More

    ಕರ್ನಾಟಕ ಸೇರಿ 4 ರಾಜ್ಯಗಳ 55 ಕಡೆ ಐಟಿ ದಾಳಿ: ಅಕ್ರಮ ಸಂಪಾದನೆಯ ಒಟ್ಟು ಮೊತ್ತದ ಪಟ್ಟಿ ಬಿಡುಗಡೆ; ಇಲ್ಲಿದೆ ವಿವರ

    ಬೆಂಗಳೂರು: ಆದಾಯ ತೆರಿಗೆ ಇಲಾಖೆಯು ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಒಂದೇ ದಿನ 55 ಕಡೆ ದಾಳಿ ನಡೆಸಿದ್ದು, ಪತ್ತೆಯಾದ ಅಕ್ರಮ ಸಂಪಾದನೆಯ ಒಟ್ಟು ವಿವರವನ್ನು ಇದೀಗ ಬಿಡುಗಡೆ ಮಾಡಿದೆ. ಕರ್ನಾಟಕ ಮಾತ್ರವಲ್ಲದೆ ದೆಹಲಿ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ಈ ದಾಳಿ ನಡೆದಿತ್ತು.

    ಈ ನಾಲ್ಕು ರಾಜ್ಯಗಳ ಒಟ್ಟು ಸುಮಾರು 55 ಪ್ರದೇಶಗಳಲ್ಲಿ ಅ. 12ರಂದು ಆದಾಯ ತೆರಿಗೆ ಅಧಿಕಾರಿಗಳು ಸರ್ಕಾರಿ ಗುತ್ತಿಗೆದಾರರು, ರಿಯಲ್​ ಎಸ್ಟೇಟ್ ಉದ್ಯಮಿಗಳು ಹಾಗೂ ಅವರ ಆಪ್ತರ ಮನೆ-ಕಚೇರಿಗಳ ಮೇಲೆ ದಾಳಿ ನಡೆಸಿ, ತೀವ್ರ ಪರಿಶೀಲನೆ ನಡೆಸಿದ್ದರು.

    ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಕರ್ನಾಟಕದ ಪೆನ್; 20 ಅಡಿ ಉದ್ದ, 10 ವರ್ಷಗಳ ಹಿಂದೆ ತಯಾರಿ

    ಭ್ರಷ್ಟಾಚಾರ, ಅಕ್ರಮ ಸಂಪಾದನೆ, ಕಾನೂನುಬಾಹಿರ ವ್ಯವಹಾರ ಇತ್ಯಾದಿ ಕುರಿತ ಮಾಹಿತಿಗಳು ಈ ಸಂದರ್ಭದಲ್ಲಿ ಸಿಕ್ಕಿದ್ದು, ಸೂಕ್ತ ದಾಖಲೆ ಇರದ ದೊಡ್ಡ ಮೊತ್ತದ ನಗದು ಪತ್ತೆಯಾಗಿದ್ದಲ್ಲದೆ ಅಕ್ರಮ ಆಸ್ತಿಯ ವಿವರಗಳು ಕೂಡ ಆದಾಯ ತೆರಿಗೆ ಅಧಿಕಾರಿಗಳಿಗೆ ಸಿಕ್ಕಿವೆ.

    ಇದನ್ನೂ ಓದಿ: ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

    ಈ ಗುತ್ತಿಗೆದಾರರು, ಉಪ ಗುತ್ತಿಗೆದಾರರು, ಸಹಾಯಕರು, ಆಪ್ತರಿಂದ ಲೆಕ್ಕಪತ್ರದಲ್ಲಿ ನಮೂದಿಸದಿರದ ದೊಡ್ಡ ಮೊತ್ತದ ನಗದು ವ್ಯವಹಾರ ಕೂಡ ನಡೆದಿರುವುದು ಆದಾಯ ತೆರಿಗೆ ಅಧಿಕಾರಿಗಳ ಗಮನಕ್ಕೆ ಬಂದಿದೆ.

    ಈ ದಾಳಿಗಳಲ್ಲಿ ಸುಮಾರು 94 ಕೋಟಿ ರೂ. ನಗದು, 8 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳು ಸೇರಿ ಒಟ್ಟು 102 ಕೋಟಿ ರೂ. ಮೌಲ್ಯದ ಅಕ್ರಮ ಸಂಪಾದನೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರ ಬಳಿ ವಿದೇಶದ 30 ಲಕ್ಸುರಿ ವಾಚುಗಳು ಕೂಡ ಸಿಕ್ಕಿವೆ. ಇವೆಲ್ಲದರ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

    ನಾಳೆ ವಿಶ್ವ ಆಹಾರ ದಿನ: ನಾವು ಆಹಾರವನ್ನು ಹೇಗೆ ನೋಡಬೇಕು, ಹೇಗೆ ಸೇವಿಸಬೇಕು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts