ಜಿಸ್ಯಾಟ್ 11 ಉಡಾವಣೆ ಮುಂದೂಡಿದ ಇಸ್ರೋ

ಬೆಂಗಳೂರು: ಜಿಸ್ಯಾಟ್ 6ಎ ಉಪಗ್ರಹ ಸಂಪರ್ಕ ಕಳೆದುಕೊಂಡ ಬೆನ್ನಲ್ಲೇ ಸಂವಹನ ಉಪಗ್ರಹ ಜಿಸ್ಯಾಟ್ 11 ಉಪಗ್ರಹ ಉಡಾವಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮುಂದೂಡಿದೆ.

ಮೇ 25ರಂದು ಫ್ರಾನ್ಸ್​ನ ಫ್ರೆಂಚ್ ಗಯಾನಾ ಕೌರು ಉಪಗ್ರಹ ಉಡಾವಣಾ ಕೇಂದ್ರದಿಂದ ಜಿಸ್ಯಾಟ್ 11 ಉಪಗ್ರಹ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿತ್ತು. ಏರಿಯನ್​ಸ್ಪೇಸ್ ಕಂಪನಿ ತಯಾರಿಸಿರುವ ಏರಿಯನ್ 5 ರಾಕೆಟ್ ಮೂಲಕ ಉಡಾವಣೆಯಾಗುವುದಿತ್ತು. ಆದರೆ ಇದೀಗ ಉಪಗ್ರಹವನ್ನು ಕೌರು ಸ್ಪೇಸ್​ಪೋರ್ಟ್​ನಿಂದ ಇಸ್ರೋ ವಾಪಸ್ ಕರೆಸಿಕೊಂಡಿದೆ. ಉಡಾವಣೆ ಮುಂದೂಡಲಾಗಿದ್ದರೂ, ಮುಂದಿನ ದಿನಾಂಕವನ್ನು ಇಸ್ರೋ ಅಧಿಕೃತವಾಗಿ ಪ್ರಕಟಿಸಿಲ್ಲ. ಪ್ರಸ್ತುತ ವರ್ಷದ ಪ್ರಮುಖ ಉಪಗ್ರಹ ಉಡಾವಣೆ ಎಂದೇ ಜಿಸ್ಯಾಟ್ 11ನ್ನು ಪರಿಗಣಿಸಲಾಗಿದೆ. 5,870 ಕೆ.ಜಿ.ತೂಕದ ಈ ಉಪಗ್ರಹ 12-14 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್) ವೇಗದ ಇಂಟರ್​ನೆಟ್ ಸೌಲಭ್ಯ ನೀಡುವ ಸಾಮರ್ಥ್ಯ ಹೊಂದಿದೆ. ಮಾ.29ರಂದು ಶ್ರೀಹರಿಕೋಟದಿಂದ ಉಡಾವಣೆಯಾದ ಜಿಸ್ಯಾಟ್ 6ಎ ಉಪಗ್ರಹ ಸಂಪರ್ಕ ಕಡಿತವಾದ ಹಿನ್ನೆಲೆಯಲ್ಲಿ, ಜಿಸ್ಯಾಟ್ 11 ಉಡಾವಣೆಗೂ ಮುನ್ನ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಲು ಇಸ್ರೋ ನಿರ್ಧರಿಸಿದೆ.

Leave a Reply

Your email address will not be published. Required fields are marked *