ಸಚಿವ ಪುಟ್ಟರಾಜು, ರಿಜ್ವಾನ್​ಗೂ ಐಟಿ ಶಾಕ್: ಸ್ನೇಹಿತರು-ಸಂಬಂಧಿಕರ ಮನೆ-ಕಚೇರಿಗಳ ಮೇಲೆ ದಾಳಿ

ಬೆಂಗಳೂರು/ಮೈಸೂರು: ಲೋಕಸಭಾ ಚುನಾವಣೆ ಮತದಾನ ಹತ್ತಿರವಾಗುತ್ತಿದಂತೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಗುರುವಾರ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜುಗೆ ಸೇರಿದ ಮೈಸೂರಿನ ನಿವಾಸ ಮತ್ತು ಬೆಂಗಳೂರು ನಗರ ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಚುನಾವಣಾ ಪ್ರಚಾರ ಕಚೇರಿ ಹಾಗೂ ಪರಿಚಿತರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಡಿಕನ್ಸನ್ ರಸ್ತೆಯ ಪ್ರಚಾರ ಕಚೇರಿಗೆ ಚುನಾವಣಾಧಿಕಾರಿಗಳ ಜತೆ ತೆರಳಿದ ಅಧಿಕಾರಿಗಳು, ಪರಿಶೀಲನೆ ನಡೆಸಿದರು. ನಗರದ ಬೇರೆ ಬೇರೆ ಭಾಗಗಳಲ್ಲಿ ಅರ್ಷದ್ ಪರಿಚಿತರ ಮನೆ, ಕಚೇರಿ ಶೋಧ ನಡೆದಿದೆ. ನಗರದ ಪ್ಯಾಲೇಷ್ ಡೆಕೊರೇಷನ್ ಕಾಂಟ್ರಾಕ್ಟರ್, ಗೋಲ್ಡನ್ ಹ್ಯಾಚರೀಸ್ ಹಾಗೂ ರಿಯಲ್ ಎಸ್ಟೇಟ್, ಮನೆ-ಕಚೇರಿಗಳು ಸೇರಿ 20 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಚುನಾವಣೆ ಘೊಷಣೆ ನಂತರ 2ನೇ ಬಾರಿ ಮೈಸೂರಿನಲ್ಲಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ನಿವಾಸದಲ್ಲಿ 3 ಗಂಟೆ ತಪಾಸಣೆ ನಡೆಸಿದರು. ಬೃಂದಾವನ ಬಡಾವಣೆ ಹಳೇ ಜಾವಾ ಫ್ಯಾಕ್ಟರಿ ಬಳಿಯ ಮೈಸೂರಿನ ಸಂಕಲ್ಪ್ ಸೆಂಟ್ರಲ್ ಪಾರ್ಕ್ ಅಪಾರ್ಟ್​ವೆುಂಟ್​ನ 5ನೇ ಮಹಡಿಯಲ್ಲಿ ಸಚಿವರ ಮನೆ ಮೇಲೆ ಮಧ್ಯಾಹ್ನ 1 ಗಂಟೆಗೆ 15 ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಪರಿಶೀಲಿಸಿವೆ. ಕೆಲ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ಕುರಿತು ಐಟಿ ಇಲಾಖೆ ಅಧಿಕೃತ ಮಾಹಿತಿ ನೀಡಿಲ್ಲ. 10 ದಿನಗಳ ಹಿಂದೆ ವಿಜಯನಗರದ ಪುಟ್ಟರಾಜು ಅಣ್ಣನ ಮಗ ಜಿಪಂ ಸದಸ್ಯ ಅಶೋಕ್ ಮತ್ತು ಕಾಂಗ್ರೆಸ್ ಮುಖಂಡ ರೇವಣ್ಣ ನಾಗನಹಳ್ಳಿಯ ಮನೆ ಮೇಲೆ ಐಟಿ ದಾಳಿ ನಡೆದಿತ್ತು.

ಚುನಾವಣಾ ಪ್ರಚಾರ ಕಚೇರಿ ಮೇಲೆ ಐಟಿ ದಾಳಿ ನಡೆದಿದೆ. ನನ್ನ ಸ್ನೇಹಿತರು-ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ. ದಾಳಿಗೆ ಒಳಗಾದವರ ಪೈಕಿ ಕೆಲವರು ನನಗೆ ಪರಿಚಯ ಇಲ್ಲ. ಅವರ ಬಳಿ ಐಟಿ ಅಧಿಕಾರಿಗಳು ನನ್ನ ಪರಿಚಯ ಇದೆಯೇ ಎಂದು ಕೇಳಿದ್ದಾರೆ. ದಾಳಿಯಿಂದ ನಾನು ಹೆದರಲ್ಲ.

| ರಿಜ್ವಾನ್ ಅರ್ಷದ್ ಬೆಂ.ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಏ.25ಕ್ಕೆ ವಿಚಾರಣೆ

