More

  ಭಾರತದಲ್ಲಿ ಉದ್ಯಮ ನಾಯಕತ್ವದ ಕಾರ್ಯಕ್ರಮಗಳಿಗೆ ಹೊಸ ಸೂಚ್ಯಂಕ ಸೃಷ್ಟಿಸುತ್ತಿರುವ ಈಶ ಇನ್‍ಸೈಟ್ 2022

  ಸದ್ಗುರು, ಗಜೇಂದ್ರಸಿಂಗ್ ಶೆಖಾವತ್, ಸೋನಮ್ ವಾಂಗ್ಛುಕ್, ಥಂಪಿ ಕೋಶಿ, ಕುನಾಲ್ ಬಹ್ಲ್, ಚಂದ್ರಶೇಖರ್ ಘೋಷ್, ಅರವಿಂದ ಮಲ್ಲಿಗೆರಿ ಮತ್ತು ಗೌತಮ್ ಸರೌಗಿ – ಮುಂತಾದ ಯಶಸ್ವಿ ನಾಯಕರು ಮತ್ತು ದಾರ್ಶನಿಕರು ಇರುವ 30ಕ್ಕೂ ಹೆಚ್ಚಿನ ಸದಸ್ಯರ ಸಮಿತಿಯು, ಈ ಕಾರ್ಯಕ್ರಮದ ಭಾಗಿಗಳು. ಅವರ ವೈಯಕ್ತಿಕ ಮತ್ತು ಅವರ ಉದ್ಯೋಗದ ಉನ್ನತಿಯಲ್ಲಿ ಹೂಡಬಹುದಾದಂತಹ ಹಲವಾರು ತಂತ್ರಗಳನ್ನು ಪರಿಚಯಿಸಿದರು.

  ಕೊಯಮತ್ತೂರು: ಈಶ ಲೀಡರ್ ಅಕಾಡೆಮಿಯ ‘ಈಶ ಇನ್‍ಸೈಟ್: ದಿ ಡಿಎನ್‍ಎ ಆಫ್ ಸಕ್ಸಸ್’ನ 11ನೇ ಆವೃತ್ತಿಯು ಅದ್ಭುತವಾಗಿ ಆರಂಭಗೊಂಡಿತು. ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್​ಡಿಸಿ) ಸಿಇಒ ತಂಪಿ ಕೋಶಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ನಾವು ತಿಳಿದಿರುವ ಇಂದಿನ ಇ-ಕಾಮರ್ಸ್ ಮುಂದಕ್ಕೆ ಅರ್ಥಹೀನವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ವಾಣಿಜ್ಯದ ಪರಿವರ್ತನೆಗೆ ಪ್ರತಿಯೊಂದು ವಿಧದ ಮಾರಾಟಗಾರರೂ ತಮ್ಮ ಉತ್ಪನ್ನ/ವಸ್ತುವನ್ನು ಸಾಮಾನ್ಯ ಶಿಷ್ಟಾಚಾರ ಅನುಸರಿಸಿ ತೆರೆದ ಅಂತರ್ಜಾಲ(ಓಪನ್ ನೆಟ್‍ವರ್ಕ್) ದಲ್ಲಿ ಕಾಣಿಸಿಕೊಳ್ಳುವಂತೆ ಮಾಡಲು ಸಾಧ್ಯವಾಗಬೇಕು ಎಂಬುದು ನನ್ನ ಕನಸು ಎಂದು ವಿವರಿಸಿದರು.

  ಕೊಯಮತ್ತೂರಿನ ಈಶ ಯೋಗ ಕೇಂದ್ರದ ಆಶ್ರಯದಲ್ಲಿ ನಡೆದಿರುವ ಈಶ ಇನ್​ಸೈಟ್​ 2022ರ ಸಂದರ್ಭಕ್ಕೆ ಕಳೆಗಟ್ಟಿದ ಈಶ ಸಂಸ್ಥೆಯ ಸಂಸ್ಥಾಪಕ ಸದ್ಗುರು ಅವರು, ತಮಗೆ ಎದುರಾಗುವ ಪರಿಸ್ಥಿತಿಗಳೊಂದಿಗೆ ಸ್ವಲ್ಪ ಅಂತರ ಇರಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.

  ನಿಮ್ಮ ಉದ್ಯೋಗವನ್ನು ನಡೆಸಲು ನೀವು ಒಂದು ರೀತಿಯಲ್ಲಿ ’ಮುಕ್ತಿಯ’ ಸ್ಥಿತಿಯಲ್ಲಿರಬೇಕು – ನಿಮ್ಮನ್ನು ಯಾವುದೂ ಸೋಕಬಾರದು. ಆದರೆ ನೀವು ಅದರಲ್ಲಿ ತೊಡಗಿರಬೇಕು. ನೀವು ಮಾತ್ರ ಎಲ್ಲಿಯೂ ಸಿಲುಕಿಕೊಳ್ಳಬಾರದು ಎಂದು ಸದ್ಗುರು ವಿವರಿಸಿದರು. ಮಾಡುತ್ತಿರುವ ಕಾರ್ಯದಲ್ಲಿ ಈ ಅಂತರವನ್ನು ನೀವು ತಂದುಕೊಳ್ಳದಿದ್ದರೆ ವಾಸ್ತವವನ್ನು ಅದು ಇರುವಂತೆ ನೋಡುವುದು ಸಾಧ್ಯವಾಗುವುದಿಲ್ಲ. ಇಲ್ಲದಿದ್ದರೆ, ನಾವು ಸಮಯದ ಬುದ್ಧಿವಂತಿಕೆಯ ಮತ್ತು ಅನೇಕ ಬಾರಿ ದಬ್ಬಾಳಿಕೆಯ ಪರಿಣಾಮವಾಗಿರುತ್ತೇವೆ ಎಂದು ಅಭಿಪ್ರಾಯಪಟ್ಟರು.

  ಕೇಂದ್ರ ಸರ್ಕಾರದ ಉದ್ದೇಶವು ಜಲಜೀವನ್ ಅಭಿಯಾನದ ಮೂಲಕ ಭಾರತದ ಸಮಗ್ರ ಗ್ರಾಮೀಣ ಜನರ ವಸತಿಗಳಿಗೆ ಕುಡಿಯುವ ನೀರು ಒದಗಿಸಲು ’ಕೊಳಾಯಿ’ ವ್ಯವಸ್ಥೆಯನ್ನು 2024ರ ಒಳಗೆ ಪೂರೈಸುವ ವಿಧಾನದ ಬಗ್ಗೆ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿವರಿಸಿದರು.

  ಜಲ ಕ್ಷೇತ್ರದಲ್ಲಿ 2019ರಿಂದ 2024ರವರೆಗೆ ಭಾರತ ಉದ್ದೇಶಿಸಿರುವ 210 ಬಿಲಿಯನ್ ಡಾಲರ್ ಹೂಡಿಕೆ ಪ್ರಪಂಚದಲ್ಲೇ ಅತ್ಯಧಿಕ ಎಂದ ಅವರು, ‘2019ರಲ್ಲಿ ನಲ್ಲಿ ನೀರು ವ್ಯವಸ್ಥೆ ಹೊಂದಿರುವ ಭಾರತದ ಕುಟುಂಬಗಳು ಶೇ. 16 ಮಾತ್ರವಿದ್ದು, ಈಗ ಅದು ಶೇ. 54ಕ್ಕೆ ಬೆಳೆದಿದೆ ಎಂದರು. ಗ್ರಾಮೀಣ ಪ್ರದೇಶಗಳ ವ್ಯವಸ್ಥಿತ ನೀರು ಕುರಿತು ಮಂತ್ರಾಲಯವು ಗ್ರಾಮೀಣ ಜನತೆಯನ್ನು ಸೇರಿಸಿಕೊಂಡು ಹೊಸ ತಂತ್ರಗಾರಿಕೆ ಬಳಸಿ ಪರಿಹಾರ ಕಂಡುಕೊಳ್ಳುವಂತೆ ಪ್ರೋತ್ಸಾಹಿಸುತ್ತಿದೆ. ಪ್ರತಿ ಹಳ್ಳಿಯಲ್ಲೂ ನೀರು ಮತ್ತು ಸ್ವಚ್ಛತೆ ವ್ಯವಸ್ಥೆಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದರು.

  ಮಹಿಳೆಯರಿಗೆ ತರಬೇತಿ ನೀಡಿ ಅವರೇ ಎಲ್ಲ ಮೂಲ 12 ಮಟ್ಟಗಳಲ್ಲಿ ಪರೀಕ್ಷೆಗಳನ್ನು ಮಾಡಿ ನೀರಿನ ಗುಣಮಟ್ಟ ಪರೀಕ್ಷಿಸಲು ಕೈ ಉಪಕರಣಗಳನ್ನು ಕೊಡಲಾಗುತ್ತಿದೆ. ತಮ್ಮ ಹಳ್ಳಿಯಲ್ಲಿ ಆಗಾಗ ನೀರಿನ ಪರೀಕ್ಷೆ ಮಾಡಿ ಆನ್​ಲೈನ್​ ಮೂಲಕ ಮಾಹಿತಿಯನ್ನು ನನ್ನ ಕಚೇರಿಗೆ ಕಳುಹಿಸಲಾಗುವುದು. ನಾನು ಹೇಳುತ್ತಿರುವ ಸಂಪೂರ್ಣ ಅಭಿಯಾನವು ಸಾರ್ವಜನಿಕ ವಲಯದ್ದಾಗಿದೆ ಎಂದು ಶೆಖಾವತ್ ವಿವರಿಸಿದರು.

  ಈಶ ಇನ್​​ಸೈಟ್​​ 2022ರ ಪ್ರಮುಖ ಭಾಷಣಕಾರ ಹಿಮಾಲಯನ್ ಇನ್​​ಸ್ಟಿಟ್ಯೂಟ್​ ಆಫ್ ಆಲ್ಟರ್ನೇಟಿವ್ಸ್ ಲಡಾಖ್ (ಎಚ್​ಐಎಎಲ್​) ನಿರ್ದೇಶಕ ಸೋನಮ್ ವಾಂಗ್ ಛುಕ್, ಶಿಕ್ಷಣದಲ್ಲಿ ಹೊಸಪದ್ಧತಿಗಳಿಗೆ ಮತ್ತು ಆವಿಷ್ಕಾರಗಳಿಗೆ ಹೆಸರಾಗಿದ್ದು, ಉದ್ಯಮಗಾರಿಕೆಗೆ ನಿಜವಾದ ಸರಳ ಅರ್ಥ ತಿಳಿಸಿದರು.

  ಉದ್ಯಮಿಗಳು ಕೇವಲ ದುಡ್ಡು ಮಾಡುವವರಲ್ಲ. ಉದ್ಯಮಿಗಳು ಸಮಸ್ಯೆಗೆ ಪರಿಹಾರ ಕೊಡವವರು. ನೀವು ಸಮಸ್ಯೆಯ ಪರಿಹಾರಕರಲ್ಲವಾದರೆ ನೀವು ಉದ್ಯಮಿಗಳೇ ಅಲ್ಲ. ಮತ್ತೆ, ನೀವು ಹಣ ಗಳಿಸುತ್ತಿದ್ದರೆ, ಪರಿಹಾರ ಒದಗಿಸುತ್ತಿದ್ದರೆ ಸಹ ನೀವು ಉತ್ತಮ ಉದ್ಯಮಿಗಳಲ್ಲ, ನೀವು ಬೇರೆಯವರಿಗೆ ನಿಮ್ಮಂತೆಯೇ ಮುಂದುವರಿಯುವಂತೆ ಸಹಾಯ ಮಾಡಬೇಕು. ಆಗ ನೀವು ನಿಜಾರ್ಥದಲ್ಲಿ ಉದ್ಯಮಿಗಳು ಎಂದರು.

  ’ಬಂಧನ್’ ಬ್ಯಾಂಕಿನ ಸಿಇಒ ಮತ್ತು ಎಂಡಿ ಚಂದ್ರಶೇಖರ್ ಘೋಷ್ ಬ್ಯಾಂಕ್ ರಚಿಸುವಲ್ಲಿ ಗಳಿಸಿದ ಮೂಲಭೂತ, ಪಾರಂಪರಿಕ ಜ್ಞಾನವನ್ನು ಹಂಚುತ್ತ ಭಾಗಿಗಳನ್ನು ವಿಸ್ಮಯಗೊಳಿಸಿದರು. ಭಾರತವು ದೊಡ್ಡ ರಾಷ್ಟ್ರವಾಗಿರುವುದರಿಂದ, ನೀವು ಅದೇ ಮಟ್ಟದಲ್ಲಿ ತೊಡಗಿಸಿಕೊಳ್ಳದಿದ್ದರೆ ರಾಷ್ಟ್ರದ ಮೇಲೆ ಪರಿಣಾಮವೇ ಆಗುವುದಿಲ್ಲ. ಆದ್ದರಿಂದ, ನಾನು ನನ್ನ ಮಟ್ಟವನ್ನು ಹೆಚ್ಚಿಸಬೇಕಾದರೆ, ನಾನು ಮಾಡಬೇಕಾದ ಮೊದಲ ಕೆಲಸವೆಂದರೆ ಕಾರ್ಯವನ್ನು ಸರಳಗೊಳಿಸುವುದು. ವ್ಯವಸ್ಥೆಯನ್ನು, ಉತ್ಪನ್ನವನ್ನು ಸರಳೀಕರಿಸುವುದು; ಅದು ನನ್ನ ಗ್ರಾಹಕರಿಗೆ, ಬಹುತೇಕ ಅನಕ್ಷರಸ್ಥ ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು ಎಂದು ಹೇಳಿದರು.

  ’ಗೋಕಲರ್ಸ್’ನ ಸ್ಥಾಪಕ ಮತ್ತು ಸಿಇಒ ಗೌತಮ್ ಸೆರಓಗಿ ಮಾತನಾಡಿ, ತಾವು ಸಾಂಕ್ರಾಮಿಕದ ಅವಧಿಯಲ್ಲೇ ಉತ್ಪನ್ನದ ವ್ಯವಸ್ಥೆ ವಿಭಿನ್ನವಾಗಿಸದೆಯೇ ಹೇಗೆ ಗೋಕಲರ್ಸ್ಅನ್ನು ಐಪಿಒ ಮಾರ್ಗಕ್ಕೆ ಒಯ್ಯಲಾಯಿತು ಎಂಬುದನ್ನು ವಿವರಿಸಿದರು.

  ಹೊಸ ವ್ಯವಸ್ಥೆಗೆ ತೆರೆದುಕೊಳ್ಳದಿರುವುದಕ್ಕೆ ಒಂದು ಕಾರಣವೆಂದರೆ, ಇದೇ ವರ್ಗದಲ್ಲಿ ಬೆಳವಣಿಗೆ ಕಂಡಿರುವುದು, ಇದರ ಮಾರುಕಟ್ಟೆಯ ಶೇ. 8ಕ್ಕಿಂತ ಸ್ವಲ್ಪ ಕಡಿಮೆ ಭಾಗ ನಮ್ಮದಿದೆ. ಒಂದನ್ನೇ ಮಾಡಿದರೂ, ಅದನ್ನೇ ದೊಡ್ಡದಾಗಿ ಮಾಡುವುದು ನಮ್ಮ ಧ್ಯೇಯ ಅವರು, ಹೇಳಿದಂತೆ ಹತ್ತು ವರ್ಷಗಳೊಳಗೇ 6,000 ಕೋಟಿ ರೂ. ಮೌಲ್ಯದ ಉದ್ಯಮ ಬೆಳೆಸಿರುವುದನ್ನು ಉದಾಹರಿಸಿದರು.

  ಏಸ್‌ವೆಕ್ಟರ್ ಗ್ರೂಪ್ (ಸ್ನಾಪ್‌ಡೀಲ್, ಯುನಿಕಾಮರ್ಸ್ ಮತ್ತು ಸ್ಟೆಲ್ಲಾರೊ) ಸಹಸಂಸ್ಥಾಕ ಕುನಾಲ್ ಬಹ್ಲ್​ ಮಾತನಾಡಿ, ಜನರ ಆಕಾಂಕ್ಷೆಗಳನ್ನು ಕಂಡುಕೊಂಡು, ದೇಶದ ಧ್ಯೇಯಗಳಿಗೆ ಹೊಂದಿಸಿಕೊಂಡು ಉದ್ಯಮಿಗಳನ್ನು ಪ್ರಚೋದಿಸುತ್ತ ಸಮಸ್ಯೆಗಳಿಗೆ ಗಮನ ನೀಡಬೇಕು ಎಂದು ಹೇಳಿದರು.

  ಮುಂದಿನ 20 ವರ್ಷಗಳಲ್ಲಿ, ಜಗತ್ತಿನಾದ್ಯಂತ ಖರೀದಿಸಿರುವ ಸಾಫ್ಟ್‌ವೇರ್ ವಸ್ತುಗಳು ‘ಮೇಡ್ ಇನ್ ಇಂಡಿಯಾ’ ಎನ್ನಿಸಿಕೊಳ್ಳುತ್ತವೆ ಎಂದು ಭವಿಷ್ಯ ನುಡಿದರು. ಆಗ ನಮ್ಮೆಲ್ಲರಿಗೂ ಅತೀವ ಹೆಮ್ಮೆ ಆಗುವುದು. ಪ್ರಪಂಚದಲ್ಲಿ ಮತ್ತಾವ ದೇಶವೂ ನಮ್ಮಷ್ಟು ಡಿಜಿಟೈಸ್ ಆಗಿಲ್ಲ. ಯುಪಿಐ ಅಥವಾ ಒಎನ್​ಡಿಸಿ, ಆಧಾರ್, ಅಕೌಂಟ್ ಅಗ್ರಿಗೇಟರ್ ಇಂಡಿಯಾ ಸ್ಟಾಕ್, ಇಂಡಿಯಾ ಹೆಲ್ತ್ ಸ್ಟಾಕ್ – ಇವು ಯಾವುದೂ ಭಾರತದ ಹೊರಗೆ ಯಾರಿಗೂ ತಿಳಿಯದಿರುವ ಸಂಗತಿಗಳು. ನಮಗೆ ಇದಿನ್ನೂ ಆರಂಭ. ಭವಿಷ್ಯದ ಬಗ್ಗೆ ಉತ್ಸಾಹ ಮತ್ತು ಜೀವಂತಿಕೆ ಇದೆ. ಈ ಕ್ಷಣ ಭಾರತದಲ್ಲಿ ಜೀವಿಸಿರುವುದು ಎಂತಹ ಭಾಗ್ಯ ಎಂದು ಅವರು ಅಭಿಪ್ರಾಯ ಪಟ್ಟರು.

  ಏಖಸ್​ (Aequs) ಛೇರ್ಮನ್ ಮತ್ತು ಸಿಇಒ ಅರವಿಂದ್ ಮೆಲ್ಲಿಗೇರಿ ಅವರು ವೈಮಾನಿಕ ಉತ್ಪಾದನಾ ಕ್ಷೇತ್ರವು ಕರ್ನಾಟಕದ ಬೆಳಗಾವಿಯಲ್ಲಿ ಬೆಳೆದಿರುವ ಕಥೆಯನ್ನು ಹೇಳಿ ಭಾಗಿಗಳನ್ನು ಮಂತ್ರಮುಗ್ಧರಾಗಿಸಿದರು.

  ಪ್ರತಿ ವಿಮಾನದಲ್ಲೂ ಪ್ರಪಂಚದಾದ್ಯಂತ ಪ್ರಯಾಣಿಕರಿದ್ದಾರೆ, ಉದ್ಯಮದ ಉಡಾಣವಾಗಲೀ, ವ್ಯಾಪಾರೀ ಉಡಾಣವಾಗಲೀ, ಅವುಗಳಲ್ಲಿ ಬೆಳಗಾವಿಯ ಭಾಗಗಳಿವೆ. ಪ್ರತಿ 48 ಗಂಟೆಗಳಿಗೊಮ್ಮೆ ಟೊಲೋಸ್​​ನಲ್ಲಿನ ಏರ್ ಬಸ್ ಅಸ್ಸೆಂಬ್ಲಿ ಲೈನ್​ಗೆ ನಾವು ನೇರವಾಗಿ ಉತ್ಪನ್ನ ವಸ್ತು ತಲುಪಿಸುತ್ತೇವೆ. ಫ್ರ್ಯಾನ್ಸ್​​ಗೆ ಲ್ಯಾಂಡಿಂಗ್ ಗೇರ್ ತಯಾರಿಸುತ್ತೇವೆ. ಬಹುತೇಕ ಆಕ್ಚುಯೇಟರ್ಸ್ ನಾವೇ ತಯಾರಿಸುವಂಥವು. ವಿಮಾನದ ರೆಕ್ಕೆಗಳು ನಾವೇ ತಯಾರಿಸಿದುದು. ನಾವು ಮುಚ್ಚಿದರೆ ಅವರು ಮುಚ್ಚಿದಂತೆ, ಇದೊಂದು ಪೂರ್ಣ ಪರಿಸರ ವ್ಯವಸ್ಥೆ ಇದ್ದಂತೆ ಎಂದರು.

