ಪ್ರೀ ಪ್ಲಾನ್‌ ಮಾಡಿ ನನ್ನ ತೇಜೋವಧೆ ಮಾಡಲಾಗ್ತಿದೆ ಎಂದ ಕಿರುತೆರೆ ನಟ ರಾಜೇಶ್​ ಧ್ರುವ

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ, ಧಾರವಾಹಿಯ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ತಮ್ಮ ಮೇಲಿನ ವರದಕ್ಷಿಣೆ ಕಿರುಕುಳ ಆರೋಪವನ್ನು ತಳ್ಳಿಹಾಕಿದ್ದು, ಪ್ರೀಪ್ಲಾನ್ ಮಾಡಿ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಸವನಗುಡಿ ಮಹಿಳಾ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಸತ್ಯವತಿ ಅವರಿಂದ ವಿಚಾರಣೆಯನ್ನು ಎದುರಿಸಿದ ಬಳಿಕ ಮಾತನಾಡಿದ ಅವರು, 2013 ರಲ್ಲಿ ನಾನು ಶ್ರುತಿಯನ್ನು ಮದುವೆಯಾಗಿದ್ದು ನಿಜ. ಆದರೆ, ಆಕೆಯ ಟಾರ್ಚರ್​ನಿಂದ 2017 ರಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೇನೆ. ಕಳೆದ ಜೂನ್​​ನಲ್ಲಿಯೇ ಕೋರ್ಟ್​ ಮೆಟ್ಟಿಲೇರಿದ್ದೇವೆ. ಆದರೆ, ಶ್ರುತಿ ಈಗೇಕೆ ದೂರು ನೀಡಿದ್ದಾರೆಂದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮಗಳ ವಿರುದ್ಧ ಗರಂ ಆದ ನಟ

ನನ್ನ ಸಿನಿಮಾ ಪ್ರೊಮೋಷನ್ ಮಾಡಿ ಅಂದರೆ ಮಾಡಲಿಲ್ಲ. ಆದರೆ, ಈಗ ನೀವು ಅದ್ಭುತವಾದ ಕವರೇಜ್ ಕೊಟ್ಟಿದ್ದೀರಾ. ಇದೆಲ್ಲ ಪ್ರೀ ಪ್ಲಾನ್‌ ಆಗಿ ನನ್ನ ತೇಜೊವಧೆ ಮಾಡಲಾಗುತ್ತಿದೆ. ವಿಚಾರಣೆಗೆ ಹಾಜರಾಗಿದ್ದೇನೆ ಮುಂದಿನ ನಿರ್ಧಾರ ನ್ಯಾಯಾಲಯದಲ್ಲಿ ಆಗಲಿದೆ ಎಂದರು.

ಮಾಹಿತಿ ಕೇಳಿದ ಡಿಸಿಪಿ ಅಣ್ಣಾಮಲೈ

ಇನ್ನು ಮಾಧ್ಯಮಗಳಲ್ಲಿ ವರದಿ ಪ್ರಸಾರ ವಾಗುತ್ತಿದ್ದಂತೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾ ಮಲೈ ಬಸವನಗುಡಿ ಮಹಿಳಾ ಠಾಣೆಯ ಇನ್ಸ್‌ಪೆಕ್ಟರ್‌ ಸತ್ಯವತಿ ಅವರಿಗೆ ಕರೆ ಮಾಡಿ ದಾಖಲಾಗಿರುವ ದೂರಿನ ಬಗ್ಗೆ ಮಾಹಿತಿ ಕೇಳಿದ್ದಾರೆ.

ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಅವರಿಂದ ಹೇಳಿಕೆ ಪಡೆದಿದ್ದೇವೆ. ಇಂದು ವಿಚಾರಣೆಗೆ ಹಾಜರಾಗುವಂತೆ ನಟ ರಾಜೇಶ್‌ಗೆ ನೋಟಿಸ್ ನೀಡಿದ್ದೆವು. ಅದರಂತೆ ಅವರು ಮತ್ತು ಕುಟುಂಬಸ್ಥರು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರಲ್ಲಿ ಯಾರೇ ತಪ್ಪು ಮಾಡಿದರೂ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಣ್ಣಾಮಲೈ ಸೂಚಿಸಿದ್ದಾರೆ. (ದಿಗ್ವಿಜಯ ನ್ಯೂಸ್)

One Reply to “ಪ್ರೀ ಪ್ಲಾನ್‌ ಮಾಡಿ ನನ್ನ ತೇಜೋವಧೆ ಮಾಡಲಾಗ್ತಿದೆ ಎಂದ ಕಿರುತೆರೆ ನಟ ರಾಜೇಶ್​ ಧ್ರುವ”

  1. ರಾಜೇಶ್ ಧುವ ನ ವೈಯಕ್ತಿಕ ಜೀವನವನ್ನು ಮತ್ತೆ ಮತ್ತೆ ಪ್ರಸಾರ ಮಾಡಿ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಹುನ್ನಾರ ಚಾನಲ್ ಗಳಿಗಿವೆ ಎನಿಸುತ್ತದೆ. ಅವರು ಕಲಾವಿದರಾಗದೇ ಸಾಮಾನ್ಯ ಜನರಾಗಿದ್ದರೆ ಮಾಧ್ಯಮದವರು ಇಷ್ಟು ಆಸಕ್ತಿ ತೋರಿಸುತ್ತಿರಲಿಲ್ಲ.
    ಶೃತಿ ಗಿಂತ ಕಷ್ಟ ಅನುಭವಿಸುವವರು ಸಾಕಷ್ಟು ಹುಡುಗಿಯರು ಕಣ್ಣ ಮುಂದೆ ಇದ್ದಾರೆ. ಅವರ ಬಗ್ಗೆ ಹಾಕುತ್ತಾ ಹೋದರೆ ಇನ್ನೂ ಚಾನಲ್ ಗಳು ಬೇಕಾಗುತ್ತವೆ. ಕಲಾವಿದರ ವೈಯಕ್ತಿಕ ಜೀವನ ಅಂದ್ರೆ ಮಾಧ್ಯಮದ ವರಿಗೆ ಸುಲಭವಾಗಿಬಿಟ್ಟಿದೆ. ಯಾವ ಚಾನಲ್ ಕೂಡಾ ರಾಜೇಶ್ ನನ್ನು ಕೂಡಿಸಿಕೊಂಡು ಮಾತಾಡಿಲ್ಲ.
    ಹುಡುಗಿ ಪರವಾಗೇ ವಾದಿಸಿವೆ. ಆ ಹುಡುಗಿ ಗಟ್ಟಿ ಗಿತ್ತಿ. ಕುಡಿಯುವ ಧೈರ್ಯ ಇದೆ ಯೆಂದಾದರೆ ಡೈವೋರ್ಸ್ ಕೊಟ್ಟು ಬೇರೆ ಮದುವೆಯಾಗಲಿ. ಆಕೆ ರಾಜೇಶ್ ನನ್ನು ನಿಜವಾಗಿಯೂ ಪ್ರೀತಿಸಿದ್ದರೆ, ಬೇರೆಬೇರೆ ಯಾಗಿ ಇಬ್ಬರೂ ನೆಮ್ಮದಿಯಿಂದ ಬದುಕಲಿ. ಆದರೆ ಶೃತಿ ಗೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಡೈವೋರ್ಸ್ ಆಗುತ್ತಿಲ್ಲ. ಅವನು ಮದುವೆಯಾಗದೇ ಬೇರೆ ಯಾಗಿದ್ದು ಜೀವಿಸುತ್ತಾನೆ. ಒಡೆದ ಕನ್ನಡಿ ಮತ್ತೆಂದೂ ಸರಿಹೋಗಲ್ಲ.

Comments are closed.