ಏ.25ಕ್ಕೆ ವಿಚಾರಣೆಗೆ ಹಾಜರಾಗುವಂತೆ ಪುಟ್ಟರಾಜು ಪುತ್ರ ಶಿವು ಹೆಸರಿಗೆ ನೋಟಿಸ್ ನೀಡಿ ಐಟಿ ಅಧಿಕಾರಿಗಳು ತೆರಳಿದ್ದಾರೆ. ದಾಳಿ ವೇಳೆ ಮನೆಯಲ್ಲಿ ಅಡುಗೆ ಭಟ್ಟರ ಹೊರತಾಗಿ ಯಾರೂ ಇರಲಿಲ್ಲ. ಅವರ ಫೋನ್ ಸ್ವಿಚ್​ ಆಫ್ ಮಾಡಿಸಿ ತಪಾಸಣೆ ನಡೆಸಲಾಯಿತು. ವಿಷಯ ತಿಳಿದ ಸಚಿವ ಪುಟ್ಟರಾಜು ಫೋನ್ ಮಾಡಿ ಪುತ್ರ ಶಿವುಗೆ ಮನೆಗೆ ತೆರಳುವಂತೆ ಸೂಚಿಸಿದ್ದರು. ಶಿವು ಬರುವಷ್ಟರಲ್ಲಿ ತಪಾಸಣೆ ಮುಗಿಸಿದ ಅಧಿಕಾರಿ ಗಳು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ತೆರಳಿದ್ದರು. ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಶಿವು, ಇದೊಂದು ರಾಜಕೀಯಪ್ರೇರಿತ ದಾಳಿಯಾಗಿದ್ದು, ಅಧಿಕಾರಿಗಳು ಬರಿಗೈಯಲ್ಲಿ ವಾಪಸಾಗಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರನ್ನು ಗೆಲ್ಲಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಲೋಕಸಭೆ ಚುನಾವಣೆ ವೇಳೆ

ಕೇಂದ್ರ ಸರ್ಕಾರವು ಐಟಿ ದಾಳಿಗಳ ಮೂಲಕ ಪ್ರತಿಪಕ್ಷಗಳನ್ನು ಬೆದರಿಸುವ ಕೆಲಸ ಮಾಡುತ್ತಿದ್ದು, ಚುನಾವಣೆ ಆಯೋಗ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ.

| ದಿನೇಶ ಗುಂಡೂರಾವ್

ಕೆಪಿಸಿಸಿ ಅಧ್ಯಕ್ಷ

ಮೈತ್ರಿ ಪಕ್ಷದವರ ಮೇಲಷ್ಟೇ ಏಕೆ ದಾಳಿ?

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರು ಹಾಗೂ ಅವರ ಬೆಂಬಲಿಗರ ಮೇಲಷ್ಟೇ ಐಟಿ ದಾಳಿ ನಡೆಯá-ತ್ತಿದೆ. ಬಿಜೆಪಿಯವರ ಮೇಲೇಕೆ ದಾಳಿ ನಡೆಯುತ್ತಿಲ್ಲ? ಇದು ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಪ್ರಧಾನಿ ಮೋದಿ ವಿರá-ದ್ಧ ಹರಿಹಾಯ್ದಿದ್ದಾರೆ. ಬಾಗಲಕೋಟೆಯಲ್ಲಿ ಗುರá-ವಾರ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಮತ ಯಾಚಿಸಿ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಗೆಲ್ಲುತ್ತಾರೆ ಎನ್ನುವ ವರದಿ ಮೋದಿಗೆ ತಲá-ಪಿದೆ. ಇದೇ ಕಾರಣಕ್ಕೆ ಐಟಿ ರೇಡ್ ಮಾಡಿಸá-ತ್ತಿದ್ದಾರೆ ಎಂದು ಆರೋಪಿಸಿದರು.

ಮುಂದುವರಿದ ಐಟಿ ದಾಳಿ

ದಾವಣಗೆರೆ: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಪ್ತರು ಎನ್ನಲಾದ ಪ್ರಥಮ ದರ್ಜೆ ಗುತ್ತಿಗೆದಾರ ಉದಯ ಶಿವಕುಮಾರ್ ಅವರ ಮನೆ, ಇನ್ನಿತರ ಕಡೆಗಳಲ್ಲಿ ಗುರುವಾರವೂ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದರು. ಹುಬ್ಬಳ್ಳಿ, ಬೆಳಗಾವಿ ಹಾಗೂ ಬೆಂಗಳೂರಿನ ಒಟ್ಟು 17 ಮಂದಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿವೇಕಾನಂದ ಬಡಾವಣೆಯಲ್ಲಿನ ಮನೆಯಲ್ಲಿ ದಾಖಲೆ ಪತ್ರಗಳನ್ನು ಪರಿಶೀಲಿಸಿದರು ಎನ್ನಲಾಗಿದೆ.