More

    ಇಸ್ರೋ ಜತೆ ಕೈ ಜೋಡಿಸುವುದು ಅನಿವಾರ್ಯ

    ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಹಿಂದಿನಂತೆ ಏಕಾಂಗಿಯಾಗಿ ಕೆಲಸ ಮಾಡುವ ಸಂಸ್ಥೆಯಲ್ಲ. ಇಸ್ರೋ ಜತೆ ಹೊಂದಿಕೊಂಡು ಕೆಲಸ ಮಾಡದಿರುವವರು ಇನ್ನು ಮುಂದೆ ಒಂಟಿಯಾಗಲಿದ್ದಾರೆ ಎಂದು ಕೇಂದ್ರ ಅಣುಶಕ್ತಿ ಹಾಗೂ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

    ‘ವಿಕೇಂದ್ರೀಕೃತ ಯೋಜನೆಗೆ ಅಂತರಿಕ್ಷ ಆಧರಿತ ಮಾಹಿತಿ ಬೆಂಬಲ’ ಕುರಿತು ಇಸ್ರೋ ಮುಖ್ಯಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಸಂಶೋಧನೆ ದೇಶಾದ್ಯಂತ ವಿಸ್ತರಿಸಬೇಕು: ಬಾಹ್ಯಾಕಾಶ ಸಂಶೋಧನೆ ದೇಶಾದ್ಯಂತ ವಿಸ್ತರಿಸಬೇಕು ಎಂದು ವಿಕ್ರಂ ಸಾರಾಭಾಯಿ ಹೇಳುತ್ತಿದ್ದರು. ಆದರೆ, ಇಂದು ಪ್ರತಿ ಮನೆ ಹಾಗೂ ದೇಶದ ಪ್ರತಿ ವ್ಯಕ್ತಿಯನ್ನೂ ಬಾಹ್ಯಾಕಾಶ ಸಂಶೋಧನೆ ತಲುಪಿದೆ. ಬಾಹ್ಯಾಕಾಶ ಸಂಶೋಧನೆ, ತಂತ್ರಜ್ಞಾನ ಇಲ್ಲದೆ ಜೀವನ ನಿರ್ವಹಣೆಯೂ ಕಷ್ಟ ಸಾಧ್ಯ. ಯಾವುದೇ ಇಲಾಖೆ ಇಸ್ರೋ ಜತೆಗೆ ಕೈಜೋಡಿ ಸುವುದು ಅನಿವಾರ್ಯ ಎಂದರು.

    ಭುವನ್ ಪಂಚಾಯತ್​ಗೆ ಚಾಲನೆ

    ಇಸ್ರೋ, ಎನ್​ಐಸಿ ಮತ್ತಿತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಸುಗಮ ಆಡಳಿತಕ್ಕೆ ರೂಪಿಸಿರುವ ‘ಭುವನ್ ಪಂಚಾಯತ್-3.0’ ಪೋರ್ಟಲ್​ಗೆ ಜಿತೇಂದ್ರ ಸಿಂಗ್ ಚಾಲನೆ ನೀಡಿದರು. ದೇಶದ ಅಂತರ್ಜಲ ಮಾಹಿತಿ, ಶೈಕ್ಷಣಿಕ, ಆರೋಗ್ಯ, ಭೂಪಟ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ.

    ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸುನಿಲ್​ಕುಮಾರ್, ಇಸ್ರೋ ವೈಜ್ಞಾನಿಕ ಕಾರ್ಯದರ್ಶಿ ಡಾ. ಉಮಾ ಮಹೇಶ್ವರನ್, ಇಸ್ರೋ ಮಾಜಿ ಅಧ್ಯಕ್ಷರಾದ ಡಾ. ಕೆ. ರಾಧಾಕೃಷ್ಣನ್, ಡಾ. ಎ.ಎಸ್. ಕಿರಣ್​ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    ಇಸ್ರೋ ರಾಷ್ಟ್ರೀಯ ಅಭಿವೃದ್ಧಿಗೆ ಸದಾ ಶ್ರಮಿಸುತ್ತಲೇ ಇದೆ. ಭೂಪಟ ಹಾಗೂ ಅಂತರ್ಜಲದ ಬಗ್ಗೆ ಮಾಹಿತಿ ನಿಖರವಾಗಿ ಲಭ್ಯವಾದರೆ, ಗ್ರಾಮೀಣಾಭಿವೃದ್ಧಿ ಸುಲಭ ಸಾಧ್ಯವಾಗುತ್ತದೆ.

    | ಕೆ. ಶಿವನ್ ಇಸ್ರೋ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts