ಐಟಿ ಕೆಲಸಕ್ಕೆ ಬೈ ಮೇಕೆ ಸಾಕಣೆಗೆ ಜೈ

| ಕಿರಣ್ ಮಾದರಹಳ್ಳಿ

‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಹಲವು ಸೊಪ್ಪುಗಳನ್ನು ತಿಂದು ಆರೋಗ್ಯವಾಗಿರುವ ಮೇಕೆಯ ಹಾಲು ಅಮೃತಕ್ಕೆ ಸಮ. ದೇಶದ ಯಾವ ಮೂಲೆಯಲ್ಲಿ ಬೇಕಾದರೂ ಹಸು, ಎಮ್ಮೆಗಳ ಹಾಲು ಸಿಗುತ್ತದೆ. ಆದರೆ ಅಷ್ಟು ಬೇಗ ‘ಮೇಕೆಯ ಹಾಲು’ ಸಿಗುವುದಿಲ್ಲ! ಈ ಅಮೃತ ಎಲ್ಲರಿಗೂ ದೊರಕಿಸುವುದರ ಜತೆಗೆ ರೈತರಿಗೂ ಲಾಭವಾಗಬೇಕೆಂಬ ಉದ್ದೇಶವಿರುವ ದಿಟ್ಟತನದ ‘ಯುವಪಡೆ’ಯೊಂದು ರಾಜ್ಯದಲ್ಲಿ ಸದ್ದಿಲ್ಲದೆ ಕಾರ್ಯಾರಂಭ ಮಾಡಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ!

ಹೌದು, ಸಾಫ್ಟ್​ವೇರ್ ಕಂಪನಿ ಯಲ್ಲಿ ವಾರ್ಷಿಕ 18ರಿಂದ 20 ಲಕ್ಷ ರೂ. ವೇತನ. ಮೋಜು-ಮಸ್ತಿ ಮಾಡುವ ವಯಸ್ಸು. ಆದರೂ ಎಲ್ಲ ಬಿಟ್ಟು ಮೇಕೆ ಸಾಕಣೆಯತ್ತ ಮುಖ ಮಾಡಿದ ಟೆಕ್ಕಿ ಎ.ಎನ್. ಕೃಷ್ಣಕುಮಾರ್ ಹಾಗೂ ಅವರ ಸ್ನೇಹಿತರ ಬಳಗ; ಆರಂಭಿಕ ಯಶಸ್ಸು ಸಾಧಿಸಿ ಮಾದರಿಯಾಗಿದ್ದಾರೆ. ಈ ಯುವಪಡೆಯ ಕನಸಿನ ಬೀಜ ಮೊಳಕೆಯೊಡೆದಿದ್ದು 2013ರಲ್ಲಿ. ಕೂಡಿಟ್ಟುಕೊಂಡಿದ್ದ ಅಲ್ಪಸ್ವಲ್ಪ ಹಣ, ಅಮ್ಮಂದಿರ ಒಡವೆ ಎಲ್ಲವನ್ನೂ ಮಾರಾಟ ಮಾಡಿ ಕೊಳ್ಳೇಗಾಲದ ಹನೂರು ಬಳಿ ನಾಲ್ಕು ಎಕರೆ ಭೂಮಿ ಖರೀದಿಸಿ ‘ವಿಸ್ತಾರ ಫಾಮ್ರ್ ಪ್ರೖೆವೇಟ್ ಲಿಮಿಟೆಡ್’ ಹೆಸರಿನಲ್ಲಿ ಮೇಕೆ ಫಾಮ್ರ್ ನಿರ್ವಿುಸಿದರು. ಪುಣೆ, ಪಂಜಾಬ್, ಮೈಸೂರು ಹಾಗೂ ಸ್ಥಳೀಯ ಸಂತೆಗಳಿಂದ ಮೇಕೆಗಳನ್ನು ಖರೀದಿಸಿ ತಂದು ಸಾಕಣೆ ಆರಂಭಿಸಿದರು. ಆದರೆ ಮೂಲಕೃಷಿಯ ಗಂಧಗಾಳಿಯೂ ಗೊತ್ತಿಲ್ಲದೆ ಕೆಲವು ದಿನಗಳಲ್ಲೇ 150 ಮೇಕೆಗಳನ್ನು ಕಳೆದುಕೊಳ್ಳಬೇಕಾಯಿತು. ಯಾವ ಆಹಾರ, ಹೇಗೆ, ಎಷ್ಟು ಕೊಡಬೇಕು ಎಂಬ ಮಾಹಿತಿಯಿಲ್ಲದೆ ಮೇಕೆಗಳು ಕಾಯಿಲೆಗೆ ತುತ್ತಾಗಿ ಪ್ರಾಣ ಬಿಟ್ಟಿದ್ದವು. ಧೃತಿಗೆಡದೆ ಎಲ್ಲವನ್ನೂ ತಿಳಿದುಕೊಂಡು ಸಾಕಣೆ ಮುಂದುವರಿಸಿದರು. 2016ರ ವೇಳೆಗೆ ಎಲ್ಲವೂ ಸರಿಯಾಗಿ ಮೇಕೆಯ ಹಾಲನ್ನು ಪಾಕೆಟ್​ನಲ್ಲಿ ಸಿದ್ಧಪಡಿಸಿ ಬೆಂಗಳೂರಿಗೆ ಪೂರೈಸಲಾರಂಭಿಸಿದರು. ಮಳವಳ್ಳಿಯ ಗಾಜನೂರು ಸಮೀಪ ಮತ್ತೆ ಐದು ಎಕರೆ ಭೂಮಿ ಖರೀದಿಸಿ ಎರಡನೇ ಮೇಕೆ ಫಾಮ್ರ್ ಶುರು ಮಾಡಿದರು.

ಫಾಮರ್್​ನಲ್ಲಿ ಬೀಟಲ್ ತಳಿಯ ಹಾಲು ನೀಡುವ 500 ಮೇಕೆಗಳನ್ನು ಕೊಟ್ಟಿಗೆ ಪದ್ಧತಿಯಲ್ಲಿ ಸಾಕಲಾಗುತ್ತಿದೆ. ದಿನಕ್ಕೆ ನೂರು ಲೀಟರ್​ಗಳಿಗೂ ಹೆಚ್ಚು ಹಾಲು ದೊರೆಯುತ್ತಿದೆ. ಹನಿ ನೀರಾವರಿ ಪದ್ಧತಿ, ಜೆಟ್ ಸ್ಪಿಂಕ್ಲರ್ಸ್ ಅಳವಡಿಸಿ ಕಡಿಮೆ ನೀರಿನಲ್ಲಿ ಮೇವು ಬೆಳೆಯಲಾಗುತ್ತಿದೆ.

ರೈತರಿಂದ ಹಾಲು ಖರೀದಿಸುವ ಪ್ಲ್ಯಾನ್: ಮೇಕೆ ಮಾಂಸಕ್ಕೆ ಹೆಚ್ಚು ಬೇಡಿಕೆ ಇದೆ. ಆದರೆ, ವಿಸ್ತಾರ ಫಾಮ್ರ್ ನ ಮುಖ್ಯ ಉದ್ದೇಶ ಮೇಕೆ ಹಾಲು ಉತ್ಪಾದನೆ. ಹೀಗಾಗಿ ಮೇಕೆ ಸಾಕಣೆಗೆ ರೈತರನ್ನು ಪ್ರೋತ್ಸಾಹಿಸಿ ಅವರಿಂದ ಮಾರುಕಟ್ಟೆ ದರದಲ್ಲಿ ನೇರವಾಗಿ ಹಾಲು ಖರೀದಿಸುವುದು ವಿಸ್ತಾರ ಫಾಮ್ರ್ ಯೋಜನೆ. ರೈತರಿಗೆ ಮೇಕೆ ಫಾಮ್ರ್ ಮಾಡಲು ಬೇಕಾದ ಸಂಪೂರ್ಣ ಮಾಹಿತಿ ಒದಗಿಸುವುದರ ಜತೆಗೆ ಸರ್ಕಾರದಿಂದ ದೊರೆಯುವ ಸಬ್ಸಿಡಿ ಬಗ್ಗೆಯೂ ತಿಳಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಹಸು ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾದರಿಯಲ್ಲಿಯೇ ಮೇಕೆ ಹಾಲಿನ ಡೈರಿ ಪ್ರಾರಂಭಿಸುವ ಹಾಗೂ ತಾವೇ ಹೊಸ ಮೇಕೆ ಫಾಮರ್್​ಗಳಿಂದ ಹಾಲನ್ನೂ ಖರೀದಿಸುವ ಯೋಜನೆ ಇರುವುದಾಗಿ ಹೇಳುತ್ತಾರೆ ಕೃಷ್ಣ.

ಹಸು, ಕತ್ತೆ, ಕೋಳಿಗಳು: ವಿಸ್ತಾರ ಫಾಮರ್್​ನಲ್ಲಿ ಇರುವುದು ಮೇಕೆಗಳಷ್ಟೇ ಅಲ್ಲ. ಎಂಟು ಹಸುಗಳಿವೆ, ಎರಡು ಕತ್ತೆಗಳಿವೆ, ಎರಡು ನಾಯಿಗಳಿವೆ, ಕೋಳಿಗಳಿವೆ. ಇವನ್ನೆಲ್ಲ ನೋಡಿಕೊಳ್ಳಲು ಅಲ್ಲಿಯೇ ಎರಡು ಕುಟುಂಬಗಳು ವಾಸವಾಗಿವೆ. ಅವರ ವಾಸಕ್ಕಾಗಿ ಶೆಡ್ ನಿರ್ವಿುಸಿಕೊಡಲಾಗಿದೆ. ಮೇಕೆಗಳನ್ನು ನೋಡಿಕೊಳ್ಳಲು ಸಂಪೂರ್ಣವಾಗಿ ಕೂಲಿ ಆಳುಗಳನ್ನೇ ಬಿಟ್ಟಿಲ್ಲ. ಬದಲಾಗಿ ಕೃಷ್ಣ, ರವಿ, ರಮೇಶ ಯಾರಾದರೊಬ್ಬರು ಇದ್ದೇ ಇರುತ್ತಾರೆ.

ಒಂದು ಮೇಕೆ ಮೂರು ಲೀಟರ್ ಹಾಲು: ಹಾಲು ಉತ್ಪಾದನೆಯ ಹೆಚ್ಚಳಕ್ಕೆ ತಕ್ಕಂತೆ ಆಹಾರ ಕೊಡಲಾಗುತ್ತಿದೆ. ಒಂದು ಮೇಕೆ ಮೂರು ಲೀಟರ್​ವರೆಗೂ ಹಾಲು ಕೊಡುತ್ತದೆ. ಸದ್ಯ ಕೂಲಿ ಆಳುಗಳೇ ಹಾಲು ಕರೆಯುತ್ತಿದ್ದು, ಯಂತ್ರದ ಮುಖೇನ ಕರೆಯಲು ಸಿದ್ಧತೆ ನಡೆದಿದೆ.

ದಿನಕ್ಕೆ ಐದು ಬಾರಿ ಮೇವು: ಫಾಮರ್್​ನಲ್ಲಿ ಹಾಲು ಕೊಡುವ ಮೇಕೆಗಳು, ಗರ್ಭ ಧರಿಸಿದ ಮೇಕೆಗಳು, ಹೋತಗಳು, ತಿಂಗಳು ಮರಿಗಳು, ವರ್ಷದ ಮರಿಗಳು – ಹೀಗೆ ಪ್ರತಿಯೊಂದನ್ನೂ ಪ್ರತ್ಯೇಕ ಕೊಟ್ಟಿಗೆಯಲ್ಲಿ ಬಿಡಲಾಗಿದೆ. ಹಸಿ ಮೇವು, ಸಂಗ್ರಹಿಸಿದ ಮೇವು – ಹೀಗೆ ದಿನಕ್ಕೆ ಐದು ಬಾರಿ ವಿವಿಧ ರೀತಿಯ ಮೇವನ್ನು ಕೊಡಲಾಗುತ್ತದೆ. ನೀರಿನ ವ್ಯವಸ್ಥೆಯನ್ನೂ ಒಳಭಾಗದಲ್ಲೇ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕ: 9113842349, ಫೇಸ್​ಬುಕ್ ಪುಟ: vistarafarms

ತಿಂಗಳ ಆದಾಯ -ಠಿ;10 ಲಕ್ಷ

ಜಮೀನು ಖರೀದಿ, ಬೋರ್​ವೆಲ್, ಶೆಡ್ ನಿರ್ಮಾಣ ಎಲ್ಲ ಸೇರಿ 4.5 ಕೋಟಿ ರೂ. ಬಂಡವಾಳ ಹೂಡಿ ಫಾಮ್ರ್ ಆರಂಭಿಸಲಾಗಿದೆ. ಇದಕ್ಕೆ ಆಧಾರಸ್ತಂಭವಾಗಿರುವ ಕೃಷ್ಣ ಶೇ. 32ರಷ್ಟು ಬಂಡವಾಳ ಹೂಡಿಕೆ ಮಾಡಿದ್ದರೆ ಇಪ್ಪತ್ತು ಸ್ನೇಹಿತರಿಂದ ಮೂವತ್ತು ತಿಂಗಳ ಕಾಲ ಐದು ಸಾವಿರ ರೂ. ಸಂಗ್ರಹಿಸಿ ಎಲ್ಲರಿಗೂ ಅವರವರ ಷೇರನ್ನು ಮೀಸಲಿಟ್ಟಿದ್ದಾರೆ. ಪ್ರಸ್ತುತ ಮೇಕೆಗಳ ಹಾಲು ಉತ್ಪಾದನೆ ಹಾಗೂ ಮರಿಗಳ ಮಾರಾಟದಿಂದ ತಿಂಗಳಿಗೆ ಹತ್ತು ಲಕ್ಷ ರೂ. ಆದಾಯ ಬರುತ್ತಿದೆ ಎಂಬ ಮಾಹಿತಿ ನೀಡುತ್ತಾರೆ ಕೃಷ್ಣ. ಫಾಮ್ರ್ ನಡೆಸಲು ಸಹಯೋಗ ನೀಡುತ್ತಿರುವವರು ಇಂಜಿನಿಯರ್ ಜಯಚಂದ್ರ, ಹುಮಾಯೂನ್, ವೀರೇಶ್, ರವಿ, ರಮೇಶ.

ಇಪ್ಪತ್ತು ಜನಕ್ಕೆ ಉದ್ಯೋಗ

ವಿಸ್ತಾರ ಫಾಮ್ರ್ ಸದ್ಯ ಇಪ್ಪತ್ತು ಜನರಿಗೆ ಉದ್ಯೋಗ ನೀಡಿದೆ. ಮೇಕೆಗಳ ಸಾಕಣೆ, ಮೇವಿನ ಬೆಳೆ, ಪ್ರೊಡಕ್ಷನ್ ಡಿಪಾರ್ಟ್​ವೆುಂಟ್, ಮಾರ್ಕೆಟಿಂಗ್, ಪ್ರಾಡಕ್ಟ್ ಡೆಲಿವರಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ನಡೆಯುತ್ತಿದೆ. ಇಪ್ಪತ್ತು ಮಂದಿ ಉದ್ಯೋಗಿಗಳಿಗೆ ತಿಂಗಳಿಗೆ 3.5 ಲಕ್ಷ ರೂ. ಸಂಬಳ ನೀಡಲಾಗುತ್ತಿದೆ. ಫಾಮರ್್​ನಲ್ಲಿ ಸದ್ಯ 500 ಮೇಕೆಗಳಿದ್ದು, ಇದನ್ನು ಮೂರು ಸಾವಿರ ಮೇಕೆಗಳಿಗೆ ಏರಿಸುವ ಯೋಜನೆ ಹಾಕಿಕೊಂಡಿದ್ದಾರೆ ಕೃಷ್ಣ ಹಾಗೂ ತಂಡದವರು.

ಗೋಟ್ ಚೀಸ್, ಯೋಗರ್ಟ್

ಮೇಕೆ ಹಾಲಿನಿಂದ ಬಾಸ್ತಾ (ಸಂಸ್ಕೃತದಲ್ಲಿ ಬಾಸ್ತಾ ಎಂದರೆ ಮೇಕೆ) ಹೆಸರಿನಲ್ಲಿ ಚೀಸ್, ಯೋಗ್ಹರ್ಟ್ ತಯಾರಿಸಲಾಗುತ್ತಿದೆ. ಬೆಂಗಳೂರಿನ ಕೆಂಗೇರಿ ಉಪನಗರದ ಬಳಿ ತಯಾರಿಕಾ ಘಟಕ ಆರಂಭಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪ್ರತಿಷ್ಠಿತ ಫೈವ್ ಸ್ಟಾರ್ ಹೋಟೆಲ್​ಗಳು ಹಾಗೂ ರೆಸ್ಟೋರೆಂಟ್​ಗಳಿಗೆ ಬಾಸ್ತಾ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ. ರೀಟೆಲ್ ದರದಲ್ಲಿ ದೂಧ್​ವಾಲಾ ಡಾಟ್ ಕಾಂ, ನಾಮ್ಾರಿ ಸ್ಟೋರ್ಸ್​ಗಳ ಮೂಲಕವೂ ಮಾರಾಟ ಮಾಡಲಾಗುತ್ತಿದೆ. ಡೆಂಘಿ, ಪಾರ್ಶ್ವವಾಯು ಸೇರಿದಂತೆ ಅನೇಕ ಕಾಯಿಲೆಗಳಿಗೆ ಮೇಕೆಹಾಲು ರಾಮಬಾಣ ಎನ್ನಲಾಗುತ್ತದೆ. ಬೇಡಿಕೆ ಹೆಚ್ಚಾಗಿರುವುದಿಂದ ಸ್ಥಳೀಯವಾಗಿಯೂ ಮೇಕೆ ಹಾಲನ್ನು ಮಾರಲಾಗುತ್ತಿದೆ.

Leave a Reply

Your email address will not be published. Required fields are marked *