20.4 C
Bangalore
Monday, December 9, 2019

ಪುತ್ರನ ಮದುವೆ ಕಣ್ತುಂಬಿಕೊಳ್ಳಲೆಂದು ಆಸ್ಪತ್ರೆಯಲ್ಲೇ ವಿವಾಹ ಕಾರ್ಯಕ್ರಮ: ಆಸ್ಪತ್ರೆ ಸಿಬ್ಬಂದಿಯಿಂದ ಅಚ್ಚರಿಯ ಉಡುಗೊರೆ!

Latest News

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಮೊದಲ ಸುತ್ತಿನ ಮತಎಣಿಕೆ ಮುಕ್ತಾಯ: ಕೆ.ಆರ್​.ಪೇಟೆಯಲ್ಲಿ ಜೆಡಿಎಸ್​, ಹುಣಸೂರಿನಲ್ಲಿ ಕಾಂಗ್ರೆಸ್​ ಮುನ್ನಡೆ

ಹುಣಸೂರು/ಕೆ.ಆರ್​ಪೇಟೆ: ಕೆ.ಆರ್​.ಪೇಟೆ ಕ್ಷೇತ್ರದ ಉಪಚುನಾವಣೆಯ ಅಂಚೆ ಮತಎಣಿಕೆಯಲ್ಲಿ ಮುಂದಿದ್ದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮೊದಲ ಸುತ್ತಿನ ಮತಎಣಿಕೆಯಲ್ಲಿ ಹಿಂದೆ ಉಳಿದಿದ್ದು, ಜೆಡಿಎಸ್​ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಚಿಕ್ಕಬಳ್ಳಾಪುರದಲ್ಲಿ 31 ಅಂಚೆಮತದಲ್ಲಿ 27 ಸ್ವೀಕೃತ, ಬಿಜೆಪಿ ಅಭ್ಯರ್ಥಿ ಸುಧಾಕರ್​ ಮುನ್ನಡೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆದ ಅಂಚೆ ಮತಎಣಿಕೆಯಲ್ಲಿ ಚಲಾವಣೆಯಾದ ಒಟ್ಟು 31 ಅಂಚೆಮತದಲ್ಲಿ 27 ಸ್ವೀಕೃತವಾಗಿವೆ. ಅಂಚೆ ಮತೆಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್​...

ನವದೆಹಲಿ: ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವಿದೆ ಎಂದಾಗ ಮದುವೆ ಸಮಾರಂಭವನ್ನು ಮುಂದೂಡುವುದು ಸಾಮಾನ್ಯ. ಆದರೆ ಇದಕ್ಕೆ ಅಪವಾದ ಎಂಬಂತೆ ಟೆಕ್ಸಾಸ್​ ಮೂಲದ ಜೋಡಿಯೊಂದು ಅನಾರೋಗ್ಯದಿಂದ ವರನ ತಂದೆ ದಾಖಲಾಗಿದ್ದ ಆಸ್ಪತ್ರೆಯಲ್ಲೇ ಮದುವೆ ಮಾಡಿಕೊಂಡಿದೆ. ತನ್ಮೂಲಕ ವರನ ತಂದೆಗೂ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಖುಷಿಯನ್ನು ದೊರಕಿಸಿಕೊಟ್ಟಿದೆ.

ಅಲೈಯ್ಹಾ ಮತ್ತು ಮೈಕಲ್​ ಥಾಂಪ್ಸನ್​ ಆಸ್ಪತ್ರೆಯಲ್ಲೇ ವಿವಾಹವಾದ ಜೋಡಿ. ಮೈಕೆಲ್​ ತಂದೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಂದೆ ತನ್ನ ವಿವಾಹ ಸಮಾರಂಭವನ್ನು ಮಿಸ್​ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಮೈಕೆಲ್​ ಆಸ್ಪತ್ರೆಯಲ್ಲೇ ಮದುವೆಯಾಗುವ ಬಗ್ಗೆ ಅಲೈಯ್ಹಾ ಬಳಿ ಪ್ರಸ್ತಾಪಿಸಿದರು. ಇದಕ್ಕೆ ಆಕೆ ಕೂಡಲೇ ಸಮ್ಮತಿಸಿದಳು.

ಮೈಕೆಲ್​ ತಂದೆ ಚಿಕಿತ್ಸೆ ಪಡೆಯುತ್ತಿದ್ದ ಬೇಲರ್​ ಸ್ಕಾಟ್​ ಆ್ಯಂಡ್​ ವೈಟ್​ ಹೆಲ್ತ್​ ಮೆಡಿಕಲ್​ ಸೆಂಟರ್​ ಎಂಬ ಆಸ್ಪತ್ರೆಗೆ ಅಲೈಯ್ಹಾ ಮತ್ತು ಮೈಕೆಲ್​ ವಿವಾಹ ದಿರಿಸಿನಲ್ಲಿ ಹೋಗಿದ್ದಾರೆ. ಇದನ್ನು ಕಂಡ ಆಸ್ಪತ್ರೆ ಸಿಬ್ಬಂದಿ ತಕ್ಷಣವೇ ಫಾದರ್​ ಒಬ್ಬರನ್ನು ಆಸ್ಪತ್ರೆಗೆ ಕರೆಯಿಸಿಕೊಂಡಿದ್ದಾರೆ. ವಿವಾಹದ ದಿರಿಸಿನ ಮೇಲೆ ಆಸ್ಪತ್ರೆಯ ಗೌನ್​ಗಳನ್ನು ತೊಡಿಸಿ, ಮೈಕೆಲ್​ ತಂದೆ ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್​ಗೆ ಕರೆದೊಯ್ದಿದ್ದಾರೆ. ಬಳಿಕ ಫಾದರ್​ ಇವರಿಬ್ಬರ ಮದುವೆ ಮಾಡಿಸಿದ್ದಾರೆ.

ಈ ಕಾರ್ಯಕ್ರಮ ಮುಗಿಸಿಕೊಂಡು ಹೊರಬರುತ್ತಿರುವಂತೆ ಆಸ್ಪತ್ರೆ ಸಿಬ್ಬಂದಿ ಮಧುಮೇಹಿಗಳ ಕೇಕ್​ ಹಾಗೂ ಇನ್ನಿತರ ತಿನಿಸುಗಳನ್ನು ವ್ಯವಸ್ಥೆ ಮಾಡಿ, ನೂತನ ವಧುವರರಿಗೆ ಸಣ್ಣ ಔತಣಕೂಟವನ್ನೂ ಏರ್ಪಡಿಸಿ ಸಂಭ್ರಮದಲ್ಲಿ ತಾವೂ ಭಾಗಿಯಾದರು.

ಆಸ್ಪತ್ರೆ ಸಿಬ್ಬಂದಿಯ ಔದಾರ್ಯಕ್ಕೆ ಮಾರುಹೋದ ನೂತನ ದಂಪತಿ ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿ, ನಾವಿಬ್ಬರೂ ಮಾರ್ಚ್​ನಲ್ಲೇ ಮದುವೆಯಾಗಬೇಕಿತ್ತು. ಆದರೆ, ಇಬ್ಬರು ಕುಟುಂಬ ಸದಸ್ಯರು ಮೃತಪಟ್ಟಿದ್ದರಿಂದ ಮದುವೆ ಮುಂದೂಡುವುದು ಅನಿವಾರ್ಯವಾಗಿತ್ತು. ಅವರಿಬ್ಬರನ್ನೂ ಕಳೆದುಕೊಂಡ ನಮಗೆ ನಮ್ಮ ಮದುವೆಯಲ್ಲಿ ಮೈಕೆಲ್​ ಅವರ ತಂದೆ ಪಾಲ್ಗೊಳ್ಳಲೇಬೇಕು ಎಂದನಿಸಿತು. ಹಾಗಾಗಿ, ವೈಭವೋಪೇತ ಮದುವೆ ಕನಸನ್ನು ಕೈಬಿಟ್ಟು ಸರಳವಾಗಿ ಆಸ್ಪತ್ರೆಯಲ್ಲೇ ಸತಿಪತಿಗಳಾಗುವ ನಿರ್ಧಾರ ಕೈಗೊಂಡೆವು ಎಂದು ಅಲೈಯ್ಹಾ ಹೇಳಿದರು. (ಏಜೆನ್ಸೀಸ್​)

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...