ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ತಮಿಳು ನಟ ಸಿಂಬು ಸಹೋದರ

ಚೆನ್ನೈ: ತಮಿಳು ನಟ ಸಿಂಬು (ಸಿಂಬರಸನ್​) ಅವರ ಸಹೋದರ ಕುರಾಲರಸನ್​ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ಈ ಬಗ್ಗೆ ಸಿಂಬು ಅವರ ತಂದೆ ಡಾ. ರಾಜೇಂದ್ರನ್​ ಅವರೇ ಮಾಹಿತಿ ನೀಡಿದ್ದಾರೆ.
ಸಿಂಬು ಅವರ ಕಿರಿಯ ಸಹೋದರ ಕುರಾಲರಸನ್​ ​ ಹಲವು ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದಾರೆ. ಅಲ್ಲದೆ ತಮಿಳು ರಾಜ್ಯ ಪ್ರಶಸ್ತಿ ಪುರಸ್ಕೃತರೂ ಹೌದು. ಈಗ ತಂದೆ-ತಾಯಿ ನೇತೃತ್ವದಲ್ಲಿಯೇ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ.

ತಮ್ಮ ಮಗ ಕುರಾಲರಸನ್​ ​ ಇಸ್ಲಾಂಗೆ ಮತಾಂತರಗೊಂಡಿದ್ದರ ಬಗ್ಗೆ ಬೇಸರವಿಲ್ಲ. ಸಿಂಬು ಶಿವನನನ್ನು ನಂಬುತ್ತಾರೆ. ಮಗಳು ಕ್ರಿಶ್ಚಿಯನ್​ ಧರ್ಮದಲ್ಲಿ ನಂಬಿಕೆ ಇಟ್ಟಿದ್ದಾಳೆ. ಎಲ್ಲವನ್ನೂ ನಾನು ಒಪ್ಪುತ್ತೇನೆ. ಕಾರಣ ಎಲ್ಲ ದೇವರೂ ಒಂದೇ ಎಂದು ಡಾ. ರಾಜೇಂದ್ರನ್​ ತಿಳಿಸಿದ್ದಾರೆ. ಡಾ. ರಾಜೇಂದ್ರನ್​ ಕೂಡ ಸಿನಿಮಾ ನಿರ್ದೇಶಕರು.

ಸಿಂಬು ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧ ನಟ. ಹಾಗೇ ಚಿತ್ರ ನಿರ್ದೇಶನ, ಹಾಡುಗಳನ್ನು ಬರೆಯುವುದು, ಸಂಗೀತ ಸಂಯೋಜನೆಯಲ್ಲೂ ತೊಡಗಿಕೊಂಡಿದ್ದಾರೆ. ಹಿನ್ನೆಲೆ ಗಾಯಕರೂ ಹೌದು.