ಸಂಡೂರು: ಸಂಸದ ಈ.ತುಕಾರಾಮ್ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಮತ್ತೆ ಈಗ ಅವರ ಕುಟುಂಬದವರಿಗೆ ಸಂಡೂರು ಉಪಚುನಾವಣೆ ಟಿಕೆಟ್ ನೀಡಿದರೆ ಹೇಗೆ ಎಂದು ಮಾಜಿ ಜಿಪಂ ಸದಸ್ಯ ತುಮಟಿ ಲಕ್ಷ್ಮಣ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ತೋರಣಗಲ್ ವಿಜಯಲಕ್ಷ್ಮೀ ಹೊಟೇಲ್‌ನ ಸಭಾಂಗಣದಲ್ಲಿ ಸಂಡೂರು ಉಪಚುನಾವಣೆ ಅಸಮಾದಾನಿತರ ಸಭೆಯಲ್ಲಿ ಮಾತನಾಡಿದರು.
ವಾಲ್ಮೀಕಿ ಜನಾಂಗದಲ್ಲಿ ಉಳಿದವರಿಗೆ ಅವಕಾಶ ನೀಡಬೇಕು. ನಾಲ್ಕು ಬಾರಿ ಶಾಸಕರಾಗಿ ಈಗ ಸಂಸದರಾಗಿರುವ ಈ.ತುಕಾರಾಮ್ ಅವರ ಕುಟುಂಬಕ್ಕೆ ಟಿಕೆಟ್ ನೀಡುವುದು ಸರಿಯಲ್ಲ.
ಈ ಸಭೆಯ ಎಲ್ಲರ ಅಭಿಪ್ರಾಯ ಮತ್ತು ವಿಡಿಯೋಗಳನ್ನು ಸಂಡೂರು ಹೈಕಮಾಂಡ್ ಕಾರ್ಮಿಕ ಸಚಿವ ಸಂತೋಷ್ ಲಾಡ್‌ಗೆ ಕಳಿಸಿದ್ದೇವೆ. ನಿರ್ಣಯ ಅವರಿಗೆ ಬಿಟ್ಟದ್ದು ನಾಳೆ ಎಲ್ಲರನ್ನೂ ಬೆಂಗಳೂರಿಗೆ ಬರಲು ತಿಳಿಸಿದ್ದಾರೆ ಎಂದರು.
ಮುಖಂಡರಾದ ನವಲೂಟಿ ಜಯಣ್ಣ, ಭುಜಂಗನಗರ ಬಿ.ಜಿ.ಸಿದ್ದನಗೌಡ, ತಾರಾನಗರ ಶಿವಮೂರ್ತಿ, ಮಾಜಿ ಜಿಪಂ ಸದಸ್ಯ ಜನಾರ್ದನ, ವಸಂತಕುಮಾರ, ಪುರಸಭೆ ಸದಸ್ಯರಾದ ವೀರೇಶ ಸಿಂದೆ, ಕೆ.ವಿ.ಸುರೇಶ, ಪಂಪಾಪತಿ ಸೇರಿ 350ಕ್ಕೂ ಹೆಚ್ಚು ಜನರಿದ್ದರು.