ಒಳಶತ್ರುಗಳ ನಿಗ್ರಹಕ್ಕೆ ಇದು ಸಕಾಲ

ಸಂವಿಧಾನದ ವಿಧಿ 370, 35 (ಎ) ಜಮ್ಮು-ಕಾಶ್ಮೀರದಲ್ಲಿ ರದ್ದಾದ ಪ್ರಸಂಗದ ಸಂಸತ್ತಿನ ಸಂದರ್ಭ ಭಾಷಣಗಳಲ್ಲಿ ಗುಲಾಂ ನಬಿ ಆಜಾದ್, ಪಿ.ಚಿದಂಬರಂ, ಲೋಕಸಭೆಯಲ್ಲಿ ಕಾಂಗ್ರೆಸ್ಸಿನ ನಾಯಕ ಅಧೀರ್ ಚೌಧರಿ ಇಂಥವರು ನಿರೀಕ್ಷಿತ ಜಾಡಿನಲ್ಲೇ ವಿಷಕಾರಿ ಭಾಷಣ ಮಾಡಿದ್ದಾರೆ. ‘ನಿರೀಕ್ಷಿತ’ ಹೇಗೆ ಎಂದರೆ, ಯಾರೆಲ್ಲ ಪಾಕಿಸ್ತಾನ ನಿರ್ವಪಕರೋ, ಕಾಶ್ಮೀರ ಸಮಸ್ಯಾ ನಿರ್ವತೃಗಳೋ, ಯಾರೆಲ್ಲ ಹಿಂದೂ ಆಸಕ್ತಿಗಳ ವಿರುದ್ಧ, ಪೊಳ್ಳು ಸೆಕ್ಯುಲರಿಸಂವಾದದ ಅಡಿಯಲ್ಲಿ ಅಲ್ಪಸಂಖ್ಯಾತರೆಂಬ ವಿಶ್ವಾಸಾರ್ಹರ ವೋಟುಬ್ಯಾಂಕುಗಳಿಗಾಗಿ ರಾಷ್ಟ್ರವಿರೋಧಿ ಕೃತ್ಯಗಳಲ್ಲೇ ನಮ್ಮನ್ನು ಈ 72 ವರ್ಷಗಳ ಕಾಲ ಭೂಲೋಕ ನರಕಕ್ಕೆ ತಳ್ಳಿದರೋ, ಅವರು ತಮ್ಮ ಮೂಲಪುರುಷರನ್ನು ರಾಷ್ಟ್ರದ್ರೋಹಿಗಳನ್ನು ಒಪ್ಪಿ, ಸ್ವಂತಿಕೆ ತೋರಲು ನಿರಾಕರಿಸಿದರು. ಕರ್ಣ, ದುಃಶಾಸನ, ಶಕುನಿಗಳು ಕೊನೆಯ ತನಕ ದುರ್ಯೋಧನನನ್ನೇ ಎತ್ತಿ ಹಿಡಿದರು, ಧೃತರಾಷ್ಟ್ರನನ್ನೇ ಹೊಗಳಿದರು, ಪಾಂಡವರನ್ನೇ ದೂಷಿಸಿ ಹಿಂಸಿಸಿದರು. ಶ್ರೀಕೃಷ್ಣನನ್ನೇ ಬಂಧಿಸಲೂ ಯತ್ನಿಸಿದರು. ಅವನನ್ನು ನಾನಾ ರೀತಿಗಳಲ್ಲಿ, ನಾನಾ ಶಬ್ದಗಳಲ್ಲಿ ನಿಂದಿಸಿದರು. ಗುಣಗಳನ್ನೇ ದೋಷಗಳನ್ನಾಗಿ ಸಾರಿ, ದೋಷಪ್ರಸಾರ ಕೂಟಗಳನ್ನು ರಚಿಸಿದರು. ಅಪಾರ ಅನುಯಾಯಿಗಳನ್ನು ಇಂದಿನವರೆಗೂ ಬಿಟ್ಟುಹೋದರು! ಅದೇ ಅಲ್ಲವೇ ಇಂದಿನ ಮಹಾಭಾರತದ ಪುನರಾವರ್ತನೆ?

ಸೌದಿ ಅರೇಬಿಯಾ, ಯುಎಇ ದೊರೆ ಹೇಳುತ್ತಾರೆ-‘ಕಾಶ್ಮೀರವು ಹಿಂದೂಗಳಿಗೆ ಸೇರಿದ್ದು. ಅವರು ಅಲ್ಲಿ ನಡೆದ ತಪು್ಪಗಳನ್ನು ಸರಿಪಡಿಸಿಕೊಳ್ಳಲು ಹಕ್ಕು ಹೊಂದಿದ್ದಾರೆ’ ಅಂತ. ಈಗ ಕಾಂಗ್ರೆಸ್ಸಿಗರು- ‘ಮೋರ್ ಮುಸ್ಲಿಂ ದೆನ್ ಒರಿಜನಲ್ ಮುಸ್ಲಿಂ’ ಎಂಬ ದುರ್ಗತಿಗೆ ಇಳಿದಿದ್ದಾರೆ. ಚಿದಂಬರಂ ಹೇಳಿದ್ದು-‘ಇನ್ನು ಗಣರಾಜ್ಯಕ್ಕೆ ಹೊಡೆತ ಬೀಳುತ್ತದೆ. ಬೇರಾವ ರಾಜ್ಯವೂ ‘Union territory’  ಆಗಬಹುದು. ಇನ್ನು ಇಂಡಿಯಾ ‘ಹಿಂದೂರಾಷ್ಟ್ರ’ ಆಗಿಬಿಡಬಹುದು. ಇನ್ನು ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯ ತಲೆ ಎತ್ತಬಹುದು. ಇನ್ನು ಮೈನಾರಿಟಿಗಳ ಹಕ್ಕುಗಳು ಇಲ್ಲವಾಗಬಹುದು. ಇನ್ನು ಆಕ್ರಮಿತ ಕಾಶ್ಮೀರವು ಬಿಡುಗಡೆಯಾಗಿ ಮತ್ತೆ ಭಾರತದ ಭಾಗವಾಗಿ ಬಿಡಬಹುದು. ಇನ್ನು ಏಕರೂಪ ದಂಡ ಸಂಹಿತೆ ಜಾರಿಯಾಗಿ ಬಿಡಬಹುದು. ಇನ್ನು ಸಂವಿಧಾನವೂ ಬದಲಾಗಬಹುದು!’ ಅಬ್ಬರವೋ ಅಬ್ಬರ! ಯಾರು ಈ ಚಿದಂಬರಂ? ಏರ್​ಸೆಲ್ ಕಂಪನಿಯ ಹಗರಣದಲ್ಲಿ ಕಾರ್ತಿ ಚಿದಂಬರಂ ಎಂಬ ಸುಪುತ್ರರಿಗೆ ಸಹಾಯ ಮಾಡಲು ಅಧಿಕಾರ ದುರುಪಯೋಗ ಮಾಡಿದ ಅಪರಾಧಕ್ಕಾಗಿ ಬಂಧಿಸಲ್ಪಡಬೇಕಿದ್ದು, ವಾರೆಂಟು ಜಾರಿಯಾಗಿಯೂ, ಬಂಧನ ದಿನಗಳನ್ನು ತಿಂಗಳಾನುಗಟ್ಟಲೆ-ಮಾಜಿ, ಹಾಲಿ ಅಧಿಕಾರಿಗಳ ಶಾಮಿಲಿನಿಂದ ಮುಂದೆ ಮುಂದೆ ತಳ್ಳಿ ಹಾಕುತ್ತ ಇರುವ ವ್ಯಕ್ತಿ! ಅಪರಿಪಕ್ವ ಕಾಂಗ್ರೆಸ್ ನಾಯಕ ಅಧೀರ್ ಚೌಧರಿ ಹೇಳುತ್ತಾರೆ-‘ಇದು ಯುಎನ್​ಒದ ನಿಬಂಧನೆಯ ಉಲ್ಲಂಘನೆ. ಕಾಶ್ಮೀರ ಸಮಸ್ಯೆ ವಿಶ್ವಸಂಸ್ಥೆಯ ಉಸ್ತುವಾರಿಗೆ ಒಳಪಟ್ಟಿದ್ದು. ಅವರನ್ನು ಕೇಳದೆ ವಿಧಿ 370 ರದ್ದು ಮಾಡಿದ್ದು, ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಭಾಜಿಸಿದ್ದು ತಪು್ಪ’ ಅಂತ. ಗುಲಾಂ ನಬಿಯವರದೂ ಈ ‘ಊಳೆ’ಯ ಇನ್ನೊಂದು ಅಪಸ್ವರ!

ಒಂದು ಸುಭಾಷಿತ ಶ್ಲೋಕ ನೆನಪಾಗುತ್ತದೆ. ಒಂಟೆಗಳಿಗೆ ಮದುವೆ ಏರ್ಪಟ್ಟಿದೆ. ಅಲ್ಲಿ ಹೊಗಳುಭಟ್ಟರು, ಸ್ತುತಿಪಾಠಕರು, ವಂದಿಮಾಗಧರು-ಶೋಭಾನೆ ಹೇಳುವವರು, ಮಂಗಳಾಷ್ಟಕ ಹೇಳುವವರಾರು? ಕತ್ತೆಗಳು! ಪರಸ್ಪರ ಹೊಗಳಿಕೊಳ್ಳುತ್ತ ‘ಆಹಾ, ಎಂಥ ರೂಪ!’ ಎಂದು ಕತ್ತೆಗಳು ಹೇಳುವಾಗ, ಇತರ ಬಾಂಧವ ಒಂಟೆಗಳು ಇದನ್ನು ‘ನಿಮ್ಮ ಧ್ವನಿಯೇ ಧ್ವನಿ, ಎಷ್ಟು ಇಂಪು’ ಎನ್ನುತ್ತ ಸಾಗುವ ವಿವಾಹದಂತೆ!

ಉಷ್ಟ್ರಾಣಾ ಚ ವಿವಾಹೇಷು, ಗರ್ದಭಾಃ ಸ್ತುತಿಪಾಠಕಾಃ |

ಪರಸ್ಪರಂ ಪ್ರಶಂಸಂತಿ ಅಹೋ ರೂಪಂ! ಅಹೋಧ್ವನಿಃ ||

ಮನು ಅಭಿಷೇಕ್ ಸಿಂಗ್ವಿ ಅವರ ‘ಖಾಜಿ ನ್ಯಾಯ’ ಕೇಳಿ. ‘ಬಿಜೆಪಿ ಮಾಡಿದ್ದು ರಾಜಕೀಯ ಚತುರತೆಯ ಅಭೂತಪೂರ್ವ ಸಾಧನೆ. ಆದರೆ ಕಾನೂನಿನ ಪ್ರಕಾರ ತಪು್ಪ’ ಅಂತ. ಇವರ ನುಣುಚುಯತ್ನ ಯಾರ ಪರ? ಕಾಂಗ್ರೆಸ್ಸಿನ ನಾಲ್ವರು ಆಪ್ತರ ರಾಜೀನಾಮೆ! ಏಕೆ? ಮೊದಲು ಚರಿತ್ರೆ ನೋಡಿ. ಪಾಕ್ ಸೃಷ್ಟಿ, ಈ ನೆಹರು, ಎಡ್ವಿನಾ, ಮೌಂಟ್ ಬೇಟನ್ ಅವರ ಆಪ್ತ ಒಡನಾಟದ ಫಲ! ಇಬ್ಬರೂ ಈಗ ಇಲ್ಲ. ಈ ಚರಿತ್ರೆಯಲ್ಲ ಈಗ ಬಹಿರಂಗ! ಪಾಕಿಸ್ತಾನ ಈಗ ಒಡೆಯಬೇಕಾದದ್ದು ನ್ಯಾಯವೆಂಬುದು ಇತಿಹಾಸ ತೀರ್ಪ. ಇಲ್ಲಿ ಕಾನೂನು ಏನು ಬಂತು? ಇಂದಿರಾ, ಸಂಯುಕ್ತ ಪಾಕ್ ಒಡೆದಾಗ ಬಾಂಗ್ಲಾ ನಿರ್ಮಾಣ ಮಾಡಿದಾಗ, ಯಾವ ಕಾನೂನು ಅಡ್ಡಿಯಾಯ್ತು? ಶ್ಯಾಂಪ್ರಸಾದ, ಲಾಲ್ ಬಹಾದೂರರು ಕಾನೂನಿನ ಪ್ರಕಾರ ಸತ್ತರೆ? ಇಲ್ಲಿ ಈಗ ಮುತ್ಸದ್ಧಿತನ-ಡಿಪ್ಲೋಮಸಿ ಇರುತ್ತದೆ. ಬ್ರಿಟಿಷರು ಭಾರತ ಹಿಡಿದರಲ್ಲ, ಕಾನೂನು ಪ್ರಕಾರವೇ?

ಕಾಶ್ಮೀರ ಸಮಸ್ಯೆ ನೆಹರುರ ಏಕಸೃಷ್ಟಿ. ಅಲ್ಲದೆ, ಮೆನನ್, ಹಕ್ಸಾರ್, ಮೋಹನಕುಮಾರ ಮಂಗಳಂ, ಈಗ ಗುಲಾಂ ನಬಿ, ಅಹ್ಮದ್ ಪಟೇಲ್, ಎ.ಕೆ.ಆಂಟನಿ, ಕಪಿಲ್ ಸಿಬಲ್ ಇಂಥವರ ಕೊಡುಗೆಗಳು ಈ ದೇಶಕ್ಕೆ ಏನು? ಇನ್ನೂ ಒಳಶತ್ರುಗಳನ್ನೂ, ಪ್ರಾಚೀನ ಅರ್ವಾಚೀನರನ್ನು ಏಕೆ ಹೊಗಳುತ್ತಾರೆ? ಇದು ಇಸ್ರೇಲ್, ಜಪಾನ್, ರಷ್ಯಾ, ಚೀನಾಗಳಲ್ಲಿ ಸಹಿಸಲ್ಪಡುತ್ತಿತ್ತೆ? ಈಗ ಭಾರತದ ಸುರಕ್ಷೆಗಾಗಿ, ಸ್ವಲ್ಪ ಕಾಲ ದೇಶವನ್ನು ತೆಗಳುವ ರಾಜಕೀಯ ಪಕ್ಷಗಳ ಮನ್ನಣೆಯನ್ನು ಹಿಂಪಡೆಯುವುದು ತುಂಬ ಸೂಕ್ತ! ಹೌಹಾರಬೇಡಿ. ಇಂದಿರಾರ ತುರ್ತು ಪರಿಸ್ಥಿರಿ ಹೇರಿಕೆಯೇ ಬೇರೆ-ಸ್ವಾರ್ಥ ಮೂಲದ್ದು. ಇದು ರಾಷ್ಟ್ರಹಿತ ಮೂಲದ್ದು. ಒಬ್ಬ ಸಂಸದರೂ ಹೇಳಿಯಾಗಿದೆ, ‘ಭಾರತದಲ್ಲಿರಲು ಸಹನೆಯಿಲ್ಲದವರು ಪಾಕಿಸ್ತಾನಕ್ಕೆ ಹೋಗಲಿ’ ಅಂತ.

