ಮೈಸೂರು: ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಂಡು ಮೈಸೂರಿನ ನಗರೋತ್ಥಾನ ಮಾಡಬೇಕಾದ ಅನಿವಾರ್ಯತೆಯಿದ್ದು, ಸರ್ಕಾರದ ಜತೆಗೆ ಖಾಸಗಿ ಸಂಸ್ಥೆಗಳೂ ವ್ಯವಸ್ಥೆಯ ಬಗ್ಗೆ ಸಮಾಲೋಚನೆ ನಡೆಸಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್, ಇನ್‌ಸ್ಟಿಟ್ಯೂಟ್ ಆಫ್ ಟೌನ್ ಪ್ಲಾನರ್ಸ್, ಮೈಸೂರು ರೀಜನಲ್ ಸೆಂಟರ್ ಮತ್ತು ಕರ್ನಾಟಕ ಪ್ರಾದೇಶಿಕ ಅಧ್ಯಯ ಕೇಂದ್ರದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಹಾನಗರ ಮೈಸೂರು: ಸಮಸ್ಯೆ ಹಾಗೂ ಸವಾಲು ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಜನಸಂಖ್ಯೆಯಲ್ಲಿ ಭಾರತ ಈಗ ಪ್ರಪಂಚದಲ್ಲೇ ಪ್ರಥಮ ಸ್ಥಾನದಲ್ಲಿದೆ. ಜನಸಂಖ್ಯೆ ಹೆಚ್ಚಾದರೂ ಭೂಮಿ ವಿಸ್ತೀರ್ಣ ಹೆಚ್ಚಿಸಲು ಸಾಧ್ಯವಿಲ್ಲ. ಹಾಗಾಗಿ ಇರುವ ಸ್ಥಳದಲ್ಲಿ ಎಲ್ಲರಿಗೂ ಯೋಗ್ಯ ಬದುಕು ಕಟ್ಟಿಕೊಡುವ ಯೋಜನೆ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನದ ಭದ್ರತೆಯ ನಡುವೆಯೂ ಪ್ರಕೃತಿ ವಿಕೋಪಗಳು ಮಾನವನ ಲೆಕ್ಕಾಚಾರವನ್ನು ಬುಡಮೇಲು ಮಾಡುತ್ತವೆ. ಆದರೆ ಸಾವಿರಾರು ವರ್ಷಗಳ ಹಿಂದೆ ತಂತ್ರಜ್ಞಾನದ ಸಹಕಾರವಿಲ್ಲದೆ ನಿರ್ಮಿಸಿದ ಕಟ್ಟಡಗಳು ಪ್ರಕೃತಿ ವಿಕೋಪಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಅದರ ಬಗ್ಗೆಯೂ ಅಧ್ಯಯನ ಅಗತ್ಯ ಎಂದರು.
ಹಾಗಾಗಿ ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಂಡು ಮೈಸೂರಿನ ನಗರೋತ್ಥಾನ ಮಾಡಬೇಕಾದ ಅನಿವಾರ್ಯತೆಯಿದ್ದು, ಸರ್ಕಾರದ ಜತೆಗೆ ಖಾಸಗಿ ಸಂಸ್ಥೆಗಳೂ ವ್ಯವಸ್ಥೆಯ ಬಗ್ಗೆ ಸಮಾಲೋಚನೆ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.
ನಗರ ಯೋಜನೆಯ ವ್ಯವಸ್ಥಿತ ಅಭಿವೃದ್ಧಿಯಿಂದ ಪರಿಸರದ ಸಮತೋಲನ ಸಾಧ್ಯ. ಅದನ್ನು ಸಾಧಿಸಲು ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಕೈ ಜೋಡಿಸಬೇಕಾದ ಅನಿವಾರ್ಯತೆಯಿದೆ ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ದೇಶಕ ಎಲ್.ಶಶಿಕುಮಾರ್ ಮಾತನಾಡಿ, ಬೆಂಗಳೂರಿನ ಅಭಿವೃದ್ಧಿಗೆ ಸಂಚಾರ ದಟ್ಟಣೆಯು ತಡೆಯಾಗಿದೆ. ಹೀಗಾಗಿ ಅಲ್ಲಿನ ಸ್ಥಿತಿಗತಿಗಳನ್ನು ಸಮಾಲೋಚಿಸಿ ಅದಕ್ಕೆ ಅನುಗುಣವಾಗಿ ಮೈಸೂರಿಗೆ ಯೋಜನೆ ಸಿದ್ಧಪಡಿಸಬೇಕು. ಇದಕ್ಕಾಗಿ ಅನುದಾನದ ಅಗತ್ಯವಿದೆ ಎಂದು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಎ.ಎನ್.ರಘುನಂದನ್, ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಟೌನ್ ಪ್ಲಾನರ್ಸ್ ಸದಸ್ಯ ಎಸ್.ಬಿ.ಹೊನ್ನೂರ್, ಪ್ರೊ.ಬಿ. ಶಂಕರ್, ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್ ಪ್ರಾಧ್ಯಾಪಕ ಎಚ್.ಎಸ್.ಕುಮಾರ, ನಿರ್ದೇಶಕ ಪ್ರೊ.ಎಂ.ಪ್ರಮೋದ್ ಗೌರಿ, ಮೈಸೂರು ರೀಜಿನಲ್ ಸೆಂಟರ್‌ನ ಕಾರ್ಯದರ್ಶಿ ಎಸ್.ಯಶಸ್ವಿನಿ, ರಾಜ್ಯ ಕಾರ್ಯದರ್ಶಿ ವಿದ್ಯಾರ್ಧ ಒಡೆಯರ್ ಇದ್ದರು.
ಸಾಂಸ್ಕೃತಿಕ ನಗರಿ ಮೈಸೂರು ಮಹಾನಗರವಾಗಿ ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳು ಮತ್ತು ಇದಕ್ಕೆ ಕೈಗೊಳ್ಳಬೇಕಿರುವ ಮಾರ್ಗೋಪಾಯದ ಬಗ್ಗೆ ವಿವಿಧ ಸಂಸ್ಥೆಯ ತಜ್ಞರು ಅಗತ್ಯ ಸಲಹೆ ಮತ್ತು ಸೂಚನೆ ನೀಡಿದರು.
ಬದುಕು ಕಟ್ಟಿಕೊಡುವ ಯೋಜನೆ ರೂಪಿಸಬೇಕಾದ ಅನಿವಾರ್ಯ: ಎಂ.ಕೆ.ಸವಿತಾ

You Might Also Like
ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya
Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…
ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips
Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…
ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes
Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…