ಬೈರೂತ್: ಲೆಬನಾನ್ನಲ್ಲಿ ಇಸ್ರೇಲ್ ಪಡೆಗಳು ವೈಮಾನಿಕ ದಾಳಿ ಶನಿವಾರವೂ ಮುಂದುವರೆದಿದ್ದು, ಇರಾನ್ ಸುಪ್ರೀಂ ಲೀಡರ್ ಇಸ್ರೇಲ್ ವಿರುದ್ಧ ಗುಡುಗಿದ ಬಳಿಕ ಇಸ್ರೇಲ್ ತನ್ನ ವಾಯುದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಇದನ್ನೂ ಓದಿ: IndiGo Outage: ಇಂಡಿಗೋ ಏರ್‌ಲೈನ್ಸ್‌ನಲ್ಲಿ ಸರ್ವರ್ ಸಮಸ್ಯೆ; ದೇಶಾದ್ಯಂತ ಪ್ರಯಾಣಿಕರ ಪರದಾಟ
ದಕ್ಷಿಣ ಲೆಬನಾನ್ ಬಳಿಕ ಹೆಜ್ಬುಲ್ಲಾ ಭಯೋತ್ಪಾದಕರ ಗುಂಪನ್ನು ಗುರಿಯಾಗಿಸಿ ಉತ್ತರ ಲೆಬನಾನ್ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ. ಟ್ರಿಪೋಲಿ ಶನಿವಾರ ಟ್ರಿಪೋಲಿ ನಗರದ ಮೇಲೆ ದಾಳಿ ನಡೆಸಿ, ಹಮಾಸ್‌ನ ಚೀಫ್ ಕಮಾಂಡರ್ ಹಾಗೂ ಆತನ ಕುಟುಂಬವನ್ನು ಹತ್ಯೆಗೈದಿದೆ.
ಇದರ ಬೆನ್ನಲ್ಲೇ ಇಸ್ರೇಲಿ ಸೇನೆಯು ಇನ್ನಷ್ಟು ಪ್ರದೇಶಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದು ತಕ್ಷಣವೇ ಆ ಪ್ರದೇಶದಿಂದ ನಿವಾಸಿಗಳು ಪಲಾಯನ ಮಾಡುವಂತೆ ಎಚ್ಚರಿಕೆ ನೀಡಿದೆ.
ಶುಕ್ರವಾರವಷ್ಟೇ ಹಿಜ್ಬುಲ್ಲಾ ಭಯೋತ್ಪಾದಕರನ್ನು ಹತ್ಯೆಗೈದಿರುವ ಬಗ್ಗೆ ಇಸ್ರೇಲ್ ಮಾಹಿತಿ ಹಂಚಿಕೊಂಡಿತ್ತು. ಕಳೆದ ಒಂದು ವಾರದಲ್ಲಿ ಇಸ್ರೇಲ್ ಹಿಜ್ಬುಲ್ಲಾದ 2,000ಕ್ಕೂ ಹೆಚ್ಚು ಸೇನಾ ನೆಲೆಗಳ ಗುರಿಯಾಗಿಸಿ ದಾಳಿ ನಡೆಸಿದ್ದು, 250ಕ್ಕೂ ಹೆಚ್ಚು ಮಂದಿಯನ್ನು ಹತ್ಯೆಗೈದಿದೆ. ಇದರಲ್ಲಿ 5 ಬೆಟಾಲಿಯನ್ ಕಮಾಂಡರ್, 10 ಕಂಪನಿ ಕಮಾಂಡರ್ ಹಾಗೂ 6 ಪ್ಲಟೂನ್ ಕಮಾಂಡರ್‌ಗಳನ್ನ ಕೊಂದಿರುವುದಾಗಿ ಹೇಳಿಕೊಂಡಿತ್ತು.
ಶಸ್ತ್ರಾಗಳನ್ನು ಸಾಗಿಸಲು ಈ ಗಡಿ ರಸ್ತೆಯನ್ನು ಹುಜ್ಬುಲ್ಲಾ ಬಂಡುಕೋರರು ಬಳಸುತ್ತಿದ್ದಾರೆ. ಹೀಗಾಗಿ ಅದನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಇರಾನ್ ಸೇರಿದಂತೆ ಹಲವು ದೇಶಗಳಿಂದ ಶಸ್ತ್ರಾಗಳನ್ನು ಸಾಗಣೆ ಮಾಡಲು ಬಳಸುತ್ತಿದ್ದ ಸುರಂಗಕ್ಕೆ ನಮ್ಮ ಫೈಟರ್ ಜೆಟ್ ದಾಳಿ ನಡೆಸಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಆರಂಭಿಸಿತ್ತು. ಈವರೆಗೂ ಇದೇ ಪ್ರದೇಶದಲ್ಲಿ ಸತತ 10 ಬಾರಿ ದಾಳಿ ನಡೆಸಿದೆ. ಇದರಲ್ಲಿ ಹಿಜ್ಬಲ್ಲಾ ಹೋರಾಟಗಾರರು ಹಾಗೂ ನಾಗರಿಕರು ಸೇರಿ 1,400 ಲೆಬನಾನ್ ಪ್ರಜೆಗಳು ಸಾವಿಗೀಡಾಗಿದ್ದಾರೆ. ಸುಮಾರು 12 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಲೆಬನಾನ್ನ ಸರ್ಕಾರಿ ವಾರ್ತಾ ಏಜೆನ್ಸಿ ಮಾಹಿತಿ ನೀಡಿದೆ.
Maharashtra | ಕಾಂಗ್ರೆಸ್ ಪಕ್ಷವನ್ನು ನಗರ ನಕ್ಸಲರ ಗುಂಪು ನಡೆಸುತ್ತಿದೆ: ಪ್ರಧಾನಿ ಮೋದಿ ಆರೋಪ