ಇನ್ನು ಚಿದಂಬರರ ಅಪದ್ಧಕ್ಕೆ ಉತ್ತರ-ಭಾರತ ಗಣರಾಜ್ಯದ ವ್ಯವಸ್ಥೆಗೆ ಏನು ಆಪತ್ತು ಬರುತ್ತದೆ? ಬಹಳವೆಂದರೆ ಕಾನೂನು-ಸುವ್ಯವಸ್ಥೆ ಸ್ಥಾಪಿಸಲು ಕೆಲ ಜಾಗಗಳನ್ನು ಕೇಂದ್ರಾಡಳಿತ ಪ್ರದೇಶಕ್ಕೆ ತರಬೇಕಾಗುತ್ತದೆ. ಕೇರಳದ ‘ಮಲಪು್ಪರಂ’ ಜಿಲ್ಲೆ ಭಯೋತ್ಪಾದಕರ ತವರಾದರೆ, ಚಿದಂಬರರ ಪರಿಹಾರವೇನು? ಈಗಿನ ಪಶ್ಚಿಮ ಬಂಗಾಳವು ದಾರಿಗೆ ಬರಲು, ದಾರಿ ತೋರಿಸಿ ಮಾರಾಯ್ರೆ! ಇದು ಹೇಳಿ-ಕೇಳಿ ಹಿಂದೂರಾಷ್ಟ್ರ. ಹಾಗೆಂದರೆ ನೈಜ ಸೆಕ್ಯುಲರಿಸಂನ ರಾಷ್ಟ್ರ, ಯಾರಿಗೂ ಮತಾಧಾರಿತ ವಿಶೇಷ ಸೌಲಭ್ಯಗಳಿಲ್ಲ. ಎಲ್ಲರೂ ಸಮ! ‘ವಿಶೇಷ ಸವಲತ್ತುಗಳು’ ಬ್ರಿಟಿಷರ ಕೊಡುಗೆ, ಕಾಂಗ್ರೆಸ್ಸು ರಕ್ಷಿಸುತ್ತ ಲಾಭ ಪಡೆದಿದ್ದು ಷರಿಯಾ ಜಾರಿ, ಸ್ತ್ರೀಶೋಷಣೆಗಳಿಗೆ ಒತ್ತು ಕೊಟ್ಟದ್ದು ಈಗ ಪ್ರಗತಿಪರ ಭಾರತದಲ್ಲಿ ಏಕೆ ಬೇಕು? ಕ್ರೖೆಸ್ತ, ಇಸ್ಲಾಮಿಯರಿಗೆ ಮತಾಂತರ ಮಾಡುವ ಹಕ್ಕು ಎಂದು ಅಪಾರ್ಥವಾಗುವ ಸಾಂವಿಧಾನಿಕ ಪರಿಚ್ಛೇದಗಳು ಏಕೆ ಬೇಕು? ಅಲ್ಲಲ್ಲವೇ ಮುಳ್ಳು ಚುಚ್ಚುತ್ತಿರುವುದು? ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ವಣವಾದರೆ ಇವರಿಗೇನು ಕಷ್ಟ? ಅಲ್ಲಿದ್ದ ಮಂದಿರವನ್ನು ಕೆಡವಲು ಬಾಬರ್, ಮಿರ್ ಬಾಕಿ ಯಾವ ಕಾನೂನು ಅನುಸರಿಸಿದರು? ಆಕ್ರಮಿತ ಕಾಶ್ಮೀರವು ನಮ್ಮದೇ! ನಿಮ್ಮ ಕೃಷ್ಣ ಮೆನನ್ ವಿಶ್ವಸಂಸ್ಥೆಯಲ್ಲೇ ಹಾಗೆ ಗುಡುಗಿದರಲ್ಲ? ನಮ್ಮದನ್ನು ನಾವು ಪಡೆಯಲು ಕಾನೂನು ಬೇಕೆ? 2008ರಲ್ಲಿ ಮುಂಬೈನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರು ನಡೆಸಿದ ಪೈಶಾಚಿಕ ದಾಳಿಯ ಬಳಿಕ ಆಗಿನ ಅಮೆರಿಕ ಅಧ್ಯಕ್ಷರು ಪ್ರತಿಕ್ರಿಯಿಸಿ-‘ಭಾರತ ತನ್ನನ್ನು ರೂಪಿಸಿಕೊಳ್ಳಲು ಯಾರ ಪರವಾನಗಿಯನ್ನೂ ಪಡೆಯಬೇಕಾಗಿಲ್ಲ’ ಎಂದರಲ್ಲ? ಆ ಮಾತಿನ ಪೋಷಣೆಯನ್ನು ಸೋನಿಯಾ ಕಂಪನಿ ಏಕೆ ಬಳಸಿಕೊಳ್ಳಲಿಲ್ಲ? ಕೇಳಿ. ಉಪಖಂಡದ ಶಾಶ್ವತ ಸಹಬಾಳ್ವೆ, ಶಾಂತಿ ಸ್ಥಾಪನೆಗೆ ಬೇಕಾದ್ದು ಪಾಕ್ ನಾಶ! ಅನ್ಯಾಯದಲ್ಲಿ ಹುಟ್ಟಿದ್ದು ಅನ್ಯಾಯದಿಂದಲೇ ಸಾಯಬೇಕಾದ್ದು ತರ್ಕ. ‘ವಿಷಸ್ಯ ವಿಷಂ ಔಷಧಃ’ ಎನ್ನುತ್ತದೆ ಆಯುರ್ವೆದ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ವಜ್ರವನ್ನು ವಜ್ರದಿಂದಲೇ ಕತ್ತರಿಸಬೇಕು! ಇದೆಲ್ಲ ಅನುಭವ, ಶಾಸ್ತ್ರಗಳಲ್ಲಿ ಹೇಳಿದೆ, ನೋಡಿದ್ದೇವೆ. ಮೋದಿ, ಷಾ ಏನೂ ಹೊಸದು ಮಾಡಲಿಲ್ಲ. ಔಷಧಕ್ಕೆ ಬಗ್ಗದಾಗ ಶಸ್ತ್ರಚಿಂತನೆಯೇ ಬೇಕಾಗುತ್ತದೆ. ಓವೈಸಿ ಉವಾಚ-‘ಇದು ಮೋದಿಯ ಮೂರನೇ ತಪು್ಪ’ ಅಂತ, ಮೊದಲನೆಯದು Demonetisotion,  ಎರಡನೆಯದು Surgical Strike, ಮೂರನೆಯದು ಅವರು ಬಿಟ್ಟದ್ದು ತ್ರಿವಳಿ ತಲಾಕ್ ರದ್ದು, ನಾಲ್ಕನೆಯದು ಕಾಶ್ಮೀರ ರಕ್ಷಣೆ, ಈಗಿನ ಪ್ರದೇಶ, ಎರಡನೆಯದೂ ಒಂದು ಇದೆ. ಓವೈಸಿಯಂತಹವರನ್ನು ಬಂಧನದಲ್ಲಿ ಇನ್ನೂ ಇಡದೇ ಇರುವುದು! ಮಿತ್ರರೇ! ಭಾರತೀಯರಿಗಿರುವುದು ಭಾರತ ಒಂದೇ ದೇಶ! (ದಿ) ಆದಿಚುಂಚನಗಿರಿ ಮಠಾಧೀಶರೂ ಹೀಗೆ ಹೇಳಿದರು. ಇಸ್ಲಾಮಿಯರಿಗೆ, ಕ್ರೖೆಸ್ತರಿಗೆ ಬೇರೆ ದೇಶಗಳಿವೆ. ಭಾರತೀಯ ಮತಾಂತರಿತರು ಈಗ ನಡೆಯುತ್ತಿರುವುದನ್ನು ಗಮನಿಸಿ, ದಾರಿಗೆ ಬರುವುದು ಒಂದೇ ಕ್ಷೇಮ ಮಾರ್ಗ. ಜಿಹಾದ್ ಬಿಟ್ಟು ಬಿಡಿ, ಪರಹಿಂಸೆ ಬಿಡಿ ಮತಾಂತರ ಬಿಡಿ, ಎಲ್ಲ ಪೂಜೆ ಸಹ ವೈಯಕ್ತಿಕವಾಗಲಿ ನಿಮ್ಮ ಸಾತ್ವಿಕ ಆಚರಣೆಗೆ ಯಾರ ಅಡ್ಡಿಯೂ ಇಲ್ಲ. ಆಗ ಆಕಾರ ಏನೇ ಆದರೂ ನೀವು ಹೃದಯದಲ್ಲಿ ಹಿಂದೂವೇ ಆಗಿರುತ್ತೀರಿ. ಬೇಡ ಎಂದರೆ, ‘ವಿಶೇಷ ಸ್ಥಾನಮಾನ’ ಬಯಸಿದಂತೆ ಆಗುತ್ತದೆ. ನವಭಾರತ ನಿರ್ವಣಕ್ಕೆ ಇದು ಅಡ್ಡಿ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

2 Replies to “ಒಳಶತ್ರುಗಳ ನಿಗ್ರಹಕ್ಕೆ ಇದು ಸಕಾಲ”

  1. Well written Swamijee. Swamigallu e taraha samajakke tiluvallike kodabekku. Hindu desha namage beku. Siddaramaih navarantha cm devegowdanantha pm bandare vijayanagagaradantha namma rajya tippu premigala palagabahudu. Jayawagalli swamijigallige sada margadarshakaragirabekendu namma prathane

Leave a Reply

Your email address will not be published. Required fields are marked *