More

  ವಿಶ್ವ ಕರ್ಮ ಸಮುದಾಯ ಸಂಘಟಿತರಾಗುವುದು ಅವಶ್ಯ

  ಮದ್ದೂರು: ವಿಶ್ವಕರ್ಮ ಸಮುದಾಯದವರು ಸಂಘಟಿತರಾಗದಿದ್ದರೆ ಸಮುದಾಯ ಮುಂದಿನ ದಿನಗಳಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿಯಬೇಕಾಗುತ್ತದೆ ಎಂದು ವಿರಾಟ್ ವಿಶ್ವಕರ್ಮ ಸಂಘದ ತಾಲೂಕು ಅಧ್ಯಕ್ಷ ಕದಲೂರು ಬಸವರಾಜು ಕಳವಳ ವ್ಯಕ್ತಪಡಿಸಿದರು.

  ಪಟ್ಟಣದ ಕಾರ್ಮಿಕ ಸಂಘದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಶಿಲ್ಪ ಕಲೆಗಳನ್ನು ಕೊಡುಗೆ ಕೊಟ್ಟ ವಿಶ್ವಕರ್ಮ ಸಮುದಾಯಕ್ಕೆ ನಿರಂತರವಾಗಿ ಅನ್ಯಾಯ ಆಗುತ್ತಿರುವುದು ಶೋಚನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

  ಸರ್ಕಾರಗಳು ವಿಶ್ವಕರ್ಮ ಜನಾಂಗದ ಹೆಸರಿನಲ್ಲಿ ಹಲವು ಯೋಜನೆಗಳನ್ನು ರೂಪಿಸುತ್ತವೆ. ಆದರೆ, ಅವುಗಳನ್ನು ಅನುಷ್ಠಾನ ಮಾಡುವುದರಲ್ಲಿ ವಿಫಲವಾಗುತ್ತವೆ. ವಿಶ್ವಕರ್ಮ ಸಮುದಾಯದವರು ಪ್ರಜ್ಞಾವಂತರಾದರೆ ಮಾತ್ರ ಸಮುದಾಯದ ಭವಿಷ್ಯ ಉಳಿಯಲು ಸಾಧ್ಯ ಎಂದರು.

  ವಿರಾಟ್ ವಿಶ್ವಕರ್ಮ ಸಂಘದ ಗೌರವಾಧ್ಯಕ್ಷ ಹಳ್ಳಿಕೆರೆ ಈಶ್ವರಚಾರ್, ಕಾರ್ಯದರ್ಶಿ ಪಿ.ಸಿದ್ದು, ಸಹ ಕಾರ್ಯದರ್ಶಿ ಕೋಣಸಾಲೆ ಹರೀಶ್, ಮಾಜಿ ತಾಲೂಕು ಅಧ್ಯಕ್ಷರಾದ ಎಂ.ಸಿ.ಕೃಷ್ಣಾಚಾರ್, ಎಂ.ಪಿ.ಮಹೇಶ್, ಮುಖಂಡರದ ಹೊಸಕರೆ ಮಂಟೆಸ್ವಾಮಿ, ಪಣ್ಣೆದೊಡ್ಡಿ ಪಾಪಚಾರಿ, ಬೆಳ್ಳೂರು ಸ್ವಾಮಿ, ಸಿದ್ದರಾಜು, ಗೊರವನಹಳ್ಳಿ ಮಹೇಶ್, ಗೆಜ್ಜಲಗೆರೆ ಆದಿಮೂರ್ತಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts