ISHQ FILM REVIEW : ಯುವ ಸಮುದಾಯದ ತಳಮಳದ ‘ಇಷ್ಕ್’

ಚಿತ್ರ: ‘ಇಷ್ಕ್’
ನಿರ್ದೇಶಕ: ವಿನಯ್ ರಾಘವೇಂದ್ರ
ತಾರಾಗಣ: ರಾಜು ತ್ಯಾಗರಾಜ್, ಶ್ವೇತಾ ಭಟ್, ಚೇತನ್ ದುರ್ಗಾ, ಸೃಜನ್, ಶಶಾಂಕ್ ಮತ್ತಿತರರು.

ಇಂದಿನ ಯುವಕರು ಭರವಸೆ ದಿನಗಳಿಗಾಗಿ ಕಾಯುತ್ತಿರುತ್ತಾರೆ. ಈ ದಿನಗಳಾಗಿ ಕೆಲವೊಂದು ಸಂಗತಿಗಳನ್ನು ಪಡೆದರೆ, ಇನ್ನು ಕೆಲವನ್ನು ಅನಿವಾರ್ಯವಾಗಿ ತ್ಯಾಗ ಮಾಡಬೇಕಾಗುತ್ತದೆ. ಪ್ರೀತಿ, ಸ್ನೇಹ, ಮದುವೆಯಿಂದ ದೂರವಾಗಿ ಒಬ್ಬಂಟಿಯಾಗುತ್ತಾರೆ. ಆದರೆ, ಕೊನೆಗೆ ಜೀವನ ಪಡೆದುಕೊಳ್ಳುವ ತಿರುವಿನಲ್ಲಿ ಎಲ್ಲವೂ ಅನಿವಾರ್ಯವಾಗುತ್ತದೆ ಎಂಬುದನ್ನು ನಿರ್ದೇಶಕ ವಿನಯ್ ರಾಘವೇಂದ್ರ ‘ಇಷ್ಕ್’ ಮೂಲಕ ನಿರೂಪಿಸಿದ್ದಾರೆ.

ಚಿತ್ರದ ಕಥೆಯಿಷ್ಟೇ, ತಂದೆ-ತಾಯಿಯ ಮುದ್ದಿನ ಮಗ ರಾಮ್ (ರಾಜು ತ್ಯಾಗರಾಜ್). ರಾಮ್‌ಗೆ ತಂದೆ-ತಾಯಿಯಷ್ಟೇ ಪ್ರೀತಿಸುವ ಮೂವರು ಸ್ನೇಹಿತರು ಇರುತ್ತಾರೆ. ಈ ಮೂವರದು ಒಂದೊಂದು ವಿಶೇಷತೆ. ಒಬ್ಬನದು ಲವ್ ಬ್ರೇಕಪ್, ಮತ್ತೊಬ್ಬನದು ಲವ್ ಕಮಿಟ್ ಹಾಗೂ ಮೂರನೇಯವ ಸೋಶಿಯಲ್ ಮೀಡಿಯಾ ಗೀಳು. ಈ ಮೂವರು ಗೆಳೆಯರು ಜತೆಗಿರುವಾಗಲಿ ಒಂದು ಘಟನೆ ನಡೆಯುತ್ತದೆ. ಗೆಳೆಯನ ಪ್ರೀತಿ ಮುರಿದುಬೀಳುತ್ತದೆ. ಇದರಿಂದ ಮೂವರು ಮುಂದೆ ಯಾವತ್ತಿಗೂ ಮದುವೆಯಾಗಬಾರದು ಎಂದು ನಿರ್ಧರಿಸಿರುತ್ತಾರೆ. ಈ ಸಮಯದಲ್ಲಿ ರಾಮ್ ಬದುಕಿನಲ್ಲಿ ಘಟನೆ ನಡೆದು ಕೊನೆಗೆ ಮದುವೆ ಆಗಲೇಬೇಕು ಎಂಬ ಮಟ್ಟಕ್ಕೆ ಬರುತ್ತದೆ. ಆಗ ನಾಯಕಿಯೊಂದಿಗೆ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ.

ನಿರ್ದೇಶಕ ವಿನಯ್ ರಾಘವೇಂದ್ರ ಇಂದಿನ ಜಮಾನಕ್ಕೆ ತಕ್ಕಂತೆ ಕಥೆ ಹೇಳಿದ್ದಾರೆ. ಯುವ ಮನಸ್ಸುಗಳ ತಲ್ಲಣಗಳನ್ನು ಅರಿತು ಒಂದು ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ‘ಇಷ್ಕ್’ ಚಿತ್ರದ ತಾರಾಗಣದಲ್ಲಿ ರಾಜು ತ್ಯಾಗರಾಜ್ ಪಾತ್ರಕ್ಕಾಗಿ ನ್ಯಾಯ ದೊರಕಿಸಿಕೊಡುಲು ಯತ್ನಿಸಿದ್ದಾರೆ. ನಟನೆಯಲ್ಲಿ ಇನ್ನಷ್ಟು ಮಾಗಬೇಕಿದೆ. ನಟಿ ಶ್ವೇತಾ ಭಟ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚೇತನ್ ದುರ್ಗಾ, ಶಶಾಂಕ್, ಸೃಜನ್ ಸಾಥ್ ನೀಡಿದ್ದಾರೆ. ಚಿತ್ರದ ಸಂಗೀತ ಚೆನ್ನಾಗಿ ಮೂಡಿಬಂದಿದ್ದು, ಛಾಯಾಗ್ರಹಣಕ್ಕೆ ಇನ್ನಷ್ಟು ಸೊಗಸಾಗಿ ತೋರಿಸುವ ಪ್ರಯತ್ನ ಮಾಡಬಹುದಿತ್ತು.

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…