ಗುಳೇದಗುಡ್ಡ: ಶಾಲಾದಿನಗಳನ್ನು ನೆನಪಿಸಿಕೊಂಡು ಮತ್ತೇ ಎಲ್ಲರೂ ಒಟ್ಟಾಗಿ ಸೇರಿ, ಅಕ್ಷರ ಕಲಿಸಿ, ಜೀವನದ ದಾರಿ ತೋರಿಸಿದ ಶಿಕ್ಷಕರನ್ನು ಗೌರವಿಸಿ, ಗುರುವಂದನೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದು ಗುರುಸಿದ್ಧೇಶ್ವರ ಮಠದ ಗುರುಸಿದ್ದ ಪಟ್ಟದಾರ್ಯ ಸ್ವಾಮಿಗಳು ಹೇಳಿದರು.

ಪಟ್ಟಣದ ಸರಸ್ವತಿ ವಿದ್ಯಾಮಂದಿರದ ಹಿರಿಯ ಪ್ರಾಥಮಿಕ ಶಾಲೆಯ 1990-97ನೇ ಸಾಲಿನ ಹಳೆ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡದ್ದ ಗುರುವಂದನೆ ಹಾಗೂ ಹಳೇ ವಿದ್ಯಾರ್ಥಿಗಳ ಸ್ನೇಹಸಮ್ಮೇಳ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರಗೆ ಹಾಕಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವೂ ಇದನ್ನೇ ಹೇಳುತ್ತದೆ ಎಂದರು.
ಮುರುಘಾಮಠದ ಕಾಶಿನಾಥ ಸ್ವಾಮಿಗಳು ಮಾತನಾಡಿ, ನಾವು ಎಷ್ಟೇ ಓದಿದರೂ ಮೊದಲು ಸಂಸ್ಕಾರವನ್ನು ಕಲಿಯಬೇಕು. ನಾವು ಗಳಿಸಿದ ಆಸ್ತಿ, ಅಂತಸ್ತು ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯುವುದಿಲ್ಲ. ಆದರೆ, ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆೆಗಿರುತ್ತದೆ ಎಂದರು.
ನಿವೃತ್ತ ಶಿಕ್ಷಕಿ ಸುಮತಿ ಹೆಗಡೆ ಮಾತನಾಡಿ, ಎಲ್ಲರನ್ನು ಒಂದುಗೊಡಿಸಿ ಕಾರ್ಯಕ್ರಮವನ್ನು ಮಾಡುವುದು ಸುಲಭವಲ್ಲ. ತುಂಬಾ ಸಾಹಸದ ಕೆಲಸ ಮಾಡಿದ್ದೀರಿ. ಶಿಕ್ಷಕರನ್ನು ಹಾಗೂ ಹಳೆಯ ವಿದ್ಯಾರ್ಥಿಗಳನ್ನು ಮತ್ತೆ ನೋಡುವ ಅವಕಾಶ ಸಿಕ್ಕಿರುವುದು ನಮಗೆ ತುಂಬಾ ಸಂತಸ ತಂದಿದೆ ಎಂದರು.
ನಿವೃತ್ತ ಶಿಕ್ಷಕಿಯರಾದ ಸುಮನಾ ನಾಯಕ, ಪ್ರಮೀಳಾ ಮುದ್ದಾಪೂರ, ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಪರುಶುರಾಮ ಬಂತಲ್ ಮಾತನಾಡಿದರು. ಹಳೇ ವಿದ್ಯಾರ್ಥಿಗಳ ಒಕ್ಕೂಟದ ಬಳಗದ ವತಿಯಿಂದ ಸರಸ್ವತಿ ವಿದ್ಯಾ ಸಂಸ್ಥೆಯ ಶಾಲೆಗೆ 50 ಸಾವಿರ ರೂ. ದೇಣಿಗೆ ನೀಡಲಾಯಿತು.
ಶಿಕ್ಷಕರಾದ ಸುಮತಿ ಹೆಗಡೆ, ಸುಮನಾ ನಾಯಕ, ಪ್ರಮೀಳಾ ಮುದ್ದಾಪೂರ, ಜಮುನಾ ಮಾದರ, ರಾಜೇಶ್ವರಿ ಕವಡಿಮಟ್ಟಿ, ಭಾರತಿ ತಾಂಡರು, ನಾಗರಾಜ ವಡ್ಡರ್, ಪೀಟರ್ ಬೆಟಗೇರಿ, ಶೇಖಮ್ಮ ಅವರಿಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಲಾಯಿತು. ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಳೇವಿದ್ಯಾರ್ಥಿಗಳಾದ ವಿಶಾಲ ಸಿಂಗ್, ಪಡಿಯಪ್ಪ ಮನ್ನಿಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಅವರಿಂದ ಹಾಸ್ಯ ಕಾರ್ಯಾಕ್ರಮ ನಡೆಯಿತು. ಶಿಕ್ಷಕರಾದ ವಿವೇಕಾನಂದ ದೇವಾಂಗಮಠ, ಎಂ.ಎಸ್. ಶೀಪ್ರಿ, ಸಂಗಮೇಶ ಶೇಖಾ, ಕುಂಬಾರ, ಹಳೇವಿದ್ಯಾರ್ಥಿಗಳಾದ ಚಂದ್ರು ಪಟ್ಟಣಶೆಟ್ಟಿ, ವಿರೇಶ ಲಾಳ, ಅನೂಪ ತಾಪಡಿಯಾ, ಸಂತೋಷ ನೀಲೂಗಲ್, ಮಹಾಲಿಂಗೇಶ ಯಂಡಿಗೇರಿ, ಸತೀಶ ಪತ್ತಾರ, ಶರಣು ಮಲಗಾ, ಅನಿಲ ತಾಂಡೂರ, ಮಹಾಂತೇಶ ಕಳ್ಳಿಗುಡ್ಡ, ಪ್ರಸನ್ನ ಭಾವಿಕಟ್ಟಿ, ರವಿ ಮದ್ದಾನಿ, ಸಾಗರ ರಂಜಣಗಿ, ಸಮೀರ ಪರ್ವತೀಕರ, ರವಿ ಹಾದಿಮನಿ, ನಾರಾಯಣ ಕಂಠಿಗೌಡ್ರ, ಮಲ್ಲು ಹಕಾರಿ, ಸಂತೋಷ ಹರ್ತಿ, ಶಂಕರ ಗೋವಿನಕೊಪ್ಪ, ಸಿದ್ದು ಕೊಣ್ಣುರ ಸಂಗೀತಾ ಗಂಗಾವತಿ, ಕವಿತಾ ಮಲಜಿ, ನಂದಿನಿ ರಾಜನಾಳ, ಶೀಲ್ಪಾ ಸತ್ತಿಗೇರಿ, ರೂಪಾ ಮನ್ನಿಕಟ್ಟಿ, ಶಿವಲೀಲಾ ಕಳ್ಳಿಗುಡ್ಡ, ವಾಣಿಶ್ರೀ ಆಡಿನ, ಗೀತಾ ಸಕ್ರಿ, ಚಿನ್ನಕ್ಕ ಪಾಟೀಲ, ವನಿತಾ ಮಾಳಗಿ ಮತ್ತಿತರರಿದ್ದರು.