ಸಿಮ್​ಕಾರ್ಡ್​ ಕೊಡದ್ದಕ್ಕೆ ಕೋಲಾರದ ವೈದ್ಯಕೀಯ ಕಾಲೇಜು ಸಿಬ್ಬಂದಿಗೆ ಹಲ್ಲೆ ಮಾಡಿದರಾ ಐಟಿ ಅಧಿಕಾರಿಗಳು?

ಕೋಲಾರ: ಇಲ್ಲಿನ ದೇವರಾಜ ಅರಸು ಮೆಡಿಕಲ್​ ಕಾಲೇಜು ಮೇಲಿನ ದಾಳಿ ನಡೆಸಿದ್ದ ಸಂದರ್ಭದಲ್ಲಿ ತನಿಖೆಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಕಾಲೇಜಿನ ಸಿಬ್ಬಂದಿ ಮೇಲೆ ಐಟಿ ಅಧಿಕಾರಿಗಳು ಹಲ್ಲೆ ಮಾಡಿದರು ಎಂಬ ಆರೋಪ ಕೇಳಿ ಬಂದಿದೆ.

ತನಿಖೆಗೆ ಅಸಹಕಾರ ತೋರಿದ್ದಲ್ಲದೆ, ಮೊಬೈಲ್​ಫೋನ್​ ಸಿಮ್​ಕಾರ್ಡ್​ ಕೊಡುವಂತೆ ಅಧಿಕಾರಿಗಳು ಕೇಳಿದಾಗ, ದೇವರಾಜ ಅರಸು ಮೆಡಿಕಲ್​ ಕಾಲೇಜಿನ ಕ್ಯಾಶಿಯರ್​ ನಾರಾಯಣಸ್ವಾಮಿ ಅದನ್ನು ಕೊಡಲು ನಿರಾಕರಿಸಿದ್ದರು. ಅಲ್ಲದೆ, ಅದನ್ನು ಬೇಕೆಂದೇ ಬಿಸಾಡಿದ್ದರು ಎನ್ನಲಾಗಿದೆ.

ಇದರಿಂದ ಸಿಟ್ಟಿಗೆದ್ದ ಐಟಿ ಅಧಿಕಾರಿಗಳು ನಾರಾಯಣ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ಮೂರು ದಿನಗಳಿಂದ ನಡೆದಿದ್ದ ಐಟಿ ಅಧಿಕಾರಿಗಳ ದಾಳಿ ಶನಿವಾರ ಮುಕ್ತಾಯವಾದ ಹಿನ್ನೆಲೆಯಲ್ಲಿ ಈ ಸಂಗತಿಯನ್ನು ಬಹಿರಂಗಗೊಳಿಸಲಾಗಿದೆ ಎಂದು ಹೇಳಲಾಗಿದೆ. ಕಳೆದ ಮೂರು ದಿನಗಳಿಂದ ನಾರಾಯಣ ಸ್ವಾಮಿ ಕೂಡ ಐಟಿ ಅಧಿಕಾರಿಗಳಿಂದ ವಿಚಾರಣೆಗೆ ಒಳಪಟ್ಟಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *