ಬಿಜೆಪಿ, ಕಾಂಗ್ರೆಸ್​ ಮುಖಂಡರು, ಬೆಂಬಲಿಗರ ಮನೆ ಮೇಲೆ ಐಟಿ ದಾಳಿ

ಬಳ್ಳಾರಿ: ರಾಜ್ಯದಲ್ಲಿ ಐಟಿ ಅಧಿಕಾರಿಗಳ ದಾಳಿ ಮುಂದುವರಿದಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ಮುಖಂಡರು, ಅವರ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ ದಾಳಿಯಾಗಿದೆ.
ಶಾಸಕ ಶ್ರೀರಾಮುಲು ಅವರ ಆಪ್ತಕಾರ್ಯದರ್ಶಿ ರಾಮು ಎಂಬುವವರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಾಸಕರಾದ ಜಿ.ಸೋಮಶೇಖರರೆಡ್ಡಿ, ನಾಗೇಂದ್ರ ಬೆಂಬಲಿಗರ ಮನೆ ಮೇಲೆ, ನಾಗೇಂದ್ರ ಅವರ ಸಂಬಂಧಿ ಎರ್ರಿ ಸ್ವಾಮಿಯವರ ಹಾಗೂ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *