ಇಸ್ರೋ ಸಂವಹನ ಉಪಗ್ರಹ ‘ ಇಂಡಿಯನ್ ಆ್ಯಂಗ್ರಿ ಬರ್ಡ್​’ ಯಶಸ್ವಿ ಉಡಾವಣೆ

ಶ್ರೀಹರಿಕೋಟ: ಭಾರತೀಯ ವಾಯು ಪಡೆಗೆ ಸುಗಮ ಸಂವಹನ ಸೌಲಭ್ಯ ಕಲ್ಪಿಸಿಕೊಡುವ ಜಿಸ್ಯಾಟ್​-7ಎ ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ಇಸ್ರೋ ಸಾಧನೆಯಲ್ಲಿ ಮತ್ತೊಂದು ಗರಿ ಮೂಡಿದೆ.

ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ 4.10ಕ್ಕೆ ಜಿಎಸ್​ಎಲ್​ವಿ-ಎಫ್11 ರಾಕೆಟ್ ಮೂಲಕ ಉಡಾವಣೆಯಾದ ಈ ಉಪಗ್ರಹ ಭಾರತೀಯ ಸೇನೆಗೆ ಸಂವಹನ ಸೌಲಭ್ಯ ಒದಗಿಸಲಿದೆ. 2018ರ 17ನೇ ಮಿಷನ್​ ಇದಾಗಿದ್ದು ಈ ವರ್ಷ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿದ ಕೊನೆಯ ಉಪಗ್ರಹವಾಗಿದೆ.

ಒಟ್ಟು 2,250 ಕೆ.ಜಿ. ಭಾರವಾಗಿರುವ ಜಿಸ್ಯಾಟ್-7ಎ (ಇಂಡಿಯನ್​ ಆ್ಯಂಗ್ರಿ ಬರ್ಡ್​) ಇಸ್ರೋದ 35ನೇ ಸಂವಹನ ಉಪಗ್ರಹವಾಗಿದೆ. ಇದು ಕೆಯು ಬ್ಯಾಂಡ್ ಮೂಲಕ ಸಂವಹನ ಸೌಲಭ್ಯ ಒದಗಿಸಲಿದೆ. ದೇಶೀಯ ಜಿಎಸ್​ಎಲ್​ವಿ ರಾಕೆಟ್​ಗೆ ಇದು 13ನೇ ಹಾರಾಟವಾಗಿದ್ದು, ಉಪಗ್ರಹವನ್ನು ನಿರ್ದಿಷ್ಟ ಕಕ್ಷೆಗೆ ಸೇರಿಸುವ ನಿಟ್ಟಿನಲ್ಲಿ ಸ್ವದೇಶಿ ನಿರ್ವಿುತ ಕ್ರಯೋಜೆನಿಕ್ ಇಂಜಿನ್​ನೊಂದಿಗೆ ಜಿಎಸ್​ಎಲ್​ವಿ ಹಾರಾಟ ಕೈಗೊಳ್ಳುತ್ತಿರುವ 7ನೇ ಯೋಜನೆ ಇದಾಗಿದೆ. (ಏಜೆನ್ಸೀಸ್)

ದೇಶದ ಅತ್ಯಂತ ಭಾರವಾದ ಉಪಗ್ರಹ ಜಿಸ್ಯಾಟ್​-11 ಉಡಾವಣೆ: ಇಸ್ರೋದ ಹೊಸ ದಾಖಲೆ

ಇಸ್ರೋದಿಂದ ಭೂ ಅಧ್ಯಯನ ‘ಹೈಸಿಸ್’​ ಸೇರಿ ಜಾಗತಿಕ 30 ಉಪಗ್ರಹಗಳ ಉಡಾವಣೆ

ಜಿಸ್ಯಾಟ್​-29 ಉಪಗ್ರಹ ಉಡಾವಣೆ ಯಶಸ್ವಿ