ಜಯಂತಿ ಆಚರಿಸುವದು ಅಗತ್ಯವಾಗಿದೆ

It is necessary to celebrate the anniversary.
blank

ಲೋಕಾಪುರ: ಜಗದ್ಗುರು ರೇಣುಕಾಚಾರ್ಯರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ಪಟ್ಟಣದ ಹಿರೇಮಠದಲ್ಲಿ ಬುಧವಾರ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾತ್ಮರ ಬದುಕು, ಆದರ್ಶಗಳನ್ನು ತಿಳಿದುಕೊಳ್ಳುವುದು ಹಾಗೂ ಜಯಂತಿ ಆಚರಿಸುವದು ಅಗತ್ಯವಾಗಿದೆ. ಧರ್ಮದ ಏಳಿಗೆಗಾಗಿ ಬಸವಣ್ಣನವರಗಿಂತಲೂ ಮೊದಲು ರೇಣುಕಾಚಾರ್ಯರು ಶ್ರಮಿಸಿದ್ದಾರೆ. ಸಮಾಜದ ಹಿರಿಯರಾದ ಚಂದ್ರಯ್ಯ ಪಂಚಕಟ್ಟಿಮಠ ಅವರಿಗೆ ರೇಣುಕಾಚಾರ್ಯ ಪ್ರಶಸ್ತಿ ನೀಡಿದ್ದು ಅರ್ಥಪೂರ್ಣವಾಗಿದೆ ಎಂದರು.

ಹಿರೇಮಠದ ಡಾ. ಚಂದ್ರಶೇಖರ ಶ್ರೀಗಳು ಮಾತನಾಡಿ, ರೇಣುಕಾಚಾರ್ಯರು ಅವತಾರ ಪುರುಷರು. ಜಗತ್ತಿನ ಕಲ್ಯಾಣಕ್ಕಾಗಿ ಮಾನವರ ಉದ್ಧಾರಕ್ಕಾಗಿ ಅನೇಕ ಪವಾಡಗಳನ್ನು ಮಾಡಿ ಸಿದ್ಧಾಂತ ಶಿಖಾಮಣಿಯಲ್ಲಿ ಬರುವ ಅಷ್ಟಾವರಣ, ಪಂಚಾವರಣ, ಷಟಸ್ಥಲ್ ತತ್ವಗಳನ್ನು ಭೋದಿಸಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ನೀಡಿ ಸಮಾಜದ ಅಜ್ಞಾನ, ಅಂಧಕಾರ ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದರು.

ವೀರಶೈವ ಸಮಾಜದ ವತಿಯಿಂದ ಚಂದ್ರಯ್ಯ ಪಂಚಕಟ್ಟಿಮಠ ಅವರಿಗೆ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಹಾಗೂ ಹಿರೇಮಠದ ವತಿಯಿಂದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಧೋಳ ತಹಸೀಲ್ದಾರ್ ಮಹಾದೇವ ಸನಮುರಿ, ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಪಟ್ಟಣದ ಹಿರಿಯರಾದ ಗೂಳಪ್ಪಾ ಚೌಧರಿ, ಗುರುಸಿದ್ದಯ್ಯ ಮುತ್ತಿನಮಠ, ಮಲ್ಲಪ್ಪ ಕೋಟಗಿ, ದುಂಡಪ್ಪ ಕಡೇಬಾಗಿಲ ಹಾಗೂ ಕಲ್ಯಾಣ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ದುರ್ಗಪ್ಪ ಮಾದರ, ಪತ್ರಿಕಾ ಮಿತ್ರರನ್ನು, ಸಂಗೀತ ಶಿಕ್ಷಕ ಕೃಷ್ಣ ರಂಗಣ್ಣವರ, ನೇತಾಜಿ ಶಾಲೆ ವಿದ್ಯಾರ್ಥಿನಿ ಪತ್ತಾರ ಅವರನ್ನುಸನ್ಮಾನಿಸಲಾಯಿತು.

ಆರ್.ಕೆ. ಮಠದ, ಎಂ.ಎಂ. ವಿರಕ್ತಮಠ, ಬಿ.ಕೆ. ಮಠದ, ಡಾ.ಬಿ.ಎಸ್. ಹಿರೇಮಠ, ಅಣ್ಣಯ್ಯ ವಿರಕ್ತಮಠ, ಶಿವಪ್ಪಾ ಚೌಧರಿ, ಶಂಕರ ತೇಲಿ, ಪರಶುರಾಮ ವನಸಿ, ಹೊಳಬಸು ಕೊಟಗಿ, ಚನ್ನಯ್ಯ ಗಣಾಚಾರಿ, ಡಾ. ಪಾಟೀಲ, ಸೊಲಬಣ್ಣ ತೇಲಿ, ಸಂಕಪ್ಪ ಗಂಗಣ್ಣವರ, ಬಿ.ಸಿ. ವಿರಕ್ತಮಠ, ದುಂಡಯ್ಯ ಶಿರಕೋಳಮಠ, ರಾಮಣ್ಣಾ ನಾವಿ, ಬಸು ಸಕ್ರಿ, ಮಹಾಂತೇಶ ಹಿರೇಮಠ, ಶಿವಪ್ಪಾ ಗಾಣಿಗೇರ, ಮುತ್ತಪ್ಪ ಗಂಗಣ್ಣವರ, ಶಿವಯೋಗಿ ಗಂಗಣ್ಣವರ, ಸಾಬಣ್ಣ ಭಜಂತ್ರಿ ಮತ್ತಿತರರಿದ್ದರು.
ಶಿಕ್ಷಕ ಸುನೀಲ ವಸದ ಸ್ವಾಗತಿಸಿದರು. ಮುಖ್ಯಶಿಕ್ಷಕ ಆರ್.ಜಿ. ಮುತ್ತಿನಮಠ ನಿರೂಪಿಸಿದರು. ದುಂಡಯ್ಯ ಸಾಲಿಮಠ ವಂದಿಸಿದರು.

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…