More

    ಐಸಿಸ್​ ಸ್ಥಾಪಕ ಸದಸ್ಯನೇ ಸಂಘಟನೆಯ ಹೊಸ ನಾಯಕ: ಖಚಿತಪಡಿಸಿದ ಗುಪ್ತಚರ ಅಧಿಕಾರಿಗಳು

    ನವದೆಹಲಿ: ಇಸ್ಲಾಮಿಕ್​ ಸ್ಟೇಟ್​ ಇನ್​ ಇರಾಕ್​ ಆ್ಯಂಡ್​ ಸಿರಿಯಾ ಉಗ್ರ ಸಂಘಟನೆಗೆ ಹೊಸ ನಾಯಕನನ್ನು ನೇಮಿಸಿರುವುದಾಗಿ ಗುಪ್ತಚರ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆಮೀರ್​ ಮೊಹಮ್ಮದ್​ ಅಬ್ದುಲ್​ ರೆಹಮಾನ್​ ಅಲ್​ ಮಾವ್ಲಿ ಅಲ್​ ಸಲ್ಬಿ ಐಸಿಸ್​ ನಾಯಕತ್ವದ ಹೊಣೆ ಹೊರಿಸಲಾಗಿದೆ.

    ಅಕ್ಟೋಬರ್​ನಲ್ಲಿ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ಹಿಂದಿನ ನಾಯಕ ಅಬೂ ಬಕರ್​ ಅಲ್​ ಬಾಗ್ದಾದಿಯನ್ನು ಹೊಡೆದುರುಳಿಸಲಾಗಿತ್ತು. ಅಂದಿನಿಂದ ಐಸಿಸ್​ ಹೊಸ ನಾಯಕತ್ವದ ಬಗ್ಗೆ ಚರ್ಚೆಯಾಗಿತ್ತು. ಇದೀಗ ಆ ಹೊಣೆಯನ್ನು ಸಲ್ಬಿ ಹೊತ್ತುಕೊಂಡಿದ್ದಾನೆ.

    ಅಂದಹಾಗೆ ಸಲ್ಬಿ ಐಸಿಸ್​ ಸಂಘಟನೆಯ ಸ್ಥಾಪಕ ಸದಸ್ಯನಾಗಿದ್ದಾನೆ. ಎನ್ಸ್​ಲವೆಮೆಂಟ್​ ಆಫ್​ ಇರಾಕ್​ ಯಜಿದಿ ಮೈನಾರಿಟಿ ಗುಂಪಿನ ನೇತೃತ್ವವನ್ನು ಈತ ವಹಿಸಿದ್ದ. ಜಗತ್ತಿನಾದ್ಯಂತ ನಡೆದ ಉಗ್ರ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಸಲ್ಬಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

    ಬಾಗ್ದಾದಿ ಸತ್ತ ಒಂದು ಗಂಟೆಯ ಬೆನ್ನಲ್ಲೇ ಸಲ್ಬಿ ಹೆಸರನ್ನು ತೆಗೆದುಕೊಳ್ಳಲಾಗಿತ್ತಂತೆ. ಅಲ್ಲದೆ, ಬಾಗ್ದಾದಿ ಸ್ಥಾನಕ್ಕೆ ಸಬು ಇಬ್ರಾಹಿಂ ಅಲ್​ ಹಸಿಮಿ ಅಲ್​ ಖುರೇಷಿ ಹೆಸರು ಕೂಡ ಕೇಳಿಬಂದಿತ್ತು. ಆದರೆ, ಸಂಘಟನೆಯ ಹಿರಿಯ ನಾಯಕರು ಹೆಚ್ಚಿನ ಒಲವು ಸಲ್ಬಿಯೆಡೆಗೆ ತೊರಿದ್ದರಿಂದ ಸಲ್ಬಿಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ ಎಂದು ಗುಪ್ತಚರ ವರದಿ ತಿಳಿಸಿದೆ.

    ಐಸಿಸ್​ ಪಟ್ಟಿಯಲ್ಲಿ ಸಲ್ಬಿಯೊಬ್ಬ ಪ್ರಭಾವಿ ಆದರ್ಶವಾದಿ ಎಂದು ಹೇಳಲಾಗಿದೆ. ತಲ್​ ಅಫಾರ್​ ಪಟ್ಟಣದ ಇರಾಕಿ ಟರ್ಕ್​ಮೆನ್​ ಕುಟುಂಬದಲ್ಲಿ ಜನಿಸಿರುವ ಸಲ್ಬಿ, ಐಸಿಸ್ ನಾಯಕತ್ವ ಪಟ್ಟಿಯಲ್ಲಿ ಕೆಲವೇ ಅರಬ್​ಯೇತರ ನಾಯಕರಲ್ಲಿ ಒಬ್ಬನಾಗಿದ್ದಾನೆ.​ ಈತನನ್ನು ನಾಮ್​ ಡೆ ಗುರ್ರೆ ಹಜಿ ಅಬ್ದುಲ್ಲಾ ಹೆಸರಿನಿಂದಲೂ ಕರೆಯಲಾಗುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts