47 ಗಂಟೆಗಳ ನಂತರ ಕಿಚ್ಚನ ಮನೆಯಲ್ಲಿ ಐಟಿ ಬೇಟೆ ಅಂತ್ಯ

ಬೆಂಗಳೂರು: ಎರಡು ದಿನಗಳಿಂದ ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ ಅವರ ಜೆ.ಪಿ.ನಗರ ನಿವಾಸದಲ್ಲಿ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನಡೆಸುತ್ತಿದ್ದ ದಾಳಿ ಶನಿವಾರ ಬೆಳಗ್ಗೆ ಅಂತ್ಯಗೊಳಿಸಿದ್ದಾರೆ.

ತೆರಿಗೆ ಪಾವತಿ ವಂಚನೆ ಅನುಮಾನದ ಮೇಲೆ ಸತತ 47 ಗಂಟೆಯಿಂದ ಸುದೀಪ್ ಮನೆಯಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದ ಎಂಟು ಐಟಿ ಅಧಿಕಾರಿಗಳು ಬೆಳಗ್ಗೆ 5.30ರ ಸುಮಾರಿಗೆ ಪರಿಶೀಲನೆ ಮುಕ್ತಾಯಗೊಳಿಸಿ, ದಾಖಲೆಗಳನ್ನು ತೆಗೆದುಕೊಂಡು ಹೊಗಿದ್ದಾರೆ ಎಂದು ತಿಳಿದುಬಂದಿದೆ.

ಎರಡು ದಿನದ ಮ್ಯಾರಥಾನ್​ ದಾಳಿಯಲ್ಲಿ ಸುದೀಪ್ ಅವರ ಆದಾಯ ಮೂಲ, ಹೂಡಿಕೆಗಳು, ಬ್ಯಾಂಕ್ ವಹಿವಾಟು, ರಿಯಾಲಿಟಿ ಶೋಗಳ ಸಂಭಾವನೆ, ಚಿತ್ರಗಳ ಸಂಭಾವನೆ, ಚಿನ್ನಾಭರಣ ಸೇರಿ ಎಲ್ಲಾ ಆಯಾಮಗಳಲ್ಲಿ‌ ತನಿಖೆ ನಡೆಸಿದ ಐಟಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)

2 Replies to “47 ಗಂಟೆಗಳ ನಂತರ ಕಿಚ್ಚನ ಮನೆಯಲ್ಲಿ ಐಟಿ ಬೇಟೆ ಅಂತ್ಯ”

  1. ಇಷ್ಟು ವರ್ಷ ಸುಮ್ಮನಿದ್ದ ಆದಾಯ ತೆರಿಗೆಯವರು ಮಂಪರಿನಿಂದ ಹೊರಬಂದಂತಿದೆ.

  2. ಭ್ರಷ್ಟರ ಮೇಲೆ,ದೊಡ್ಡ ದೊಡ್ಡ ಅಧಿಕಾರಿಗಳ ಮೇಲೆ, ಕೋಟಿ ಕೋಟಿ ಲೂಟಿ ಮಾಡೋ ರಾಜಕಾರಣಿಯವರ ಮೇಲೆ ಮಾಡಿ ಅದನ್ನು ಬಿಟ್ಟು ಕಲಾವಿದರ ಮೇಲೆ ಯಾಕೆ ಮಾಡುತ್ತೀರಾ

Comments are closed.