ಪ್ರತಿಪಕ್ಷಗಳ ಧರಣಿ ನಡುವೆ ಕಲಾಪ ನಡೆಸಿದ್ದು ಬೇಸರ ತರಿಸಿದೆ

blank

ಬೆಂಗಳೂರು: ಪ್ರತಿಪಕ್ಷಗಳ ಧರಣಿ ನಡೆಸುವ ಸಂದರ್ಭದಲ್ಲಿ ಕಲಾಪ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾದದ್ದು ದುರದೃಷ್ಟಕರ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳ ಧರಣಿ ನಡುವೆ ಸರ್ಕಾರಿ ಕಲಾಪಗಳನ್ನು ನಡೆಸುವುದು ಅನಿವಾರ್ಯವಾಗಿತ್ತು. ಒಂದು ದಿನ ಮುಂಚಿತವಾಗಿ ಅಧಿವೇಶನ ಮೊಟುಕುಗೊಳಿಸುವ ಸ್ಥಿತಿ ಬಂದದ್ದು ಬೇಸರ ತರಿಸಿದೆ ಎಂದರು.

ಮುಡಾ ಚರ್ಚೆಗೆ ಅವಕಾಶ ಕೊಡದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್, ನಿಲುವಳಿ ಸೂಚನೆಯಡಿ ಚರ್ಚಿತವಾಗುವ ವಿಚಾರವು ಇತ್ತಿಚಿನ ಘಟನೆಯಾಗಿರಬೇಕು. ಸಾರ್ವಜನಿಕ ಮಹತ್ವ ಹೊಂದಿರಬೇಕು. ನ್ಯಾಯಾಂಗ ಅಥವಾ ಅರೆ ನ್ಯಾಯಾಂಗದಿಂದ ತನಿಖೆ ನಡೆಯುತ್ತಿರಬಾರದು. ಆದರೆ ಮುಡಾ ಹಗರಣ ವಿಚಾರ ಈಗಾಗಲೇ ನ್ಯಾಯಾಂಗ ವಿಚಾರಣೆಗೆ ವಹಿಸಿರುವುದರಿಂದ ಕೆಟ್ಟ ಸಂಪ್ರದಾಯಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಚರ್ಚೆಗೆ ಅವಕಾಶ ನೀಡಲಿಲ್ಲ. ಸಭಾಧ್ಯಕ್ಷರು ನೀಡಿದ ರೂಲಿಂಗ್ ಸರಿಯಾಗಿದೆ ಎಂಬುದು ಮುಂದೆ ವಿರೋಧ ಪಕ್ಷಗಳಿಗೂ ಮನವರಿಕೆಯಾಗಲಿದೆ ಎಂದು ತಿಳಿಸಿದರು.

ಕಠಿಣ ಕ್ರಮ ಕಷ್ಟವಲ್ಲ:

ಅಶಿಸ್ತಿನ ವರ್ತನೆ ಕಂಡಾಗ ಕಠಿಣ ಕ್ರಮ ಕೈಗೊಳ್ಳುವುದು ಕಷ್ಟವಲ್ಲ. ಕಲಾಪ ಸುಗಮವಾಗಿ ನಡೆಯಬೇಕು ಎಂಬ ಕಾರಣಕ್ಕೆ ಸಹಿಸಿಕೊಂಡು ಅಧಿವೇಶನ ನಡೆಸಲಾಯಿತು ಎಂದರು.
ನೀಟ್ ಮತ್ತು ಅತಿವೃಷ್ಟಿ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಬೇಕಿತ್ತು. ಅದಾಗಲಿಲ್ಲ ಎಂಬ ಬೇಸರವಿದೆ ಎಂದು ಖಾದರ್ ಹೇಳಿದರು.
ಎಂಟು ದಿನಗಳ ಕಾಲ 36.51 ಗಂಟೆ ಕಾರ್ಯ ಕಲಾಪ ನಡೆಸಲಾಗಿದೆ. ದೇಶದ ಯಾವುದೇ ವಿಧಾನಸಭೆಯಲ್ಲಿ ಅಳವಡಿಸದ ಎಐ ಕ್ಯಾಮರಾ ಅಳವಡಿಸಲಾಗಿದ್ದು, ಶಾಸಕರು ಎಷ್ಟು ಬಾರಿ ಬರುತ್ತಾರೆ, ಎಷ್ಟು ಬಾರಿ ಹೊರಗೆ ಹೋಗುತ್ತಾರೆ, ಎಷ್ಟು ಅವಧಿ ಇದ್ದರು ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದರು.

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…