ಐಟಿ ಅಧಿಕಾರಿಗಳ ವಿಚಾರಣೆಗೆ ನಟ ಯಶ್‌ ಹಾಜರು

ಬೆಂಗಳೂರು: ವಿಚಾರಣೆಗೆ ಹಾಜರಾಗದೆ ಬೇರೆಡೆ ಶೂಟಿಂಗ್ ಇದೆ ಎಂದು ನೆಪ ಹೇಳಿದ್ದ ನಟ ಯಶ್ ಅವರಿಂದು ತಮ್ಮ ತಾಯಿ ಪುಷ್ಪಾ ಅವರೊಂದಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಐಟಿ ದಾಳಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ಐಟಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದ ಅವರು ಆಡಿಟರ್​ ಕಚೇರಿಗೆ ಹೋಗಿ ಬರುತ್ತಿದ್ದರು. ಬೆಂಗಳೂರಿನಲ್ಲೇ ಇದ್ದರೂ ವಿಚಾರಣೆಗೆ ಮಾತ್ರ ಹಾಜರಾಗಿರಲಿಲ್ಲ.

ಶೂಟಿಂಗ್ ಇದೆ ಬೆಂಗಳೂರಿನಿಂದ ಹೊರಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದ ಯಶ್ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದರು. ಯಾವುದೇ ಶೂಟಿಂಗ್‌ನಲ್ಲೂ ಭಾಗಿಯಾಗಿರಲಿಲ್ಲ. ಆಡಿಟರ್‌ಗಳ ಮನೆ-ಕಚೇರಿಗೆ ಅಲೆಯುತ್ತಿದ್ದ ಯಶ್ ಮೇಲೆ ಐಟಿ ಗುಪ್ತಚರ ಇಲಾಖೆ ಕಣ್ಣಿಟ್ಟಿತ್ತು.

ನಿನ್ನೆಯಷ್ಟೇ ಮಧ್ನಾಹ್ನ 2 ಗಂಟೆಗೆ ಅಧಿಕಾರಿಗಳು ಶೇಷಾದ್ರಿಪುರದಲ್ಲಿರುವ ಯಶ್ ಆಡಿಟರ್ ಬಸವರಾಜ್ ಕಚೇರಿ ಮೇಲೆ ದಾಳಿ ನಡೆಸಿ ಕೆಲ ಮಹತ್ವದ ದಾಖಲೆಗಳನ್ನು ಪತ್ತೆ ಹಚ್ಚಿ ಕೊಂಡೊಯ್ದಿದ್ದರು. (ದಿಗ್ವಿಜಯ ನ್ಯೂಸ್)

2 Replies to “ಐಟಿ ಅಧಿಕಾರಿಗಳ ವಿಚಾರಣೆಗೆ ನಟ ಯಶ್‌ ಹಾಜರು”

  1. ಐ ಟಿ ಇಲಾಖೆಯಿಂದ ತಪ್ಪಿಸಿಕೊಂಡು ತಿರುಗುವುದು ಸರಿಯಲ್ಲ. ದರ್ಶನ್ ರವರ ರೀತಿ ನೀತಿ ಪಾಲಸಿ ತಮ್ಮ ಮರ್ಯಾದೆಯು ಬೀದಿ ಪಾಲಾಗದಂತೆ ನೋಡಿಕೊಳ್ಳುವುದು ಎಲ್ಲಾ ರೀತಿಯಿಂದಲೂ ಸರಿಯಾದದ್ದು. ಇದು ಪ್ರತಿಯೊಬ್ಬ ದೇಶದ ನಾಗರೀಕನು ಅಳವಡಿಸಿಕೊಳ್ಳಬೇಕಾದಂತಹ ನಿಯಮವಾಗಿದೆ.

Leave a Reply

Your email address will not be published. Required fields are marked *