ಇಸ್ಲಾಂ ವಿರೋಧಿಗಳು ನನ್ನನ್ನು ಟಾರ್ಗೆಟ್​ ಮಾಡಿದ್ದಾರೆ: ಝಾಕಿರ್​ ನಾಯ್ಕ್​

ಕಂಗರ್​ (ಮಲೇಷ್ಯಾ): ಉಗ್ರರಿಗೆ ಹಣಕಾಸು ನೆರವು ಹಾಗೂ ಪ್ರಚೋದನೆ ನೀಡಿರುವ ಆರೋಪ ಎದುರಿಸುತ್ತಿರುವ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್​ ತಾನು ಭಾರತದ ಕಾನೂನನ್ನು ಉಲ್ಲಂಘಿಸಿಲ್ಲ, ಇಸ್ಲಾಂ ವಿರೋಧಿಗಳು ನನ್ನು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾನೆ.

ಮಲೇಷ್ಯಾದ ಕಂಗರ್​ನಲ್ಲಿ ಶನಿವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಝಾಕಿರ್​ ನಾಯ್ಕ್​, ನಾನು ವಿಶ್ವದಲ್ಲಿ ಶಾಂತಿಯನ್ನು ಹರಡಲು ಪ್ರಯತ್ನಿಸುತ್ತಿದ್ದೆ, ನಾನು ಮನುಷ್ಯತ್ವಕ್ಕೆ ಪರಿಹಾರ ನೀಡುತ್ತಿದ್ದೆ. ಶಾಂತಿ ಹರಡುವುದು ಯಾರಿಗೆ ಇಷ್ಟವಿಲ್ಲವೋ ಅವರಿಗೆ ನಾನು ಇಷ್ಟವಾಗುವುದಿಲ್ಲ. ನಾನು ಇಸ್ಲಾಂ ಧರ್ಮವನ್ನು ಹರಡುತ್ತಿರುವುದರಿಂದ ನನ್ನನ್ನು ಇಸ್ಲಾಂ ವಿರೋಧಿಗಳು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಝಾಕಿರ್​ ನಾಯ್ಕ್​ ತಿಳಿಸಿದ್ದಾನೆ.

ಝಾಕಿರ್​ ನಾಯ್ಕ್​ ವಿರುದ್ಧ ದ್ವೇಷ ಭಾಷಣ ಮೂಲಕ ಪ್ರಚೋದನೆ ನೀಡುತ್ತಿದ್ದ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳ ದಾಖಲಾಗಿದ್ದು, ಎನ್​ಐಎ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಸಂಬಂಧ ಎನ್​ಐಎ ಮುಂಬೈನ ವಿಶೇಷ ನ್ಯಾಯಾಲಯಕ್ಕೆ 2017ರ ಅಕ್ಟೋಬರ್​ನಲ್ಲಿ ಚಾರ್ಜ್​ ಶೀಟ್​ ಸಲ್ಲಿಸಿದೆ. ಎನ್​ಐಎ ತನ್ನ ಚಾರ್ಜ್​ಶೀಟ್​ನಲ್ಲಿ ಝಾಕೀರ್ ನಾಯ್ಕ್​ ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ. ದ್ವೇಷ ಭಾಷಣಗಳ ಮೂಲಕ ಪ್ರಚೋದನೆ ನೀಡಿ ಸಮುದಾಯಗಳ ನಡುವೆ ವೈರತ್ವ ಹೆಚ್ಚಿಸುವ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದೆ.

ಝಾಕಿರ್​ ನಾಯ್ಕ್​ 2016 ರಲ್ಲಿ ದೇಶ ತೊರೆದು ಮಲೇಷ್ಯಾದಲ್ಲಿ ನೆಲೆಸಿದ್ದಾನೆ. ಮಲೇಷ್ಯಾ ಸರ್ಕಾರ ಝಾಕಿರ್​ ನಾಯ್ಕ್​ಗೆ ಪೌರತ್ವ ನೀಡಿದೆ, ಜತೆಗೆ ಆತನನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ ಎಂದು ತಿಳಿಸಿದೆ. (ಏಜೆನ್ಸೀಸ್​)

ಭಾರತಕ್ಕೆ ಮರಳಿ ಬರುವ ಯೋಚನೆ ಇಲ್ಲ: ಝಾಕಿರ್​ ನಾಯ್ಕ್​

ಝಾಕಿರ್ ಹಸ್ತಾಂತರ ಇಲ್ಲ ಮಲೇಷ್ಯಾ ಪ್ರಧಾನಿ ಸ್ಪಷ್ಟನೆ