ಐಟಿ ದಾಳಿ ಕುರಿತು ನಟ ಶಿವರಾಜ್‌ಕುಮಾರ್‌ ಮೊದಲ ಪ್ರತಿಕ್ರಿಯೆ ಇದು

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರ ಮತ್ತು ನಿರ್ಮಾಪಕರ ಮನೆ ಮೇಲೆ ನಡೆದ ಐಟಿ ದಾಳಿ ಕುರಿತು ದಾಳಿಯ ನಂತರ ಇದೇ ಮೊದಲ ಬಾರಿಗೆ ನಟ ಶಿವರಾಜ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದು, ಐಟಿ ದಾಳಿಯಿಂದ ನನಗೂ ಕೂಡ ಶಾಕ್ ಆಗಿದೆ ಎಂದಿದ್ದಾರೆ.

ಕಳೆದ 2 ದಿನಗಳಿಂದಲೂ ಐಟಿ ಅಧಿಕಾರಿಗಳು ನಿರಂತರವಾಗಿ ದಾಖಲೆಗಳ ಪರಿಶೀಲನೆ ನಡೆಸಿದ್ದರು.
ಹೈಬಜೆಟ್ ಸಿನಿಮಾ ಮಾಡಿದ್ದಕ್ಕೆ ದಾಳಿ ನಡೆದಿದ್ಯಾ ಗೊತ್ತಿಲ್ಲ? ಆದರೆ ಸ್ವಲ್ಪ ಇರಿಟೇಷನ್ ಆಯ್ತು. ಆದರೆ ಅವರ ಕೆಲಸವನ್ನು ಅವರು ಮಾಡಿದ್ದಾರೆ. ಐಟಿ ಅಧಿಕಾರಿಗಳು ಸ್ವಲ್ಪ ಡಾಕ್ಯುಮೆಂಟ್ ತೆಗೆದುಕೊಂಡು ಹೋಗಿದ್ದಾರೆ. ಅವರು ವಿಚಾರಣೆಗೆ ಕರೆದರೆ ನಾನು, ಗೀತಾ ಹೋಗಬೇಕಾಗುತ್ತದೆ ಎಂದು ಹೇಳಿದರು.

ಐಟಿ ದಾಳಿ ವೇಳೆ ನಮ್ಮ ಮೊಬೈಲ್​​ಗಳನ್ನು ವಶಕ್ಕೆ ಪಡೆದಿದ್ದರು. ಐಟಿ ದಾಳಿ ಆದಾಗ ನಾನು ಮಲಗಿದ್ದೆ. ಐಟಿ ಅಧಿಕಾರಿಗಳು ಬಂದು ಬಾಗಿಲು ತಟ್ಟಿದರು. ಅಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಮ್ಮ ಮನೆ ಮೇಲೆ ದಾಳಿ ನಡೆದಿತ್ತು. ನಾನಿನ್ನೂ ಅಪ್ಪು ಜತೆ ಈ ಬಗ್ಗೆ ನಾನು ಮಾತನಾಡಿಲ್ಲ ಎಂದರು. (ದಿಗ್ವಿಜಯ ನ್ಯೂಸ್)