blank

ವಕೀಲರು ಕಲೆಗೆ ಜೀವ ತುಂಬಿರುವುದು ಶ್ಲಾಘನೀಯ

blank

ಶ್ರೀರಂಗಪಟ್ಟಣ: ಪೌರಾಣಿಕ ನಾಟಕ ಪ್ರದರ್ಶನಗಳಂಥ ಮನರಂಜನಾ ಕಾರ್ಯಕ್ರಮಗಳಲ್ಲಿ ವಕೀಲರು ಪಾತ್ರಧಾರಿಯಾಗಿ ಅಭಿನಯಿಸಿ ಕಲೆಗೆ ಜೀವತುಂಬಿರುವುದು ಶ್ಲಾಘನೀಯ ಎಂದು 3ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಗೋಪಾಲಕೃಷ್ಣ ರೈ ಹೇಳಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಗುರುವಾರ ತಾಲೂಕು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಸಾಮ್ರಾಟ ಸುಯೋಧನ ಅಥವಾ ಛಲದಂಕ ಮಲ್ಲ ನಾಟಕ ಪ್ರದರ್ಶನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನ್ಯಾಯಾಲಯದಲ್ಲಿ ಕ್ಷಕ್ಷಿದಾರರ ಪರ ವಾದ ಮಂಡಿಸುವ ಮೂಲಕ ಹಲವು ರೀತಿಯ ಕಾನೂನಾತ್ಮಕ ವಿಷಯಗಳಿಂದ ಒತ್ತಡದಲ್ಲೇ ಕಾರ್ಯನಿರ್ವಹಿಸುವ ನ್ಯಾಯವಾದಿಗಳು ಕಲೆ, ಸಾಹಿತ್ಯ, ಸಂಗೀತ ಹಾಗೂ ನಾಟಕಗಳಂಥ ವಿಭಿನ್ನ ರೀತಿಯ ಕಾರ್ಯಕ್ರಮಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು ಕೌಶಲ ಪ್ರದರ್ಶಿಸುತ್ತಿರುವುದು ಆರೋಗ್ಯಕರ. ಜತೆಗೆ ನಮ್ಮ ಮೂಲ ಸಂಸ್ಕೃತಿಗಳಿಗೆ ಮರುಜೀವ ನೀಡಲು ಉತ್ತಮ ವೇದಿಕೆ ಕಲ್ಪಿಸಿ ಕಲಾ ಆಸಕ್ತಿಯುಳ್ಳ ಜನರನ್ನು ಪುನಃ ಇತ್ತ ಸೆಳೆದು ರಂಜಿಸಿ ಸಾಮಾಜಿಕ ಸಂದೇಶ ನೀಡುವುದು ಶ್ಲಾಘನೀಯ ಎಂದು ತಿಳಿಸಿದರು.

ಕರ್ನಾಟಕ ವಕೀಲರ ಪರಿಷತ್ ಸದಸ್ಯ ವಿಶಾಲ್ ರಘು ಮಾತನಾಡಿ, ಶ್ರೀರಂಗಪಟ್ಟಣ ತಾಲೂಕು ವಕೀಲರು ನಾಟಕ ಪ್ರದರ್ಶನ ಆಯೋಜಿಸಿರುವುದು ಮಹತ್ವಪೂರ್ಣವಾಗಿದೆ. ನಾಡು, ನುಡಿ, ಸಂಸ್ಕೃತಿ, ಕಲೆಗಳಲ್ಲಿ ವಕೀಲರು ಕಾಳಜಿ ಮೆರೆದು ಪರಂಪರೆಯ ಪೋಷಣೆಗೆ ಮುಂದಾಗಿರುವ ನಡೆ ಸ್ವಾಗತಾರ್ಹ ಎಂದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ಸತ್ಯನಾರಾಯಣ್ ಮಾತನಾಡಿ, ಪೂರ್ವಜರ ಕಾಲದಿಂದಲೂ ನಾಟಕಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಇಂಥ ಕಾರ್ಯಕ್ರಮಗಳಿಂದ ಎಲ್ಲರಲ್ಲೂ ಸೌಹಾರ್ದತೆಯ ಬಾಂಧವ್ಯ ಹಾಗೂ ಸಂತೋಷ ವೃದ್ಧಿಯಾಗುತ್ತಿತ್ತು. ವಕೀಲರು ಒತ್ತಡ ಮುಕ್ತ ಆರೋಗ್ಯಕರ ಜೀವನ ಶೈಲಿ ಕಂಡುಕೊಳ್ಳುವ ಜತೆಗೆ ಎಲ್ಲರಲ್ಲೂ ಉತ್ತಮ ಬಾಂಧವ್ಯ ವೃದ್ಧಿಸಲು ನಾಟಕ ವೇದಿಕೆಯಾಗಲಿದ್ದು, ಸಹೋದ್ಯೋಗಿಗಳು ನಟನೆ ಪ್ರದರ್ಶಿಸಿ ಸೈ ಎನಿಸಿಕೊಳ್ಳಲಿದ್ದಾರೆ ಎಂದರು.

ನ್ಯಾಯಾಧೀಶರು ನಾಟಕ ಪ್ರದರ್ಶನ ವೀಕ್ಷಿಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಡಿ.ರೂಪಾ, ಅಪರ ಸಿವಿಲ್ ನ್ಯಾಯಾಧೀಶ ಮಹದೇವಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶ ಹರೀಶ್ ಕುಮಾರ್, ಕಿರಿಯ ಸಿವಿಲ್ ನ್ಯಾಯಾಧೀಶ ಹನುಮಂತರಾಯಪ್ಪ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ವಕೀಲರ ಪರಿಷತ್ ಸದಸ್ಯ ಚಂದ್ರಮೌಳಿ, ಹೈಕೋರ್ಟ್ ಹಿರಿಯ ವಕೀಲ ಕರ್ಣ, ವಕೀಲರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಪವನ್ ಡಿ.ಗೌಡ ಸೇರಿದಂತೆ ಮಂಡ್ಯ, ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ವಕೀಲರ ಸಂಘದ ಅಧ್ಯಕ್ಷರು, ಇತರರು ಭಾಗಿಯಾಗಿದ್ದರು.

 

 

 

 

 

Share This Article

ವಕ್ರ ದಂತ ಸಮಸ್ಯೆಗೆ ಸೂಕ್ತ ಪರಿಹಾರ ಅಲೈನರ್

ಹಲ್ಲು ಅಡ್ಡಾದಿಡ್ಡಿ ಇದ್ದರೆ ಅಂಥವರು ಮುಜುಗರದಿಂದ ಮನಬಿಚ್ಚಿ ನಗದಿರುವುದೇ ಹೆಚ್ಚು. ಆದರೆ ಈಗ ಅಷ್ಟಕ್ಕೆಲ್ಲ ಚಿಂತೆ…

ಚಿಕ್ಕ ಮಕ್ಕಳು ಹಗಲಲ್ಲಿ ಅಧಿಕ ನಿದ್ರಿಸಲು ಇದೇ ಕಾರಣವಂತೆ! ವೈದ್ಯರು ಹೇಳೊದೇನು? | Children Sleep

Children Sleep: ಸಾಮಾನ್ಯವಾಗಿ ಹುಟ್ಟಿನಿಂದ 6 ತಿಂಗಳವರೆಗೆ, ಮಕ್ಕಳು ಯಾವಾಗ ಮಲಗುತ್ತಾರೆ ಮತ್ತು ಯಾವಾಗ ಎಚ್ಚರಗೊಳ್ಳುತ್ತಾರೆ…