ಬಿಜೆಪಿ ಮುಖಂಡರ ಮನೆ ಮೇಲೆ ಐಟಿ ದಾಳಿ: ದಾಖಲೆ ಪರಿಶೀಲನೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಹಾಗೂ ಗ್ರಾಮೀಣ ಭಾಗದ ಬಿಜೆಪಿ ಮುಖಂಡರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಬಿಜೆಪಿ ಘಟಕಾಧ್ಯಕ್ಷ ವಿ.ಆರ್​.ಹೆಗಡೆ ಅವರ ಚಿಪಗಿ ನಿವಾಸದ ಮೇಲೆ ಹಾಗೂ ಬಿಜೆಪಿ ಅಭ್ಯರ್ಥಿ ಅನಂತಕುಮಾರ್​ ಹೆಗಡೆಯವರ ಆಪ್ತ ಕೃಷ್ಣ ಎಸಳೆ ಅವರ ವಿವೇಕಾನಂದನಗರದಲ್ಲಿರುವ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.

ಕೃಷ್ಣ ಎಸಳೆ ಅವರು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಹಾಗೇ ಘಟಕಾಧ್ಯಕ್ಷರಾಗಿರುವ ಆರ್​. ವಿ.ಹೆಗಡೆ ಅವರು ಕೃಷಿಕರೂ ಹೌದು. ಹುಬ್ಬಳ್ಳಿ ಐಟಿ ಕಚೇರಿಯ ಒಟ್ಟು 8 ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಅಲ್ಲದೆ ಬಿಜೆಪಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ್​ ಅವರ ಸಿದ್ದಾರಪುರ ತಾಲೂಕಿನ ಹಣಜಿಬೈಲ್​ನಲ್ಲಿರುವ ಮನೆ ಮೇಲೆ ಕೂಡ ಐಟಿ ದಾಳಿಯಾಗಿದ್ದು ಹಲವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.