ಭ್ರಷ್ಟಾಚಾರ ಇಳಿಕೆಯಾಗದಿರುವುದು ದುರಂತ

blank

ಶ್ರೀರಂಗಪಟ್ಟಣ : ಕಂದಾಯ ಇಲಾಖೆ ಹಾಗೂ ಪುರಸಭಾ ಕಚೇರಿ ವಿರುದ್ಧ ಈ ಹಿಂದೆ ಕೇಳಿಬಂದ ಸಾಕಷ್ಟು ದೂರುಗಳ ಆಧಾರದ ಮೇಲೆ ಕೆಲ ಭ್ರಷ್ಟರನ್ನು ವಶಕ್ಕೆ ಪಡೆದಿದ್ದರೂ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳು ಇನ್ನೂ ಕಡಿಮೆಯಾಗದಿರುವುದು ವಿಷಾದನೀಯ ಎಂದು ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಲೋಕಾಯುಕ್ತ ಪೊಲೀಸ್ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಕಂದಾಯ ಇಲಾಖೆ, ಗ್ರಾಮ ಮತ್ತು ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ವ್ಯಾಪ್ತಿಗೆ ಬರುವ ಪೌತಿಖಾತೆ, ಖಾತೆ ಬದಲಾವಣೆ, ಇ-ಖಾತೆ, ಅಭಿಲೇಖಾಲಯ ದಾಖಲೆಗಳ ನಕಲು ನೀಡಲು ಜನರನ್ನು ಸತಾಯಿಸಿ ನಿರಂತರವಾಗಿ ಅಲೆದಾಡಿಸುವುದು ಇಂತಹ ದೂರುಗಳೇ ಹೆಚ್ಚು ಹೆಚ್ಚಾಗಿ ಕೇಳಿಬರುತ್ತಿದೆ. ಇದು ನಿಜವಾಗಿಯೂ ವಿಷಾದದ ಸಂಗತಿ. ಕೆಲವೊಂದು ಸುಳ್ಳು ದೂರುಗಳನ್ನು ನಾವೇ ಪರಿಶೀಲಿಸಿ ತನಿಖೆ ನಡೆಸಲಿದ್ದೇವೆ. ಆದರೆ ವಿದ್ಯಾವಂತರಾದ ನಾವು ಜನರ ಸಮಸ್ಯೆಗಳಿಗೆ ನೇರವಾಗಿ ನೆರಳಾಗಬೇಕಿದ್ದು, ನಾವುಗಳೇ ಸಮಸ್ಯೆ ತಂದೊಡ್ಡಬಾರದು ಎಂದು ಎಚ್ಚರಿಸಿದರು.
ಬಳಿಕ ಸಭೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ಮನವಿ ಆಲಿಸಿದ್ದು, ಜನರಿಂದ ಈ ವೇಳೆ ವಿವಿಧ ಪ್ರಕರಣಗಳ ಕುರಿತು 22 ದೂರುಗಳು ಸಲ್ಲಿಕೆಯಾದವು. ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಚೈತ್ರಾ, ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಮೋಹನ್ ರೆಡ್ಡಿ, ಜಯರತ್ನ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಾರುತಿ, ತಾಲೂಕು ಪಶು ವೈದ್ಯಾಧಿಕಾರಿ ಜಿ.ಜೆ.ಸುರೇಶ್ ಸೇರಿದಂತೆ ತಾಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article

ಮನೆಯಲ್ಲೇ ಮಾಡಿ ಟೇಸ್ಟಿ ಚಿಲ್ಲಿ ಚೀಸ್​​ ನೂಡಲ್ಸ್​​; ಇಲ್ಲಿದೆ ಸಿಂಪಲ್​ ವಿಧಾನ | Recipe

ಫ್ಯಾಮಿಲಿ ಜತೆ ಹೋಟೆಲ್​ಗೆ ಹೋದರೆ ಫ್ರೈಡ್​ರೈಸ್​​, ನೂಡಲ್ಸ್​​, ಗೋಬಿ ಹೀಗೆ ಚೈನೀಸ್​​​ ಫುಡ್ ಮೊದಲ ಆಯ್ಕೆಯಾಗಿರುತ್ತದೆ.…

ಈ ಕಾಯಿಲೆಯಿಂದ ಬಳಲುತ್ತಿರುವವರು ತಪ್ಪಾಗಿಯೂ ಬೀಟ್ರೂಟ್​ ಸೇವಿಸಬೇಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಬೀಟ್ರೂಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾದ ತರಕಾರಿಯಾಗಿದೆ. ಇದು ಜೀವಸತ್ವಗಳು, ಖನಿಜಾಂಶಗಳು ಮತ್ತು ಉತ್ಕರ್ಷಣ…

ಗರ್ಭನಿರೋಧಕ ಮಾತ್ರೆಗಳಿಂದ ಅಪಾಯ ತಪ್ಪಿದ್ದಲ್ಲ; ಇಲ್ಲಿದೆ ಸಂಶೋಧನೆಯಲ್ಲಿ ಬಹಿರಂಗವಾದ ಅಸಲಿ ಸಂಗತಿ |Health Tips

ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡು ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವುದು ಅತ್ಯಂತ ಜನಪ್ರಿಯ ವಿಧಾನವಾಗಿದೆ. ಪ್ರಪಂಚದಾದ್ಯಂತ ಅಂದಾಜು 250…