ರಾಣೆಬೆನ್ನೂರ: ಸರ್ಕಾರಿ ಶಾಲೆ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದರಿಂದ ಅವರು ಕೂಡ ಖಾಸಗಿ ಶಾಲೆಗಳ ಮಕ್ಕಳಿಗೆ ಸರಿಸಮನಾದ ಸಾಧನೆ ವಾಡಲು ಪ್ರೇರಣೆಯಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂದ ತಾಲೂಕು ಟಕದ ಅಧ್ಯಕ್ಷ ಮಂಜುನಾಥ ಕೆಂಚರಡ್ಡಿ ಹೇಳಿದರು.
ನಗರದ ರಾಜ್ಯ ಸರ್ಕಾರಿ ನೌಕರರ ಸಂದ ಸಭಾಭವನದಲ್ಲಿ ಗುರುವಾರ ತಾಲೂಕು ಟಕದ ವತಿಯಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸ್ಪರ್ಧೆಯ ವಿಜೇತರಿಗೆ ಬಹುವಾನ ವಿತರಿಸಿ ಅವರು ವಾತನಾಡಿದರು.
ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸ್ಪರ್ಧೆಯನ್ನು ಐದನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜನೆ ವಾಡಲಾಗಿದೆ. ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ 192 ಸರ್ಕಾರಿ ಶಾಲೆಗಳ ಪೈಕಿ 21 ಉರ್ದು ಶಾಲೆಗಳು ಸೇರಿದಂತೆ ಒಟ್ಟು 173 ಶಾಲೆಗಳ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಪ್ರತಿ ಶಾಲೆಯಿಂದ ತಲಾ ಒಬ್ಬರು ವಿದ್ಯಾರ್ಥಿಯನ್ನು ಆಯ್ಕೆ ವಾಡಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗಿದೆ. ಸ್ಪರ್ಧೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ 25 ವಿದ್ಯಾರ್ಥಿಗಳಿಗೆ 1 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಉಳಿದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಸವಾಧಾನಕರ ಬಹುವಾನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಪ್ರವಾಣದಲ್ಲಿ ಸ್ಪರ್ಧೆ ಆಯೋಜಿಸುವ ಚಿಂತನೆಯಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ಕಾವೇರಿ ಬಿರಾದಾರ, ಎಂ.ಎಂ. ಇಟಗೇರ, ನಾಗರಾಜ ಗಂಗಣ್ಣನವರ, ಸಿದ್ಧೋಜಿ, ಸುಶೀಲಾ ಗುರುಲಿಂಗಪ್ಪಗೌಡ್ರ, ಪುಷ್ಪಲತಾ ವಿ.ಕೆ., ಶಿವಯೋಗಿ ಗುರಪ್ಪನವರ ಮತ್ತಿತರರು ಇದ್ದರು.
