ಬೆಂಗಳೂರು: ಹಿಂದಿನ ವೇಳಾಪಟ್ಟಿ ಪ್ರಕಾರ ಐಪಿಎಲ್ ಫೈನಲ್ ಪಂದ್ಯ ಮೇ 25ಕ್ಕೆ ಕೋಲ್ಕತದಲ್ಲಿ ನಡೆಯಬೇಕಿತ್ತು. ಇನ್ನು ಒಂದು ವಾರ ಟೂರ್ನಿ ಸ್ಥಗಿತದಿಂದ ಮಾಸಾಂತ್ಯ ಅಥವಾ ಜೂನ್ 1ರವರೆಗೆ ಟೂರ್ನಿಯನ್ನು ವಿಸ್ತರಿಸಲು ಅವಕಾಶವಿದೆ. ಆದರೆ ನಂತರ ಜೂನ್ ಮೊದಲ ವಾರಕ್ಕೂ ಟೂರ್ನಿ ವಿಸ್ತರಿಸಲು ಸಾಧ್ಯವಿಲ್ಲ. ಯಾಕೆಂದರೆ ಜೂನ್ 11ರಿಂದ ಲಾರ್ಡ್ಸ್ನಲ್ಲಿ ಆಸ್ಟ್ರೆಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ ನಿಗದಿಯಾಗಿದೆ.

ಐಪಿಎಲ್ನಲ್ಲಿ ಪ್ರಮುಖ ತಂಡಗಳಿಗೆ ಈ ದೇಶಗಳ ಆಟಗಾರರೇ ಪ್ರಮುಖ ಬಲವಾಗಿದ್ದಾರೆ. ಹೀಗಾಗಿ ಅವರಿಲ್ಲದೆ ಐಪಿಎಲ್ ಆಯೋಜಿಸಲು ಫ್ರಾಂಚೈಸಿಗಳಿಂದ ವಿರೋಧ ವ್ಯಕ್ತವಾಗಬಹುದು. ಪ್ರಮುಖವಾಗಿ ಆರ್ಸಿಬಿ ತಂಡಕ್ಕೆ ಜೋಶ್ ಹ್ಯಾಸಲ್ವುಡ್, ಡೆಲ್ಲಿ ತಂಡಕ್ಕೆ ಮಿಚೆಲ್ ಸ್ಟಾರ್ಕ್ರಂಥ ಆಸೀಸ್ ವೇಗಿಗಳೇ ಪ್ರಮುಖ ಅಸ್ತ್ರವಾಗಿದ್ದಾರೆ.
ಜೂನ್ 20ರಿಂದ ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನೂ ಆಡಬೇಕಾಗಿದೆ. ಹೀಗಾಗಿ ಮೇನಲ್ಲೇ ಐಪಿಎಲ್ ಮುಗಿಸಲು ಸಾಧ್ಯವಾಗದಿದ್ದರೆ ಬಿಸಿಸಿಐ ಮತ್ತೆ ಮರುನಿಗದಿಗಾಗಿ ಸೆಪ್ಟೆಂಬರ್ವರೆಗೆ ಕಾಯಬೇಕಾಗುತ್ತದೆ.