ಇಸ್ಲಾಮಿಯಾ ರಾಜ್ಯ ಸಮ್ಮೇಳನ

blank

ಹುಬ್ಬಳ್ಳಿ: ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಜಾಗೃತಿ ಮತ್ತು ವೃತ್ತಿ ಕೌಶಲತೆ ಬೆಳೆಸುವ ಸಲುವಾಗಿ ನಗರದ ಕಾರವಾರ ರಸ್ತೆ ಈದ್ಗಾ ಮೈದಾನದಲ್ಲಿ ಫೆ. 8ರಿಂದ ಎರಡು ದಿನಗಳವರೆಗೆ ಸುನ್ನಿ ದಾವತೆ ಇಸ್ಲಾಮಿಯಾ 27ನೇ ರಾಜ್ಯ ಮಟ್ಟದ ವಾರ್ಷಿಕ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಹುಬ್ಬಳ್ಳಿಯ ಸುನ್ನಿ ದಾವತೆ ಇಸ್ಲಾಮಿಯಾ ಕಾರ್ಯದರ್ಶಿ ಮಹಮ್ಮದ್ ಅಸ್ಲಂ ಮುಜಾಹಿದ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅಂತಾರಾಷ್ಟ್ರೀಯ ಮಟ್ಟದ ಪಾತೀತ ಸಂಸ್ಥೆಯಾಗಿದೆ. ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಲ್ಲಿ ನಿರತವಾಗಿದೆ. ಸಮಾಜದ ಏಳ್ಗೆಗಾಗಿ ತೊಡಗಿಸಿಕೊಂಡಿದೆ. ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ ಎಂದರು.

ಫೆ. 8ರಂದು ಬೆಳಗ್ಗೆ 10ಕ್ಕೆ ಮಹಿಳೆಯರ ಸಮ್ಮೇಳನ ನಡೆಯಲಿದೆ. ಮುಂಬೈನ ನಾಥ್ ಖಾನ್ ಖಾರಿ ಮಹ್ಮದ್ ರಿಜ್ವಾನ್ಖಾನ್ ಅವರು ಉದ್ಘಾಟಿಸುವರು. ಹಲವು ಗಣ್ಯರು, ಪರಿಣಿತರು ಉಪನ್ಯಾಸ ನೀಡುವರು.

ಫೆ. 9ರಂದು ಪುರುಷರ ಸಮ್ಮೇಳನ ನಡೆಯಲಿದೆ. ವಿದ್ಯಾರ್ಥಿಗಳಿಗೆ ಕರಿಯರ್ ಗೈಡನ್ಸ್ ಶಿಬಿರ ನಡೆಯಲಿದೆ. ಸಮ್ಮೇಳನಕ್ಕಾಗಿ ಸಿದ್ಧತೆ ಮಾಡಲಾಗಿದೆ. ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ ಎಂದರು.

ಗೋಷ್ಠಿಯಲ್ಲಿ ಸುನ್ನಿ ದಾವತೆ ಇಸ್ಲಾಮಿ ಅಧ್ಯಕ್ಷ ಸೈಯದ್ ಮೆಹಬೂಬ್ ಕಲೈಗಾರ, ಸದಸ್ಯರಾದ ರಹಿಂ ಲಷ್ಕರ್, ರಬ್ಬಾನಿ ಮಾಜಿದಂಡಿ, ಡಾ. ಝಿಲತ್ ಹುಸೇನ್ ಇತರರು ಇದ್ದರು.

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…