  ಈಶ ಇನ್‍ಸೈಟ್ 2022ರ ಈಶ ಲೀಡರ್​​ಷಿಪ್​ ಅಕಾಡೆಮಿ ನಡೆಸಿರುವ ನಾಲ್ಕು ದಿನಗಳ ಉದ್ಯಮ ನಾಯಕತ್ವ ಕಾರ್ಯಕ್ರಮವು ಪ್ರಸಿದ್ಧ ವ್ಯಕ್ತಿಗಳನ್ನು ಹೊಂದಿದ್ದು, ಅವರು ತಮ್ಮ ಅನುಭವ ಮತ್ತು ಒಳನೋಟಗಳನ್ನು ಹಂಚಿಕೊಂಡರು. ಇನ್ನೂರು ಉದ್ಯಮಿಗಳು ಈ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇಪ್ಪತ್ತಕ್ಕೂ ಅಧಿಕ ಸಂಪನ್ಮೂಲದ ನಾಯಕರು – ನುರಿತ ಉದ್ಯಮಿಗಳು, ವಿವಿಧ ಕೈಗಾರಿಕಾ ಕ್ಷೇತ್ರದಿಂದ ಬಂದವರು ತಮ್ಮ ಜ್ಞಾನವನ್ನು ಹಂಚಿಕೊಂಡರು.

  ಹಿಂದಿನ ದಶಕದಲ್ಲಿ “ಈಶ ಇನ್‍ಸೈಟ್: ದಿ ಡಿಎನ್‍ಎ ಆಫ್ ಸಕ್ಸಸ್” ಪ್ರಪಂಚದಲ್ಲಿಯೇ ಒಂದು ಪ್ರಸಿದ್ಧವಾದ ಆಕರ್ಷಕ ಉದ್ಯಮ ನಾಯಕತ್ವದ ಕಾರ್ಯಕ್ರಮವಾಗಿದೆ. ಹಿಂದಿನ ಕಾರ್ಯಕ್ರಮಗಳಲ್ಲಿ ನುರಿತ ಉದ್ಯಮಿಗಳಾದ ರತನ್ ಟಾಟಾ, ಎನ್.ಆರ್.ನಾರಾಯಣ್ ಮೂರ್ತಿ. ಕಿರಣ್ ಮುಜುಮ್ದಾರ್, ಜಿ,ಎಮ್. ರಾವ್, ಕೆ.ವಿ. ಕಾಮತ್, ಅಜಯ್ ಪೀರಾಮಲ್, ಹರ್ಷ ಮರಿವಾಲ, ಅರುಂಧತಿ ಭಟ್ಟಾಚಾರ್ಯ ಭವೀಶ್ ಅಗ್ಗರ್ವಾಲ್, ಪವನ್ ಗೊಯೆಂಕಾ ಮುಂತಾದವರು ಭಾಗಿಗಳ ಜೊತೆ ತಮ್ಮ ದಶಕಗಳ ವಿವೇಕ ಮತ್ತು ಅನುಭವವನ್ನು ಹಂಚಿಕೊಂಡಿದ್ದರು.

  ಭಾರತದಲ್ಲಿ ಉದ್ಯಮ ನಾಯಕತ್ವದ ಕಾರ್ಯಕ್ರಮಗಳಿಗೆ ಹೊಸ ಸೂಚ್ಯಂಕ ಸೃಷ್ಟಿಸುತ್ತಿರುವ ಈಶ ಇನ್‍ಸೈಟ್ 2022

  ನಿಮ್ಮ ದಾಖಲೆಗಳನ್ನು ನೀಡಿ ಬೇರೆ ಯಾರೋ ಸಿಮ್​ ಪಡೆದಿರಬಹುದು!; ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ..

  ಪರಪುರುಷನ ಮೋಹಕ್ಕಾಗಿ ಗಂಡನನ್ನೇ ಕೊಲ್ಲಿಸಿದ ಪತ್ನಿ; ಶವ ಮೋರಿಗೆ ಹಾಕಿ, ಅಕ್ಕ-ತಮ್ಮ ಅಂತ ಪೊಲೀಸರಿಗೇ ಸುಳ್ಳು ಹೇಳಿದ್ರು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts