ಐಟಿ ಅಧಿಕಾರಿಗಳು ಟಾರ್ಗೆಟ್‌ ಮಾಡಿಲ್ಲ, ಆದರೆ ಕಾರಣ ಇರುತ್ತದೆ: ನಟ ಸುದೀಪ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನ ನಟ, ನಿರ್ಮಾಪಕರ ಮೇಲೆ ನಡೆದ ಐಟಿ ದಾಳಿಯಾದ ಬಳಿಕ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್‌ ಪ್ರಿತಿಕ್ರಿಯೆ ನೀಡಿದ್ದು, ಯಾರೂ ಟಾರ್ಗೆಟ್ ಮಾಡಿಲ್ಲ ಅವರು ಮಾಡಿರುವುದನ್ನು ಹೊಗಳಬೇಕು ಎಂದು ಹೇಳಿದ್ದಾರೆ.

ಅವರು ಬಂದಿದ್ದಾರೆ ಅಂದರೆ ಏನೋ ಕಾರಣ ಇರುತ್ತದೆ. ಊಹಾಪೋಹಗಳು ಹೆಚ್ಚಾಗಿವೆ. ನನಗಿದು ಮೊದಲು. ನಾವು ಸರಿಯಾಗಿದ್ದರೆ ಭಯ ಪಡುವ ಅವಶ್ಯಕತೆಯೇ ಇಲ್ಲ ಎಂದರು.

ನಿರ್ದೇಶಕರ ಸಂಘದ ಉದ್ಘಾಟನೆಗೆ ತಡವಾಗಿ ಆಗಮಿಸಿದ‌ ಸುದೀಪ್, ಕಾರ್ಯಕ್ರಮ ಇದೆ ಎನ್ನುವುದನ್ನೇ ಮರೆತುಬಿಟ್ಟು ಊರಿಗೆ ಹೊರಟಿದ್ದೆ. ಎರಡು ದಿನಗಳಿಂದ ತುಂಬಾ ಬ್ಯುಸಿ ಇದ್ದೆ. ಮಾತು ಕೊಟ್ಟಿದ್ದೆ ಆದರೆ ತಡವಾಗಿದೆ. ಮರೆತಿದ್ದಕ್ಕೆ ಕ್ಷಮೆಯಿರಲಿ ಎಂದು ಹೇಳಿದರು.

ನಿರ್ದೇಶಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಲು ಸಿದ್ಧ. ಯಾವುದೇ ಸಿನಿಮಾ ಗೆದ್ದಾಗಲೂ ಕ್ರೆಡಿಟ್ ಸಿಗಬೇಕಾಗಿದ್ದು ನಿರ್ದೇಶಕನಿಗೆ. ಆದರೆ, ನಿರ್ದೇಶಕರಿಗೆ ಕ್ರೆಡಿಟ್ ಸಿಗುವುದಿಲ್ಲ. ನನಗೂ ನಿರ್ದೇಶಕರ ಸಂಘದ ಕಾರ್ಡ್ ಇರುವುದು ಹೆಮ್ಮೆ ಎನಿಸಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)