ಐಟಿ ದಾಳಿ ವಿಷಯದಲ್ಲಿ ನಟ ಯಶ್‌ ಮನಸಾಕ್ಷಿ ವಿಷಯ ಪ್ರಸ್ತಾಪಿಸಿದ್ದೇಕೆ?

ಬೆಂಗಳೂರು: ವಿಜಯ್ ಕಿರಗಂದೂರು ಮತ್ತು ತಿಮ್ಮೆಗೌಡ ವಿಚಾರಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆ.ಜಿ.ಎಫ್. ವಿಚಾರ ಎಂದೇನು ಇಲ್ಲ. ಅವರ ಕೆಲಸ ಅವರು ಮಾಡಿದ್ದಾರೆ ಎಂದು ನಟ ಯಶ್‌ ತಿಳಿಸಿದ್ದಾರೆ.

ಅದಕ್ಕೆ ಸಂಬಂಧಪಟ್ಟವರ ವಿಚಾರಣೆ ನಡೆಸಿದ್ದಾರೆ. ಹೆಂಡತಿ, ಮಗಳನ್ನು ಮಿಸ್ ಮಾಡಿಕೊಂಡೆ. ಇದು ಹೊಸ ವಿಚಾರ. ಅದರ ಪ್ರೊಸೀಜರ್ ಮಾಡಿದ್ದಾರೆ. ಕೆಲವರು ಅವಕಾಶವನ್ನು ಬಳಸಿಕೊಂಡು ಅಷ್ಟು, ಇಷ್ಟು ಸಿಕ್ಕಿದೆ ಎಂದು ವರದಿ ಮಾಡಿದ್ದಾರೆ. ಯಾವುದೋ ಒಂದು ಮಾಧ್ಯಮದವರು ಚಿಟ್‌ಫಂಡ್‌ ನಡೆಸ್ತಿದಾರೆ ಎಂದಿದ್ದಾರೆ. ಈ ರೀತಿಯ ವರದಿ ಮಾಡುವ ಮುನ್ನ ಆ ಮಾಧ್ಯಮದವರು ಮನಸಾಕ್ಷಿಯನ್ನು ಇಟ್ಟುಕೊಂಡು ವರದಿ ಮಾಡಬೇಕು ಎಂದರು.

ಐಟಿ ಅಧಿಕಾರಿಗಳು ಅವರ ಕರ್ತವ್ಯ ನಿಭಾಯಿಸಿದ್ದಾರೆ. ನಮ್ಮಿಂದ ಅವರಿಗೆ ಬೇಕಿರುವ ಮಾಹಿತಿಯನ್ನು ನಾವು ನೀಡಿದ್ದೇವೆ. ವಿಚಾರಣೆಗೆ ಕರೆದರೆ ಅದಕ್ಕೆ ಸಹಕರಿಸುತ್ತೇವೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)