
ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಸಿನಿಮಾದಲ್ಲಿ ಮಿಂಚಬೇಕು ಅಂತ ತುಂಬ ಜನ ಕನಸು ಕಾಣುತ್ತಾರೆ. ಆದರೆ, ಕಾರಣಾಂತರಗಳಿಂದ ಚಿತ್ರರಂಗಕ್ಕೆ ಬರಲು ಸಾಧ್ಯವಾಗುವುದೇ ಇಲ್ಲ. ಅವರಲ್ಲಿ ಕೆಲವರು ಸಿನಿಮಾ ಆಸೆಯನ್ನು ಜೀವಂತವಾಗಿರಿಸಿಕೊಂಡು, ಪೋಷಿಸುತ್ತಿರುತ್ತಾರೆ. ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ಒಂದು ಹಂತಕ್ಕೆ ಬಂದ ಬಳಿಕ ನಟನೆಯ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಅವರಲ್ಲಿ ಕಾಡ ನಟರಾಜ್ ಕೂಡ ಒಬ್ಬರು. ಐಟಿ ಕ್ಷೇತ್ರದಲ್ಲಿದ್ದ ಅವರು, “ಕರಿಕಾಡ’ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರು ಚಿತ್ರಕ್ಕೆ ಕಥೆ ಬರೆದು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.
“ಹುಲಿಬೇಟೆ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಗಲ್ಲಿ ವೆಂಕಟೇಶ್ ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ನಿರ್ದೇಶಕ ಸಂತೋಷ್ ಆನಂದ್ರಾಮ್ “ಕರಿಕಾಡ’ ಟೈಟಲ್ ಟೀಸರ್ ಲಾಂಚ್ ಮಾಡಿ ಶುಭ ಹಾರೈಸಿದರು. “ಕರಿಕಾಡ’ ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗುತ್ತಿದ್ದು, ಎರಡು ಭಾಷೆಗಳಲ್ಲೂ ಟೈಟಲ್ ಟೀಸರ್ ಅನಾವರಣ ಮಾಡಲಾಗಿದೆ. ಚಿಕ್ಕಮಗಳೂರು, ಕಳಸ, ಕುದುರೆಮುಖ, ಮಂಡ್ಯ, ಚನ್ನರಾಯಪಟ್ಟಣದಲ್ಲಿ ಶೂಟಿಂಗ್ ಮಾಡಲಾಗಿದೆ.
ಕಾಡ ನಾಗರಾಜ್ಗೆ ನಿರೀಕ್ಷಾ ಶೆಟ್ಟಿ ಜೋಡಿಯಾಗಿದ್ದಾರೆ. ಯಶ್ ಶೆಟ್ಟಿ, ಮಂಜು ಸ್ವಾಮಿ, ಗೋವಿಂದೇಗೌಡ, ದಿವಾಕರ್, ಕಾಮಿಡಿ ಕಿಲಾಡಿ ಸೂರ್ಯ, ರಾಕೇಶ್ ಪೂಜಾರಿ, ವಿಜಯ್ ಚೆಂಡೂರು, ಕರಿಸುಬ್ಬು ಕಲಾಬಳಗದಲ್ಲಿದ್ದಾರೆ. ಅತಿಶಯ್ ಜೈನ್, ಶಶಾಂಕ್ ಶೇಷಗಿರಿ ಸಂಗೀತ, ಜೀವನ್ ಗೌಡ ಛಾಯಾಗ್ರಹಣ, ದೀಪಕ್ ಸಿ.ಎಸ್ ಸಂಕಲನ ಚಿತ್ರಕ್ಕಿದೆ.