದ್ದಾರೆ. ಅವರು ಬೇರೆ ಯಾರು ಅಲ್ಲ, ತಮ್ಮ ಮಗನಿಗೆ ತೈಮೂರ್​ ಎಂದು ಹೆಸರಿಟ್ಟಿದ್ದಾನೆ. ಅಲ್ಲದೆ, ರೆಸ್ಟೊರೆಂಟ್​ನಲ್ಲಿ ಕೆಲವು ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ‘ಸ್ಯಾಕ್ರೆಡ್​ ಗೇಮ್ಸ್​’ ಚಿತ್ರದಲ್ಲಿ ಅವರು ಹೇಗೆ ಆ ಪಾತ್ರವನ್ನು ಪಡೆದರೋ? ಬಹಳ ಕಷ್ಟಪಟ್ಟು ನಟನೆ ಮಾಡಿದ್ದಾರೆ ಎಂದು ಒಬ್ಬ ನೆಟ್ಟಿಗ ಮಾಡಿದ್ದ ಟ್ರೋಲ್​ಗೆ ಕಾರ್ಯಕ್ರಮದಲ್ಲಿ ಸೈಫ್​ ಉತ್ತರಿಸಿದ್ದಾರೆ.

ನೀವು ಹೇಳಿದ ಸಣ್ಣ ಚೂರಿನ ಥಗ್​ ನಾನಲ್ಲ. ಪದ್ಮಶ್ರಿ ಪ್ರಶಸ್ತಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಭಾರತ ಸರ್ಕಾರಕ್ಕೆ ಲಂಚ ನೀಡುವುದು ನನ್ನನ್ನು ಮೀರಿದ್ದು, ನೀವು ಪ್ರಶಸ್ತಿ ಪಡೆದ ಹಿರಿಯರನ್ನು ಕೇಳಬಹುದು. ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂದು ನಾನು ಅಂದುಕೊಂಡಿದ್ದೆ. ಏಕೆಂದರೆ ನನಗಿಂತಲೂ ಅರ್ಹರಾದ ಹಿರಿಯ ನಟರು ಚಿತ್ರರಂಗದಲ್ಲಿದ್ದಾರೆ. ಈ ಪ್ರಶಸ್ತಿ ನನಗೂ ಮುಜುಗರ ಉಂಟುಮಾಡಿತ್ತು. ಕೆಲವೊಬ್ಬರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅವರನ್ನು ನೋಡಿದಾಗ ಅವರು ನನಗಿಂತಲೂ ಅರ್ಹರು ಎಂದು ನನಗನಿಸಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಬಗ್ಗೆ ನನ್ನ ತಂದೆ ಮನ್ಸೂರ್​ ಅಲಿ ಖಾನ್​ ಪಟೌಡಿ ಬಳಿ ಚರ್ಚಿಸಿದ ಬಳಿಕ ನನ್ನ ನಿಲುವನ್ನು ಬದಲಾಯಿಸಿಕೊಂಡೆ. ಪ್ರಶಸ್ತಿಯನ್ನು ಹಿಂದಿರುಗಿಸಬೇಕು ಅಂದುಕೊಂಡಿದ್ದೆ. ಆದರೆ, ನನಗನಿಸುತ್ತದೆ ನೀನು ಭಾರತ ಸರ್ಕಾರವನ್ನು ತಿರಸ್ಕರಿಸುವ ಸ್ಥಿತಿಯಲ್ಲಿ ಇಲ್ಲ ಎಂದು ನಮ್ಮ ತಂದೆ ಹೇಳಿದ್ದರು. ಹೀಗಾಗಿ ನಾನು ಓಕೆ ಎಂದೆ. ಸಂತೋಷವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *